ಕನ್ನಡ ಭಾಷಾ ಕೋಶದಿಂದ ಜ್ಞಾನ ವೃದ್ಧಿ

ಗುಲ್ಬರ್ಗ ವಿಶ್ವವಿದ್ಯಾಲಯ ಮಂಥನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಉದ್ಘಾಟಿಸಿದರು. ಡಾ.ಸಂತೋಷಕುಮಾರ, ಡಾ.ಸುರೇಶ ಜಂಗೆ, ಡಾ.ಕೆ.ಪ್ರವಿಣಕುಮಾರ, ಜಯಾಂಬಿಕಾ, ಡಾ.ಮಮತಾ ಮೇಸಿ ಇತರರಿದ್ದರು.
ಗುಲ್ಬರ್ಗ ವಿಶ್ವವಿದ್ಯಾಲಯ ಮಂಥನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಉದ್ಘಾಟಿಸಿದರು. ಡಾ.ಸಂತೋಷಕುಮಾರ, ಡಾ.ಸುರೇಶ ಜಂಗೆ, ಡಾ.ಕೆ.ಪ್ರವಿಣಕುಮಾರ, ಜಯಾಂಬಿಕಾ, ಡಾ.ಮಮತಾ ಮೇಸಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹೇಳಿಕೆ
  • ಗುಲ್ಬರ್ಗ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
  • ಕನ್ನಡ ಪರಿಭಾಷಾ ಕೋಶದಿಂದ ಜ್ಞಾನ ವಿಸ್ತರಣೆ ಇಲ್ಲವೆ
ಕಲಬುರಗಿ: ಸಮಾಜ ವಿಜ್ಞಾನ ವಿಷಯ ಒಳಗೊಂಡ ಕನ್ನಡ ಪರಿಭಾಷೆ ಪದಕೋಶ ಪ್ರಕಟಣೆ ಮಹತ್ವದ ಸಂಗತಿ. ಅಧ್ಯಾಪಕರು, ವಿದ್ಯಾರ್ಥಿಗಳು ಈ ಕೋಶದಿಂದ ವಿಭಿನ್ನ ರೀತಿಯ ಜ್ಞಾನ ಪಡೆಯಬಹುದು ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹೇಳಿದರು.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆಯ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ ಪ್ರಾಯೋಜಕತ್ವದಲ್ಲಿ ಗುಲ್ಬರ್ಗ ವಿವಿ ಮಂಥನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಭಾಷೆಯಲ್ಲಿ ಸಮಾಜ ವಿಜ್ಞಾನಗಳ ತಾಂತ್ರಿಕ ಪದಪ್ರಯೋಗದ ವಿಕಾಸ, ಬಳಕೆ ಮತ್ತು ಸಮಸ್ಯೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕ ಪರಿಭಾಷಾ ಪದಕೋಶ ಅಧ್ಯಯನದಿಂದ ವಿಷಯಾಸಕ್ತಿ, ಜ್ಞಾನ ಮತ್ತು ಗುಣಮಟ್ಟದ ಬೋಧನೆಗೆ ಮೌಲ್ಯ ಬರಲಿದೆ ಎಂದರು.
ಕನ್ನಡ ಭಾಷೆಗೆ ಅಗಾಧ ಶಕ್ತಿಯಿದೆ. ಕನ್ನಡ ತಾಂತ್ರಿಕ ಪದಗಳ ಬಳಕೆ ಮತ್ತು ಪೋಷಣೆಯಿಂದ ಭಾಷೆ ಮತ್ತಷ್ಟು ಎತ್ತರಕ್ಕೆ ಬೆಳೆಸುವ ಜತೆಗೆ ಸಂಶೋಧನಾ ೇತ್ರದಲ್ಲಿ ಮುನ್ನಡೆ ಸಾಧಿಸಬಹುದು. ಕನ್ನಡ ಪದಕೋಶ ಬಳಕೆಯಿಂದ ಜಗತ್ತಿನ ವಿವಿಧ ೇತ್ರ ಮತ್ತು ವಿಷಯಗಳ ವೈಜ್ಞಾನಿಕ ಸಂಶೋಧನೆಗಳ ಮೇಲೆ ಬೆಳಕು ಚೆಲ್ಲಬಹುದು ಎಂದು ಹೇಳಿದರು.
ಭಾರತ ಸರ್ಕಾರದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ ಸಹಾಯಕ ನಿರ್ದೇಶಕ ಡಾ.ಸಂತೋಷಕುಮಾರ ಮಾತನಾಡಿ, ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗ ಬೇರೆ ಭಾಷೆಯ ಪದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವಾಗ ಈ ಮುಖ್ಯವಾದ 11 ತತ್ವ ಗಮನದಲ್ಲಿ ಇಟ್ಟುಕೊಂಡು ಅನುವಾದ ಮಾಡಿದರೆ ಭಾಷೆಯ ಗಟ್ಟಿತನ ಹೆಚ್ಚುತ್ತದೆ. ಆ ಹಿನ್ನೆಲೆಯಲ್ಲಿ ಸುಮಾರು 22 ಭಾಷೆಗಳಲ್ಲಿ ಈ ಪದಕೋಶ ಸಿದ್ಧವಾಗಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿರುವ ಶೇ.70 ಜನರಿಗೆ ವಿವಿಧ ಭಾಷೆಗಳಲ್ಲಿನ ಮಾಹಿತಿಯನ್ನು ಕನ್ನಡ ಪದಕೋಶದಿಂದ ನೀಡುವುದು ಅತಿ ಅವಶ್ಯಕ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಗ್ರಂಥಪಾಲಕ ಡಾ.