ಪೌರಕಾರ್ಮಿಕರಿಗೆ ವೇತನ ನೀಡದ ಕೋಲಾರ ನಗರಸಭೆ Municipal Council
ಪೌರಕಾರ್ಮಿಕರಿಗೆ ವೇತನ ನೀಡದ ಕೋಲಾರ ನಗರಸಭೆ Municipal Council
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೆಲಸ ಬಿಟ್ಟು ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ
ಮತ್ತೆ ಎದುರಾಗಿಲಿದೆ ಕಸದ ಸಮಸ್ಯೆ?
ಕೋಲಾರ: ನಗರಸಭೆಯ ಹೊರಗುತ್ತಿಗೆ ಪೌರ ಕಾರ್ಮಿಕರು 9 ತಿಂಗಳ ವೇತನ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂದ ನೇತೃತ್ವದಲ್ಲಿ ಸೋಮವಾರ ನಗರಸಭೆಯೆದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.Kolar Municipal Council
ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ವಾತನಾಡಿ, ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರ್ಯಾಕ್ಟರ್, ಆಟೋಗಳಿಗೆ ತುಂಬುವ ಲೋಡರ್, ಕಸದ ವಾಹನ ಚಾಲಕರು ಮತ್ತು ಒಳಚರಂಡಿಗಳಲ್ಲಿ ಮಲ-ಮೂತ್ರ ಸ್ವಚ್ಛ ವಾಡುವವರು, ಯುಜಿಡಿ ಸಿಬ್ಬಂದಿ, ಕಸ ವಿಂಗಡಿಸುವವರು. ಲ್ಯಾಂಡ್ ಫೀಲ್ಡ್ ಕಾರ್ಮಿಕರಿಗೆ ಸುವಾರು 9 ತಿಂಗಳ ವೇತನ ಬಾಕಿ ಇದ್ದು, ವೇತನವನ್ನು ತಕ್ಷಣ ಪಾವತಿ ವಾಡಬೇಕೆಂದು ಆಗ್ರಹಿಸಿದರು.
ಕೋಲಾರದ ನೈರ್ಮಲ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಇವರಿಗೆ ಸಕಾಲಕ್ಕೆ ವೇತನ ನೀಡದೇ ದುಡಿಸಿಕೊಳ್ಳುತ್ತಿರುವುದು ಸರಿಯಲ್ಲ. ತಿಂಗಳು ಪೂರ್ತಿ ದುಡಿದರೂ ವೇತನ ಕೈಗೆ ಬರದಿರುವುದರಿಂದ, ವಾರದ ಬಡ್ಡಿಗೆ ಸಾಲ ವಾಡಿ, ಕುಟುಂಬ ೋಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಸೂಚನೆಯಂತೆ ಪ್ರತಿ ತಿಂಗಳು ವೇತನವನ್ನು ಕಡ್ಡಾಯವಾಗಿ ಬಿಡುಗಡೆ ವಾಡಬೇಕಾಗಿದ್ದರೂ ತಿಂಗಳಾನುಗಟ್ಟಲೇ ಬಿಡುಗಡೆ ವಾಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವರು ಮನವಿ ವಾಡಿದಾಗ ಸಮರ್ಪಕವಾಗಿ ಸ್ಪಂದಿಸದೇ, ಇಷ್ಟವಿದ್ದರೇ ವಾಡಿ, ಇಲ್ಲವೇ ಕೆಲಸ ಬಿಟ್ಟು ಹೋಗಿ ಎಂದು ಬೇಜಾವಾಬ್ದಾರಿಯಾಗಿ ವಾತನಾಡುವುದು ಖಂಡನೀಯ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ವಾತನಾಡಿ, ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಗುರುತಿನ ಚೀಟಿ, ಭವಿಷ್ಯ ನಿಧಿ ಮತ್ತು ಇಎಸ್‌ಐ ಹಣ ಪಾವತಿ ವಾಡುತ್ತಿರುವ ಬಗ್ಗೆ ವಾಹಿತಿ ನೀಡಬೇಕು. ಕಾರ್ಮಿಕರಿಗೆ ವರ್ಷಕ್ಕೆ ಎರಡು ಜತೆ ಸಮವಸ, ಗ್ಲೌಸ್, ವಾಸ್ಕ್, ಗಮ್ ಬೂಟ್ಸ್ ಸೇರಿ ಸುರಕ್ಷಾ ಕಿಟ್ ನೀಡಬೇಕು. ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜಾದಿನ ನೀಡಬೇಕು. ಎರಡು ತಿಂಗಳಿಗೊಮ್ಮೆ ಕಾರ್ಮಿಕರ ಕುಂದು ಕೊರತೆ ಸಭೆ ನಡೆಸಬೇಕು. ಸೇವೆಯಲ್ಲಿದ್ದ ಸಂದರ್ಭದಲ್ಲಿಯೇ ಮೃತಪಟ್ಟರೇ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಖಜಾಂಚಿ ಎ.ಬಿ. ಕೃಷ್ಣಪ್ಪ ವಾತನಾಡಿ, ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯ ಕೊಡಿಸಲು ಕ್ರಮ ಕೈಗೊಳ್ಳಬೇಕು. ನೇರ ಪಾವತಿ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ರವಿಕುವಾರ್ ಹಾಗೂ ದಿನೇಶ್ ಎಂಬ ಕಾರ್ಮಿಕರು ಇತ್ತೀಚೆಗೆ ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಖಾಯಂ ಉದ್ಯೋಗ ನೀಡಿ, ಪರಿಹಾರ ಧನ ಬಿಡುಗಡೆ ವಾಡಬೇಕು ಎಂದರು.
ನಗರಸಭೆ ಸದಸ್ಯ ಮಂಜುನಾಥ್, ಪೌರ ಕಾರ್ಮಿಕರ ಸಂದ ಮುಖಂಡರಾದ ಜಿ. ಮಂಜುನಾಥ್, ಕಿರಣ್ ಕುವಾರ್, ಜಗದೀಶ್, ರಾಮ, ಆನಂದ್, ನರೇಶ್, ರಾಜೇಶ್, ಪ್ರಶಾಂತ್, ಲೋಕೇಶ್, ನಾಗಮಣಿ, ರೂಪಾ, ವನಿತಾ, ಧನಲಕ್ಷ್ಮೀ ಮುಂತಾದವರು ಇದ್ದರು.