

ಪ್ರಮುಖ ಮುಖ್ಯಾಂಶಗಳು
ಅಭಿವೃದ್ಧಿಗೆ ಗುಣಮಟ್ಟದ ಸಂಶೋಧನೆ ಅಗತ್ಯ
| ಮಹಿಳಾ ವಿಶ್ವವಿದ್ಯಾಲಯದ ಪ್ರೊ. ಗವಿಸಿದ್ದಪ್ಪ ಆನಂದಹಳ್ಳಿ ಅಭಿಪ್ರಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ: ದೇಶದ ಅಭಿವೃದ್ಧಿಗೆ ಗುಣಮಟ್ಟದ ಸಂಶೋಧನೆ ಅಗತ್ಯ, ದೇಶದ ಎಲ್ಲ ಕ್ಷೇತ್ರಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವ ಸಂಶೋಧನಾ ಕ್ಷೇತ್ರ ಸಹಕಾರಿಯಾಗಿದೆ ಎಂದು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಪ್ರೊ.ಗವಿಸಿದ್ದಪ್ಪ ಆನಂದಹಳ್ಳಿ ಅಭಿಪ್ರಾಯ ಪಟ್ಟರು.
ನಗರದ ಕೆ. ಎಲ್. ಈ ಸಂಸ್ಥೆಯ ಬಸವ ಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ವಿಭಾಗದಿಂದ ಬುಧವಾರ ಹೊಸಗಳತ್ತ: ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ನವೀನ ಸಂಶೋಧನಾ ವಿಧಾನಗಳ ಅಭಿವೃದ್ಧಿ ಕುರಿತ ಕಾರ್ಯಾಗಾರ ಅವರು ಉದ್ಘಾಟಿಸಿದರು. ಸಂಶೋಧನೆ ಕ್ಷೇತ್ರದಲ್ಲಿ ವಿಷಯ ಆಯ್ಕೆ, ಉದ್ದೇಶ, ಗುರಿ, ಸಾಹಿತ್ಯ ವಿಮರ್ಶೆ. ಪ್ರಾಥಮಿಕ ಮತ್ತು ದ್ವಿತೀಯ ಕ್ಷೇತ್ರದ ಸಂಶೋಧನೆಯ ಮೂಲಕ ಸಂಗ್ರಹಿಸಿದ ದಾಖಲೆಗಳ ವಿಶ್ಲೇಷಣೆ ಮೂಲಕ ಉದ್ದೇಶಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಕಿಯೆ ದೇಶದ ಆರ್ಥಿಕ ಮತ್ತು ಸಾಮಾಜಿಕ ಸಂಶೋಧನೆಯಲ್ಲಿ ಪರಿಹಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರಾಚಾರ್ಯ ಜಿ.ಕುಲಕರ್ಣಿ ಸಂಶೋಧನೆ ವಿಷಯದ ಆಯ್ಕೆ ಮತ್ತು ಸಾಹಿತ್ಯ ವಿಮರ್ಶೆ ಮುಖ್ಯ ಪಾತ್ರ ವಹಿಸುತ್ತದೆ. ಸಾಂಪ್ರದಾಯಿಕ ಸಂಶೋಧನಾ ವಿಧಾನಗಳು ಇಂದಿನ ಸಂಕೀರ್ಣ ಜಾಗತಿಕ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಹೊಸ ವಿಧಾನದಲ್ಲಿ ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ವಿಶ್ಲೇಷಣೆ ಮತ್ತು ಸಹಕಾರಿ ಕಲಿಕೆ ವಿಧಾನಗಳ ಮೂಲಕ ಸಾಮಾಜಿಕ ಜವಾಬ್ದಾರಿ ಸಂಶೋಧನೆಯೊಂದಿಗೆ ದೇಶದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಅವಕಾಶವನ್ನು ಬಳಸಬೇಕು ಎಂದು ಹೇಳಿದರು.
ಸಂಯೋಜಕ ಪ್ರೊ. ಜಗದೀಶ್ ಬಾರಂಗಿ,ಡಾ. ಸುವರ್ಣ ಮಾದರ, ಪ್ರೊ.ಸುಧೀರ್ ಕೋಟಿವಾಲೆ , ಡಾ. ವಿನಾಯಕ ಇತರರಿದ್ದರು.