ಬೆಳಗಾವಿ: ದೀಾರಂಭ ಕಾರ್ಯಕ್ರಮದ ಪ್ರಯುಕ್ತ ಕೆಎಲ್ಇ ಸಂಸ್ಥೆಯ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನ 45 ವಿದ್ಯಾರ್ಥಿಗಳು ಸೋಮವಾರ ಮತ್ತಿಕೊಪ್ಪದಲ್ಲಿರುವ ಕೆಎಲ್ಇ ಸಂಸ್ಥೆಯ ಐಸಿಎಆರ್&ಕೃಷಿ ವಿಜ್ಞಾನ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ ನೀಡಿ ಕೇಂದ್ರದ ವಿವಿಧ ಪ್ರದರ್ಶನ ಟಕಗಳು ಹಾಗೂ ಪ್ರಾತ್ಯಕೆಗಳನ್ನು ವೀಸಿ ಕೃಷಿ ೇತ್ರದ ಆಧುನಿಕ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದರು.
ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ, ಕೃಷಿ ವಿಜ್ಞಾನ ಕೇಂದ್ರದ ಉದ್ದೇಶ, ಕಾರ್ಯಚಟುವಟಿಕೆಗಳು ಹಾಗೂ ರೈತರಿಗೆ ನೀಡಲಾಗುತ್ತಿರುವ ವಿವಿಧ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿಜ್ಞಾನಿ ಪ್ರವಿಣ ಯಡಹಳ್ಳಿ, ತೋಟಗಾರಿಕಾ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿಗಳು, ಸಸ್ಯಾಭಿವೃದ್ಧಿ ಹಾಗೂ ಮಣ್ಣಿನ ಮಾದರಿ ಸಂಗ್ರಹಿಸುವ ವಿಧಾನವನ್ನು ಪ್ರಾತ್ಯಕೆ ಮೂಲಕ ವಿವರಿಸಿದರು.
ಗೃಹ ವಿಜ್ಞಾನಿ ಡಾ.ಭಾವಿನಿ ಪಾಟೀಲ, ಫಾಮ್ರ್ ಟು ಫೋರ್ಕ್ ಪರಿಕಲ್ಪನೆ ಕುರಿತು ಮಾಹಿತಿ ನೀಡಿ, ಕೇಂದ್ರದ ಪ್ರದರ್ಶನ ಟಕದಲ್ಲಿರುವ ಕೃಷಿ ಸಲಕರಣೆಗಳು ಹಾಗೂ ಅವುಗಳ ಉಪಯೋಗಗಳನ್ನು ತಿಳಿಸಿದರು.
ಎಸ್.ಎಂ.ವಾರದ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ವಿನೋದ ಕೋಚಿ ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನ ಉಪನ್ಯಾಸಕ ಡಾ.ವಿನಾಯಕ ಹಾರುಗೊಪ್ಪ, ಸುನಂದಾ ಜಿ. ಇತರರಿದ್ದರು.