

ಪ್ರಮುಖ ಮುಖ್ಯಾಂಶಗಳು
ಕಾಲುವೆಗೆ ನೀರು ಹರಿಸುವಂತೆ ಒತ್ತಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ತಾಲೂಕಿನ ಕೋಟಬಾಗಿ ಏತ ನೀರಾವರಿ ಕಾಲುವೆಯ ಕೊನೆಯ ನಾಲ್ಕು ಹಳ್ಳಿಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಭಾರತೀಯ ಕಿಸಾನ್ ಸಂಘದ ವತಿಯಿಂದ ತಹಶೀಲ್ದಾರ ರಾಜೇಶ ಬುರ್ಲಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಳೆದ 3-4 ವರ್ಷಗಳಿಂದ ನಿರಂತರ ಹೋರಾಟ ನಡೆಸಿದರೂ ಅಧಿಕಾರಿಗಳು ನೀರು ಹರಿಸುತ್ತಿಲ್ಲ. ಕಾಲುವೆಯಲ್ಲಿ ಹೂಳು ತುಂಬಿದ್ದು, ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಅಧಿಕಾರಿಗಳು ಕಂಪನಿ ರಿಪೇರಿ ಹಾಗೂ ಜಾಕ್ವೆಲ್‌ನಲ್ಲಿ ನೀರಿಲ್ಲ ಎಂಬ ಬೇಜವಾಬ್ದಾರಿಯ ಉತ್ತರಗಳನ್ನು ನೀಡುತ್ತಾ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ
೧ ರಿಂದ ೬ ನೇ ಗೇಟ್‌ವರೆಗೆ ನೀರು ಹರಿಯುತ್ತಿದೆ, ೭ ಮತ್ತು ೮ ನೇ ಗೇಟ್ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಮಳೆಯಿಲ್ಲದೆ ದನಕರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಹತ್ತಿರದಲ್ಲಿ ಹಿರಣ್ಯಕೇಶಿ ನದಿ ತುಂಬಿ ಹರಿಯುತ್ತಿದ್ದರೂ ರೈತರಿಗೆ ಅನ್ಯಾಯವಾಗುತ್ತಿದೆ. ಮುಂದಿನ ೨-೩ ದಿನಗಳಲ್ಲಿ ನೀರು ಹರಿಸದಿದ್ದರೆ ಉಗ್ರ ಹೋರಾಟ ಮಾಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ರಾಜಪ್ಪ ಶಿವಾಪೂರ,ದುಂಡಪ್ಪ ಬೆಂಡವಾಡಿ, ಸುನೀಲ ಮಾಳಿ ಇತರರಿದ್ದರು.