ಸುರೇಶ ಜಂಗೆ ಮಾತನಾಡಿ, ಭಾರತ ಸರ್ಕಾರದ ಶಿಕ್ಷಣ ಇಲಾಖೆ ಹಾಗೂ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗ ಒದಗಿಸಿರುವ ಅವಕಾಶದಿಂದ ಗುಲ್ಬರ್ಗ ವಿವಿ ಮತ್ತು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮಹತ್ವ ಬಂದಂತಾಗಿದೆ. ನಮ್ಮ ವಿವಿ ಉತ್ತಮ ಶೈಕ್ಷಣಿಕ ಪರಿಸರದಲ್ಲಿ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಮತ್ತು ಸಕಾರಾತ್ಮಕ ಮನೋಭಾವದಿಂದ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ರಾಜ್ಯದ 12 ವಿದ್ವಾಂಸರನ್ನು ಒಳಗೊಂಡ ತಂಡ ರಚಿಸಿರುವ ಪದಕೋಶದಲ್ಲಿ ಸುಮಾರು 6000 ಕನ್ನಡ ಪದದ ಅರ್ಥಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮ ಸಂಯೋಜಕ ಡಾ.ಕೆ. ಪ್ರವಿಣಕುಮಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ವಿವಿ ಗ್ರಂಥಾಲಯದಲ್ಲಿ ವೈಜ್ಞಾನಿಕ ಸೌಲಭ್ಯಗಳಿವೆ. ಇ&ಸಂಪನ್ಮೂಲ, ಇ& ನಿಯತಕಾಲಿಕೆ, ಐಸಿಟಿ&ಇನ್ಫಾಮೇರ್ಶನ್​, ವರ್ಚುವಲ್​ ಇ ಲರ್ನಿಂಗ್​ ಸೌಲಭ್ಯ, ಅಂತರ್ಜಾಲ ಪುಸ್ತಕ ಸೇವೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಹಣಕಾಸು ಅಧಿಕಾರಿ ಜಯಂಬಿಕಾ ಇದ್ದರು. ಪವಿತ್ರಾ ಪ್ರಾರ್ಥಿಸಿದರು. ಉಪ ಗ್ರಂಥಪಾಲಕಿ ಡಾ.ಮಮತಾ ಮೇಸಿ ನಿರೂಪಣೆ ಮಾಡಿ ವಂದಿಸಿದರು.
ಮಧ್ಯಾಹ್ನ ನಡೆದ ಗೋಷ್ಠಿಯಲ್ಲಿ ಕರ್ನಾಟಕ ವಿವಿ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ತ್ರಿವೇಣಿ, ಪರಿಭಾಷಾಕೋಶ ರಚನೆ ಮತ್ತು ಭಾಷೆಯ ಅರ್ಥ ಹಾಗೂ ಗ್ರಂಥಪಾಲಕ ಡಾ.ಪ್ರವಿಣಕುಮಾರ ಅವರು ಪರಿಭಾಷೆಯ ಸಮಸ್ಯೆ ಮತ್ತು ಸವಾಲುಗಳು ಕುರಿತು ವಿಷಯ ಮಂಡಿಸಿದರು.
ಮಂಗಳವಾರದ ಗೋಷ್ಠಿಯಲ್ಲಿ ಕನ್ನಡ ಭಾಷೆ ಮತ್ತು ಪದಕೋಶ ಪರಿಭಾಷೆ ಕುರಿತು ಅಫಜಲಪುರ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿ ಡಾ.ಸಾವಿತ್ರಿ ಕೃಷ್ಣ, ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪೊ.ಎಚ್​.ಟಿ. ಪೋತೆ, ಅರ್ಥಶಾಸ ವಿಭಾಗದ ಮುಖ್ಯಸ್ಥ ಪೊ.ದಶರಥ ನಾಯಕ, ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕ ಡಾ.ಎಂ.ಬಿ. ಕಟ್ಟಿ ವಿಷಯ ಮಂಡಿಸುವರು.
"

ದೇಶದ ಬೇರೆ ರಾಜ್ಯದ ಜನರಿಗೆ ಮಾತೃಭಾಷೆಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ಜೀವನದ ಹಾಸುಹೊಕ್ಕಾದ ಭಾಷೆ ಮೂಲಕ ಜಗತ್ತಿನ ಜ್ಞಾನ ಹಂಚಿಕೆ ಮತ್ತು ಬಳಕೆಗೆ ಅಕಾಡೆಮಿ ಒತ್ತು ನೀಡಿದೆ. ಅಕಾಡೆಮಿ ವಿವಿಧ ವಿವಿ ಭಾಷಾ ವಿದ್ವಾಂಸರು, ವಿಷಯ ತರ ಸಭೆ ನಡೆಸಿ ಅವರ ಸಹಕಾರದಿಂದ ಈ ಕಾರ್ಯಕ್ರಮ ರಚನಾತ್ಮಕ ಜತೆ ಯಶಸ್ವಿಯಾಗಿ ನಡೆದಿದೆ.

> ಪ್ರೊ.ಶಶಿಕಾಂತ ಉಡಿಕೇರಿ

ಕುಲಪತಿ, ಗುಲ್ಬರ್ಗ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net