ರಾಯಲ್ಪಾಡು: ವಿದ್ಯೆಯೆಂಬುದು ಮಾನವನ ರೂಪ ಹೆಚ್ಚಿಸುವ ಗುಪ್ತ ಸಂಪತ್ತು. ಅದು ಐಶ್ವರ್ಯ, ಯಶಸ್ಸು ಮತ್ತು ಸುಖ ವೃದ್ಧಿಸುತ್ತದೆ. ವಿದ್ಯೆಯು ಗುರುವಿನ ಗುರುವಾಗಿದೆ ಎಂದು ದಾನಿ, ಕೋಲಾರದ ಗೆಳೆಯರ ಬಳಗದ ಅಧ್ಯಕ್ಷ ಕಲ್ಲಂಡೂರು ನಾರಾಯಣಸ್ವಾಮಿ ತಿಳಿಸಿದರು. teachers
ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮನ್ವಂತರ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿಸ್ತರಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗಷ್ಟೇ ಸೀಮಿತವಾಗದೆ ಜ್ಞಾನಾಭಿವೃದ್ಧಿಗೆ ಮುಂದಾಗಬೇಕು ಎಂದರು.
ದಾನಿ ಬಸನಪಲ್ಲಿ ಬೈರೆಡ್ಡಿ ಮಾತನಾಡಿ, ಶಾಲೆಗಳು ದೇವಾಲಯಗಳಿದ್ದಂತೆ. ಈ ದೇವಾಲಯದಲ್ಲಿನ ಶಿಕ್ಷಕರು ವಿದ್ಯಾರ್ಥಿಯಲ್ಲಿನ ಅಂದಕಾರವನ್ನು ಹೋಗಲಾಡಿಸಿ ಅಕ್ಷರ ಜ್ಞಾನವೆಂಬ ಬೆಳಕು ನೀಡುವ ಮೂಲಕ ದೇವರಾಗಿ ವಿದ್ಯಾರ್ಥಿ ಜೀವನಕ್ಕೆ ದಾರಿದೀಪವಾಗುತ್ತಾರೆ ಎಂದರು.
ಪ್ರಾಂಶುಪಾಲ ಪಿ.ಗಣೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು. ಅದನ್ನ ಗುರುಹಿರಿಯರ ಮಾರ್ಗದರ್ಶನದಲ್ಲಿ ಸಾಧಿಸುವ ಛಲ ಹೊಂದಿರಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಶ್ರೀನಾಥ್, ಅಥಿತಿ ಉಪನ್ಯಾಸಕ ವಿ.ವೆಂಕಟರಮಣ, ಮಾಧವಿಲತ, ರಘುನಾಥರೆಡ್ಡಿ, ಯುಗಂಧರ್ ಇದ್ದರು.