_1789745890370.webp?w=480&auto=format%2Ccompress&fit=max)
_1789745890370.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಬೆಂಗಳೂರುಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಿಯಮಿತದ (ಬಿಐಎಎಲ್)ಸಾಮಾಜಿಕ ಹೊಣೆಗಾರಿಕಾಅಂಗಸಂಸ್ಥೆಯಾದ ಕೆಂಪೇಗೌಡಅಂತಾರಾಷ್ಟ್ರೀಯ ವಿಮಾನ ನಿಲ್ದಾಣಪ್ರತಿಷ್ಠಾನ (ಕೆಐಎಎಫ್)ಬೆಂಬಲಿತ ಸರ್ಕಾರಿಶಾಲೆಗಳ ಬಾಲಕಿಯರಿಗೆ ಕ್ರೀಡಾಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದಕೆಂಪ್ ಎಕ್ಸಲೆನ್ಸ್ ಫೌಂಡೇಶನ್ಮೂಲಕ 3 ವರ್ಷಗಳಫುಟ್‌ಬಾಲ್ ತರಬೇತಿ ಹಮ್ಮಿಕೊಂಡಿದೆ.
ಗ್ರಾಮೀಣಭಾಗದ ಬಾಲಕಿಯರಿಗೆ ವೃತ್ತಿಪರತರಬೇತಿ, ಅಗತ್ಯಕ್ರೀಡಾ ಸಾಮಗ್ರಿಗಳು ಮತ್ತುಸ್ಪರ್ಧಾತ್ಮಕ ಅನುಭವ ಒದಗಿಸುವಜೊತೆಗೆ, ತಳಮಟ್ಟದಲ್ಲೇಪ್ರತಿಭಾವಂತ ಆಟಗಾರ್ತಿಯರನ್ನುಗುರುತಿಸಿ, ಅವರನ್ನುಉನ್ನತ ಮಟ್ಟದ ಕ್ರೀಡಾ ಅವಕಾಶಗಳತ್ತಮುನ್ನಡೆಸುವುದು ಕಾರ್ಯಕ್ರಮದಉದ್ದೇಶವಾಗಿದೆ.
ಈಯೋಜನೆಯಡಿ 100 ಬಾಲಕಿಯರಿಗೆ8 ಬ್ಯಾಚ್‌ಗಳಲ್ಲಿತರಬೇತಿ ನೀಡಲಾಗುತ್ತದೆ. ದೈಹಿಕಸಾಮರ್ಥ್ಯ, ತಾಂತ್ರಿಕಕೌಶಲ್ಯ ಮತ್ತು ಮೈದಾನದ ಅರಿವುಸೇರಿದಂತೆ ಫುಟ್‌ಬಾಲ್‌ನ ಪ್ರಮುಖಅಂಶಗಳಲ್ಲಿ ವಿದ್ಯಾರ್ಥಿನಿಯರಿಗೆತರಬೇತಿ ನೀಡಲಾಗುತ್ತದೆ.
ಡ್ರೀಮ್ ಡೇರ್ ಗೋ ಎಂಬ ಧ್ಯೇಯವಾಕ್ಯದಡಿನಡೆಯುವ ಕಾರ್ಯಕ್ರಮವು ಕೇವಲಫುಟ್‌ಬಾಲ್ ಪರಿಚಯಿಸುವುದಕ್ಕೆಸೀಮಿತವಾಗಿರದೆ, ಬಾಲಕಿಯರಲ್ಲಿಆತ್ಮವಿಶ್ವಾಸ, ಶಿಸ್ತು,ತಂಡಭಾವ ಮತ್ತುದೊಡ್ಡ ಕನಸು ಕಾಣುವ ಮನೋಭಾವಬೆಳೆಸಲಾಗುತ್ತಿದೆ.
ಕೆಐಎಎಫ್ಪ್ರಸ್ತುತ 7 ಸರ್ಕಾರಿಶಾಲೆಗಳಿಗೆ ಬೆಂಬಲ ನೀಡುತ್ತಿದ್ದು,ನಮ್ಮ ಶಿಕ್ಷಣ ಮೂಲಕಸಮಗ್ರ ಶಿಕ್ಷಣ ಮತ್ತು ನಮ್ಮಆರೋಗ್ಯ ಮೂಲಕ ಆರೋಗ್ಯ ಹಾಗೂಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನುಸುಮಾರು 3,000 ವಿದ್ಯಾರ್ಥಿಗಳಿಗೆತಲುಪಿಸುತ್ತಿದೆ.
ಮುಂದಿನಹಂತದಲ್ಲಿ ಈ ಫುಟ್‌ಬಾಲ್ ಯೋಜನೆಯನ್ನುಸುತ್ತಮುತ್ತಲಿನ ಸರ್ಕಾರಿಶಾಲೆಗಳಿಗೂ ವಿಸ್ತರಿಸಿ,ಇನ್ನಷ್ಟು ಗ್ರಾಮೀಣಬಾಲಕಿಯರಿಗೆ ಸಂರಚಿತ ಕ್ರೀಡಾಅವಕಾಶಗಳನ್ನು ಕಲ್ಪಿಸುವುದಾಗಿಕೆಐಎಎಫ್ ತಿಳಿಸಿದೆ.