ಪ್ರಪಂಚದಲ್ಲಿ ಜ್ಞಾನವೊಂದೇ ಶಾಶ್ವತ / VIJAYAPUR

ವಿಜಯಪುರದ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಮಠದ ಅಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ಮಕ್ಕಳಿಂದ ಅಕ್ಷರ ಬರೆಸಿದರು. ಶಿಕ್ಷಕರಾದ ಎಚ್​.ಶಾಂತಮೂರ್ತಿ, ಮಹಾಲಕ್ಷಿ$್ಮ, ಎಚ್​.ವಿ.ಆಶಾಲತಾ, ಎಚ್​.ಆನಂದ್​, ಕಾವ್ಯಾ, ಮಂಜುನಾಥ್​, ಸಿಬ್ಬಂದಿ, ಪಾಲಕರು ಇದ್ದರು.
ವಿಜಯಪುರದ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಮಠದ ಅಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ಮಕ್ಕಳಿಂದ ಅಕ್ಷರ ಬರೆಸಿದರು. ಶಿಕ್ಷಕರಾದ ಎಚ್​.ಶಾಂತಮೂರ್ತಿ, ಮಹಾಲಕ್ಷಿ$್ಮ, ಎಚ್​.ವಿ.ಆಶಾಲತಾ, ಎಚ್​.ಆನಂದ್​, ಕಾವ್ಯಾ, ಮಂಜುನಾಥ್​, ಸಿಬ್ಬಂದಿ, ಪಾಲಕರು ಇದ್ದರು.
Published on
ವಿಜಯಪುರ : ಪ್ರಪಂಚದಲ್ಲಿ ಹೊನ್ನು, ಮಣ್ಣು, ಅಧಿಕಾರ ಯಾವುದೂ ಶಾಶ್ವತವಲ್ಲ. ಆದರೆ ಗುರುವಿನಿಂದ ಕಲಿಯುವ ವಿದ್ಯೆ ಹಾಗೂ ಜ್ಞಾನ ಮಾತ್ರ ಎಂದಿಗೂ ಶಾಶ್ವತ ಎಂದು ಬಸವಕಲ್ಯಾಣ ಮಠಾಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರಗತಿ ಆಂಗ್ಲ ಶಾಲೆಯಿಂದ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಿಷ್ಠೆ ಹಾಗೂ ಶ್ರದ್ಧೆ ಮನಸ್ಸಿನಲ್ಲಿದ್ದರೆ ಏನನ್ನಾದರೂ ಸಾಧಿಸಬಹುದು. ಇದಕ್ಕೆ ಗುರುಗಳ ಪ್ರತಿಮೆ ಎದುರಿಟ್ಟುಕೊಂಡು ಶ್ರೇಷ್ಠ ಧನುರ್ಧಾರಿ ಎನಿಸಿಕೊಂಡ ಏಕಲವ್ಯನೇ ಸಾಕ್ಷಿ. ಆದ್ದರಿಂದ ಬದುಕಿನಲ್ಲಿ ಪ್ರತಿಯೊಂದಕ್ಕೂ ಗುರುವಿನ ಮಾರ್ಗದರ್ಶನ ಅಗತ್ಯ. ನಮ್ಮ ಶರೀರವೇ ಓಂಕಾರದ ಸ್ವರೂಪವಾಗಿದೆ ಎಂದು ವಿವರಿಸಿದರು.
ಶಾಲೆ ಪ್ರಾಧ್ಯಾಪಕ ಪ್ರಕಾಶ್​ ಮಾತನಾಡಿ, ಬಹಳಷ್ಟು ಜನ ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಶೃಂಗೇರಿ, ಉಡುಪಿ, ಧರ್ಮಸ್ಥಳ ಹೀಗೆ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋಗಿ ದೇವರ ಸನ್ನಿಧಿಯಲ್ಲಿ ಅಕ್ಷರ ತಿದ್ದಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ. ಆದರೆ, ಸಂಸ್ಥೆಯಿಂದ ಸ್ಥಳಿಯವಾಗಿಯೇ ಹಳೆಯ ಗುರುಕುಲ ಪದ್ಧತಿ ನೆನಪಿಸುವಂತೆ, ದೇವಾಲಯದಲ್ಲಿ ಸ್ವಾಮೀಜಿಗಳ ಸನ್ನಿಧಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಪರಿಪಾಠ ಬೆಳೆಸಿಕೊಂಡಿದ್ದೇವೆ ಎಂದರು.
ಪ್ರಗತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ.ಬಸವರಾಜು ಮಾತನಾಡಿ, ಹಿಂದೂ ಧರ್ಮದಲ್ಲಿ 16 ಮಹತ್ವದ ಸಂಸ್ಕಾರಗಳಲ್ಲಿ "ಅಕ್ಷರಾಭ್ಯಾಸ'ವೂ ಒಂದು. ತಾಯಿ ಶಾರದೆಯನ್ನು ಭಕ್ತಿಯಿಂದ ಪೂಜಿಸಿ, ಜ್ಞಾನ ಲೋಕಕ್ಕೆ ಮೊದಲ ಹೆಜ್ಜೆ ಇಡುತ್ತಿರುವ ಮಕ್ಕಳಿಗೆ ಶ್ರೀಗಳ ಆಶೀರ್ವಾದದೊಂದಿಗೆ ಅಕ್ಷರ ಕಲಿಸುವುದು ಉತ್ತಮ ಬೆಳವಣಿಗೆ. ಈ ಮೂಲಕ ಸಂಸ್ಕಾರ ಮತ್ತು ಸಂಸತಿ ನಿರಂತರವಾಗಿ ಬೆಳೆಯಲಿ ಎಂದು ಆಶಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net