ಕೋನಹಳ್ಳಿ: ಭಾವೈಕ್ಯತೆಯ ಸಂಕೇತವಾದ ಶ್ರೀ ಹಜರತ್​ ಸೈಯದ್​ ಭಾಶಾ ಉರಸ್​ ಇಂದು ಆರಂಭ.

ವಡಗೇರಾ ತಾಲೂಕಿನ ಕೋನಹಳ್ಳಿ ಗ್ರಾಮದಲ್ಲಿರುವ ಶೀ ಹಜರತ್​ ಸೈಯದ್​ ಭಾಶಾ ರವರ ದರ್ಗಾ.
ವಡಗೇರಾ ತಾಲೂಕಿನ ಕೋನಹಳ್ಳಿ ಗ್ರಾಮದಲ್ಲಿರುವ ಶೀ ಹಜರತ್​ ಸೈಯದ್​ ಭಾಶಾ ರವರ ದರ್ಗಾ.
Published on
ವಡಗೇರಾ: ತಾಲೂಕಿನ ಕೋನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಹಾಗೂ ಭಾವೈಕ್ಯತೆಯ ಸಂಕೇತವಾದ ಶ್ರೀ ಹಜರತ್​ ಸೈಯದ್​ ಭಾಶಾ ಉರಸ್​ ಇದೇ ಏಪ್ರಿಲ್​ 07 ರಂದು ಆರಂಭವಾಗಲಿದೆ ಎಂದು ದರ್ಗಾ ಕಮಿಟಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ವ?ರ್ದಂತೆ ಈ ವ?ರ್ವು ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಇದೇ ಎಪ್ರೀಲ್​ 07 ರಂದು ಗಂಧದ ಸಮಯದಲ್ಲಿ ದರ್ಗಾದ ಪೂಜಾರಿಗಳು ಹಾಗೂ ಗ್ರಾಮದ ಗಣ್ಯರು ಕೂಡಿಕೊಂಡು ಪಾದಯಾತ್ರೆಯ ಮೂಲಕ ಭೀಮಾ ನದಿಗೆ ತೆರಳಿ ಗಂಗಾ ಸ್ನಾನ ಮುಗಿಸಿಕೊಂಡು ಬರುವಾಗ ಕಂದಳ್ಳಿ ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹೇಳಿಕೆ ನಡೆಯುತ್ತದೆ. ಅದಾದ ನಂತರ ಬೆಳಗಿನ ಜಾವಾ ಕೋನಹಳ್ಳಿ ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಬಂದು ಪೂಜೆಯನ್ನು ಸಲ್ಲಿಸಿದ ನಂತರ ದರ್ಗಾದ ಪೂಜಾರಿ ಹೇಳಿಕೆಯನ್ನು ಹೇಳಿದ ನಂತರ ಪಾದಯಾತ್ರೆಯು ದರ್ಗಾವನ್ನು ತಲುಪುತ್ತದೆ.
ಶೀ ಹಜರತ್​ ಸೈಯದ್​ ಭಾಶಾ ರವರ ಗದ್ದುಗೆಯನ್ನು ಪು?್ಪಗಳಿಂದ ಸಿಂಗರಿಸಿ ಸುಗುಂಧ ದ್ರವ್ಯವನ್ನು ಸಿಂಪಡಿಸಲಾಗುವದು. ಏಪ್ರಿಲ್​ 09 ರಂದು ಚಿರಾಗ್​(ದೀಪ) ಸಮಯದಲ್ಲಿ ಭಕ್ತರು ತಾವು ಬೇಡಿಕೊಂಡ ಹರಕೆಯನ್ನು ದರ್ಗಾಕ್ಕೆ ಅರ್ಪಿಸುತ್ತಾರೆ. ಅಂದೇ ರಾತ್ರಿ ಕವ್ಹಾಲಿ ಕಾರ್ಯಕ್ರಮ ನಡೆಯುತ್ತದೆ
ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ನಮ್ಮ ರಾಜ್ಯದಲ್ಲಾ?್ಟೇ ಅಲ್ಲಾ ಪಕ್ಕದ ರಾಜ್ಯಗಳಾದ ಆಂಧ್ರ,ತೆಲಂಗಾಣ, ಮಹಾರಾ?್ಟ$ ದಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ ಎಂದು ದರ್ಗಾ ಕಮಿಟಿಯು ಹೇಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net