ಹಂಸಲೇಖ ಸಂಗೀತ ಹಾಗೂ ಸಾಹಿತ್ಯದ ಹಾಡಾದ ಹೆಣ್ ನವಿಲೇ ಹಾಡಿಗೆ ತಕ್ಕಂತೆ ಕಿಶನ್ ಅವರು ಪ್ರದೇಶವನ್ನು ಕ್ರಿಯೇಟ್ ಮಾಡಿದ್ದರು. ನಿವೇದಿತಾ ಗೌಡ ಅವರು ಸಹ ನವಿಲಿನ ಪುಕ್ಕವಿರುವ ಉಡುಪು ಧರಿಸಿದ್ದರು. ಈ ರೀಲ್ಸ್ ಭಾರಿ ವೈರಲ್ ಆಗಿತ್ತು. ಆದರೆ, ಇಂತಹ ನೈಜ ನವಿಲು ಗರಿ ಬಳಕೆ ಮಾಡಿಕೊಂಡು ಉಡುಪು ತಯಾರಿಸಿ, ಸಾರ್ವಜನಿಕವಾಗಿ ಹಂಚಿಕೊಳ್ಳುವುದು ವನ್ಯಜೀವಿ(ಸಂರಕ್ಷಣೆ)ಕಾಯ್ದೆ, 1972 ಸ್ಪಷ್ಟ ಉಲ್ಲಂಘನೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.