ಚಿಂತಾಮಣಿ: ಜೀವನದಲ್ಲಿ ಜ್ಞಾನವೇ ಅತ್ಯಂತ ದೊಡ್ಡ ಸಂಪತ್ತು. ದಾನಿಗಳು ನೀಡುವ ಪ್ರೋತ್ಸಾಹ, ಶೈಕ್ಷಣಿಕ ಪರಿಕರಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ತಿಳಿಸಿದರು.Knowledge
ನಗರದ ವಿದ್ಯಾ ಗಣಪತಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಉರ್ದು ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಠಿಣ ಪರಿಶ್ರಮದಿಂದ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾಲೂಕು ಮತ್ತು ರಾಜ್ಯಕ್ಕೆ ಕೀರ್ತಿ ತರಬೇಕು.ವಿದ್ಯಾ ಗಣಪತಿ ದೇವಸ್ಥಾನದ ಪ್ರಾರಂಭದ ದಿನಗಳಿಂದಲೂ ಪ್ರತಿ ವರ್ಷವೂ ಸತತವಾಗಿ ಈ ಶೈಕ್ಷಣಿಕ ದಾಸೋಹ ನಡೆಸಿಕೊಂಡು ಬರುತ್ತಿರುವುದು ಎಂದು ತಿಳಿಸಿದರು.
ಟ್ರಸ್ಟ್ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸಲು ನಾವು ಸಣ್ಣದೊಂದು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್ ಬಾಬು ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಭಾರತದ ಪ್ರಜೆಗಳು. ಅವರ ಸುಸ್ಥಿರ ಭವಿಷ್ಯಕ್ಕಾಗಿ ಇಂತಹ ದಾನಿಗಳ ಸಹಕಾರ ಅವಶ್ಯಕ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಆರ್.ಅಶೋಕ್ ಮಾತನಾಡಿ, ಶಿಕ್ಷಣವು ಯಾರೂ ಕದಿಯಲಾಗದ ಆಸ್ತಿ. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಶಾಲೆಯನ್ನಷ್ಟೇ ನಂಬಿ ಕುಳಿತುಕೊಳ್ಳದೆ, ಮನೆಯಲ್ಲೂ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ೇತ್ರ ಸಮನ್ವಯ ಸಂಯೋಜಕಿ ಗಿರಿಜಮ್ಮ, ಸರ್ಕಾರಿ ನೌಕರರ ಸಂದ ಅಧ್ಯಕ್ಷ ಆರ್.ಅಶೋಕ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಜಗನ್ನಾಥ್, ರಾಣಿಯಮ್ಮ, ಜೈಭೀಮ್ ಮುರಳಿ, ಆರ್ಎಂಜೆ ಶ್ರೀನಿವಾಸ್, ಸುರೇಶ್, ಮುಖಂಡರಾದ ಉಮೇಶ್, ಚಂದ್ರಮ್ಮ ಇದ್ದರು.