ಕೊಕ್ಕಂಡ, ಪುತ್ತರೀರ ತಂಡಗಳು ಮುನ್ನಡೆ

ನಾಪೋಕ್ಲು ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೊಡವ ಕೌಟುಂಬಿಕ ಹಾಕಿಯ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು.
ನಾಪೋಕ್ಲು ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೊಡವ ಕೌಟುಂಬಿಕ ಹಾಕಿಯ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು.
Published on
ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಕೊಕ್ಕಂಡ, ಪುತ್ತರೀರ, ಚೊಟ್ಟೆಯನಮಾಡ, ಬಡುವಮಂಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.
ಮಾದಂಡ ಮತ್ತು ಕೊಕ್ಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಕ್ಕಂಡ 4-0 ಅಂತರದ ಗೆಲುವು ಸಾಧಿಸಿತು. ಮೊಣ್ಣಂಡ ಮತ್ತು ಪುತ್ತರೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುತ್ತರೀರ ತಂಡ ಟೈಬ್ರೇಕರ್ ನಲ್ಲಿಗೆಲುವು ಸಾಧಿಸಿತು. ಚೊಟ್ಟೆಯನಮಾಡ ತಂಡವು ತಾತಂಡ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದರೆ ಬಡುವಮಂಡ ತಂಡವು ಬಡುವಂಡ ತಂಡದ ವಿರುದ್ಧ 7-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಪೂಲಂಡ ತಂಡವು ಪಾಲಚಂಡ ವಿರುದ್ಧ ನಡೆದ ಸ್ಪರ್ಧೆಯಲ್ಲಿ 0-4 ಅಂತರದಿಂದ ಸೋಲನ್ನನುಭವಿಸಿತು. ಚಂದುರ ಮತ್ತು ಮೂಕಳೇರ ನಡುವೆ ನಡೆದ ಪಂದ್ಯದಲ್ಲಿ ಚಂದುರ 2-1 ಅಂತರದಿಂದ ಗೆಲುವು ಸಾಧಿಸಿತು. ಚಂದಪಂಡ ಮತ್ತು ಬಲ್ಲಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲಚಂಡ 4-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮರುವಂಡ ತಂಡ ಅಯ್ಯಮಂಡ ವಿರುದ್ಧ ಸ್ಪರ್ಧಿಸಿತು .ಮರುವಂಡ 3- 2 ಅಂತರದಿಂದ ಅಯ್ಯಮಂಡ ವಿರುದ್ಧ ಗೆಲುವು ಸಾಧಿಸಿತು. ಹಂಚಟ್ಟಿರ ಮತ್ತು ಅಲ್ಲು ಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲ್ಲುಮಾಡ 1-0 ಅಂತರದ ಗೆಲುವು ಸಾಧಿಸಿತು. ಬಾರಿಯಂಡ ಮತ್ತು ಬಲಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾರಿಯಂಡ 6-0 ಅಂತರದ ಭರ್ಜರಿ ಜಯ ಸಾಧಿಸಿತು. ಬೈರಜಂಡ ಮತ್ತುಪೊನ್ನಚಂಡ ತಂಡಗಳ ನಡೆದ ಪಂದ್ಯದಲ್ಲಿ ಪೊನ್ನಚಂಡ ಜಯ ಸಾಧಿಸಿತು. ಕುಟ್ಟಂಡ ತಂಡವು ವಾಕ್ ಓವರ್‌ನಲ್ಲಿ ಮುಂದಿನ ಸುತ್ತು ಪ್ರವೇಶಿಸಿತು. ಮಾಚಂಗಡ ಮತ್ತು ಕುಟ್ಟೆಟ್ಟಿರ ತಂಡಗಳ ನಡೆದ ಪಂದ್ಯದಲ್ಲಿ ಮಾಚಂಗಡ 3-0 ಅಂತರದ ಗೆಲುವು ಸಾಧಿಸಿತು. ಅಜ್ಜಿನಿಕಂಡ ಮತ್ತು ಬಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಬಟ್ಟೀರತಂಡ ಜಯ ಸಾಧಿಸಿತು.
ಮೈದಾನ ಮೂರರಲ್ಲಿ ನಡೆದ ಪಂದ್ಯದಲ್ಲಿ ಬೊಟ್ಟಂಗಡ ಕೆಚೆಟ್ಟಿರ ವಿರುದ್ಧ 2-0 ಅಂತರದಿಂದ, ಅಚ್ಚಪಂಡ ಕೂಪದಿರ ವಿರುದ್ಧ 4-1 ಅಂತರದಿಂದ, ಅಳಮೆಂಗಡ ಚೆಟ್ಟಂಗಡ ವಿರುದ್ಧ 6-0 ಅಂತರದಿಂದ, ಮಾಚ ಮಂಡ ಮಾಲೇಟಿರ (ಕುಕ್ಲೂರ್) ವಿರುದ್ಧ 3-0 ಅಂತರದಿಂದ, ಮಾಣಿಪಂಡ ಬೊದ್ದಂಡ ವಿರುದ್ಧ 7-0 ಅಂತರದಿಂದ ಗೆಲುವು ಸಾಧಿಸಿತು. ಅಮ್ಮಾಟಂಡ ಕೊರವಂಡ ವಿರುದ್ದ 1-0 ಅಂತರದಲ್ಲಿ ಸಾಧಿಸಿತು. ಮಾಲೇಟಿರ ವಾಕ್ ಓವರ್‌ನಿಂದಾಗಿ ಮುಂದಿನ ಸುತ್ತು ಪ್ರವೇಶಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net