ಕಿರುಗಾವಲು ಸೊಸೈಟಿಗೆ 44 ಲಕ್ಷ ರೂ.ನಿವ್ವಳ ಲಾಭ

ಮಳವಳ್ಳಿ ತಾಲೂಕಿನ ಕಿರುಗಾವಲು ಸೊಸೈಟಿ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ನರೇಂದ್ರ ಕೆ.ಎಂ.ಪುಟ್ಟು ಮಾತನಾಡಿದರು. ಉಪಾಧ್ಯಕ್ಷ ಎಂ.ಚಿಕ್ಕಯ್ಯ, ನಿರ್ದೇಶಕರಾದ ಕೆ.ಎಚ್.ಅಜೀಜ್ ಖಾನ್, ಆನಂದ್ ಕುಮಾರ್, ಕೆ.ಎಂ.ಜಗದೀಶ್, ಎಂ.ಎಸ್.ನಿಂಗೇಗೌಡ, ಕೆ.ಎಸ್.ಮನೋಹರ್, ಬಿ.ಸಿದ್ದರಾಜು, ಯಶೋಧಾ, ಜಿ.ಕೆ.ಜಯಶೀಲಾ, ಎಂ.ಮಾಲಾಶ್ರೀ, ಅಲ್ತಾಫ್ ಮೆಹದಿ ಇದ್ದರು.
ಮಳವಳ್ಳಿ ತಾಲೂಕಿನ ಕಿರುಗಾವಲು ಸೊಸೈಟಿ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ನರೇಂದ್ರ ಕೆ.ಎಂ.ಪುಟ್ಟು ಮಾತನಾಡಿದರು. ಉಪಾಧ್ಯಕ್ಷ ಎಂ.ಚಿಕ್ಕಯ್ಯ, ನಿರ್ದೇಶಕರಾದ ಕೆ.ಎಚ್.ಅಜೀಜ್ ಖಾನ್, ಆನಂದ್ ಕುಮಾರ್, ಕೆ.ಎಂ.ಜಗದೀಶ್, ಎಂ.ಎಸ್.ನಿಂಗೇಗೌಡ, ಕೆ.ಎಸ್.ಮನೋಹರ್, ಬಿ.ಸಿದ್ದರಾಜು, ಯಶೋಧಾ, ಜಿ.ಕೆ.ಜಯಶೀಲಾ, ಎಂ.ಮಾಲಾಶ್ರೀ, ಅಲ್ತಾಫ್ ಮೆಹದಿ ಇದ್ದರು.
Published on

ಮಳವಳ್ಳಿ:

ರೈತರ ಹಾಗೂ ಸದಸ್ಯರ ಸಹಕಾರದಿಂದ ಕಿರುಗಾವಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಅತಿ ಹೆಚ್ಚು ಲಾಭ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದೆ ಎಂದು ಸಂಘದ ಅಧ್ಯಕ್ಷ ಕೆ.ಪಿ.ನರೇಂದ್ರ ಕೆ.ಎಂ.ಪುಟ್ಟು ತಿಳಿಸಿದರು.

ತಾಲೂಕಿನ ಕಿರುಗಾವಲು ಗ್ರಾಮದ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 65 ಕೋಟಿ ರೂ.ವಾಹಿವಾಟು ನಡೆಸಿ 44 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ವಹಿವಾಟನ್ನು ದ್ವಿಗುಣಗೊಳಿಸಲು ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಅತಿ ಹೆಚ್ಚು ಲಾಭ ಗಳಿಸಿ ನಮ್ಮ ಸಂಘವು ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, 100 ಸ್ವಸಹಾಯ ಸಂಘಗಳ 1200 ಸದಸ್ಯರಿಗೆ 8 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ವೈಯಕ್ತಿಕ, ವಾಹನ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸವಲತ್ತು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ನಮ್ಮ ಸಂಘವು 1500 ಷೇರುದಾರರನ್ನು ಹೊಂದಿದೆ. ತಾಲೂಕು ಮಟ್ಟದ ಸಹಕಾರ ಸಂಘಗಳೇ 10 ಕೋಟಿ ವಾಹಿವಾಟು ನಡೆಸಲು ಕಷ್ಟಪಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಷೇರುದಾರರು ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ತಮವಾಗಿ ವಾಹಿವಾಟು ನಡೆಸಲು ಸಹಕಾರಿಯಾಗಿದೆ. ಸಹಕಾರ ಸಂಘವು ಮತ್ತಷ್ಟು ಅಭಿವೃದ್ಧಿಗೊಳಿಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಈಗಾಗಲೇ ಷೇರುದಾರರಿಗೆ ಹಲವಾರು ರೀತಿಯ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇನ್ನೂ ಮುಂದೆ ಅಂತಿಮ ಸಂಸ್ಕಾರ ವಾಹನವನ್ನು ಸಂಘದ ವ್ಯಾಪ್ತಿಯ ಗ್ರಾಮಗಳಿಗೆ ಉಚಿತವಾಗಿ ಒದಗಿಸಲಾಗುವುದು. ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಷೇರುದಾರರ ಮೂವರು ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ.ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ಹೇಳಿದರು.
ಸಿಇಒ ಎಂ.ಶಿವಲಿಂಗ ಅವರು ಸಂಘದ ವಾರ್ಷಿಕ ವಹಿವಾಟಿನ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷ ಎಂ.ಚಿಕ್ಕಯ್ಯ, ನಿರ್ದೇಶಕರಾದ ಕೆ.ಎಚ್.ಅಜೀಜ್ ಖಾನ್, ಆನಂದ್ ಕುಮಾರ್, ಕೆ.ಎಂ.ಜಗದೀಶ್, ಎಂ.ಎಸ್.ನಿಂಗೇಗೌಡ, ಕೆ.ಎಸ್.ಮನೋಹರ್, ಬಿ.ಸಿದ್ದರಾಜು, ಯಶೋಧಾ, ಜಿ.ಕೆ.ಜಯಶೀಲಾ, ಎಂ.ಮಾಲಾಶ್ರೀ, ಅಲ್ತಾಫ್ ಮೆಹದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net