ಕೆಂಪೇಗೌಡರ ದೂರದೃಷ್ಟಿಯ ´ಫಲ ಇಂದಿನ ಬೆಂಗಳೂರು; ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಬಣ್ಣನೆ

ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕೆಂಪೇಗೌಡರ 517ನೇ ಜಯಂತ್ಯುತ್ಸವದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಆದಿಚುಂಚನಗಿರಿ ಶ್ರೀಗಳು, ಮಾದಾರ ಚನ್ನಯ್ಯ ಸ್ವಾಮೀಜಿ, ಡಾ.ಅಶ್ವತ್ಥ ನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.
ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕೆಂಪೇಗೌಡರ 517ನೇ ಜಯಂತ್ಯುತ್ಸವದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಆದಿಚುಂಚನಗಿರಿ ಶ್ರೀಗಳು, ಮಾದಾರ ಚನ್ನಯ್ಯ ಸ್ವಾಮೀಜಿ, ಡಾ.ಅಶ್ವತ್ಥ ನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಂಪೇಗೌಡರ ದೂರದೃಷ್ಟಿಯ ´ಫಲ ಇಂದಿನ ಬೆಂಗಳೂರು
  • ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಬಣ್ಣನೆ
  • ಉಭಯ ರಾಜ್ಯಗಳ ಕಾವೇರಿ ಜಲವಿವಾದದ ಪರಿಹಾರಕ್ಕೆ ಸಲಹೆ

ಬೆಂಗಳೂರು: ನಾಡಪ್ರಭುಕೆಂಪೇಗೌಡರು ಜಾಗತಿಕ ಮಟ್ಟದದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು.ಅವರ ದೂರದೃಷ್ಟಿಯಫಲವನ್ನು ಇಂದಿನ ಪೀಳಿಗೆಅನುಭವಿಸುತ್ತಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ಹೇಳಿದರು.

ನಾಡಪ್ರಭುಕೆಂಪೇಗೌಡ ಪ್ರತಿಷ್ಠಾನವು ನಗರದಜ್ಞಾನಜ್ಯೋತಿ ಸಭಾಂಗಣದಲ್ಲಿಶನಿವಾರ ಆಯೋಜಿಸಿದ್ದ ನಾಡಪ್ರಭುಕೆಂಪೇಗೌಡ ಜನ್ಮದಿನೋತ್ಸವದಲ್ಲಿಮುಖ್ಯ ಅತಿಥಿಗಳಾಗಿ ಪಾಲ್ಗೊಂಡುವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಗಣ್ಯರಿಗೆ ಪ್ರಶಸ್ತಿಪ್ರದಾನ ಮಾಡಿ ಮಾತನಾಡಿದರು.

ಕೆಂಪೇಗೌಡರುಕಟ್ಟಿದ ಬೆಂಗಳೂರು ಇಂದು ಮಿನಿಭಾರತವಾಗಿದ್ದು,ಬೆಂಗಳೂರು ಜಾಗತಿಕತಂತ್ರಜ್ಞಾನ ಮತ್ತು ನಾವೀನ್ಯತೆಯರಾಜಧಾನಿಯಾಗಿ ಬೆಳೆದಿದೆ.ಜನರಿಗೆ ಕೇವಲಸೇವೆಗಳನ್ನು ನೀಡುವುದಷ್ಟೇಅಲ್ಲದೆ ಸುಸ್ಥಿರ ನಗರ ನಿರ್ಮಾಣದಜೊತೆಗೆ ಕೆರೆಗಳ ಜಾಲದ ಮೂಲಕ ಜಲನಿರ್ವಹಣೆ,ಪರಿಸರದ ಸಂರಕ್ಷಣೆಯಮಾದರಿಯನ್ನು 500ವರ್ಷಗಳ ಹಿಂದೆಯೇಕೆಂಪೇಗೌಡರು ತೋರಿಸಿ ಕೊಟ್ಟಿದ್ದುಎಲ್ಲರೂ ಮೆಚ್ಚುವಂತದ್ದು ಎಂದುವಿವರಿಸಿದರು.

ಕಾರ್ಯಕ್ರಮದಲ್ಲಿರಾಜ್ಯಪಾಲ ಥಾವರ್ ಚಂದ್ ಗೆಹಲೋತ್,ಆದಿಚುಂಚನಗಿರಿಮಹಾಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದನಾಥಸ್ವಾಮೀಜಿ,ಚಿತ್ರದುರ್ಗದಮಾದರ ಚೆನ್ನಯ್ಯ ಮಠದ ಶ್ರೀಬಸವಮೂರ್ತಿಮಾದಾರ ಚೆನ್ನಯ್ಯ ಸ್ವಾಮೀಜಿ,ಕೇಂದ್ರ ಸಚಿವರಾದಹೆಚ್.ಡಿ.ಕುಮಾರಸ್ವಾಮಿ,ವಿ.ಸೋಮಣ್ಣ,ವಿಪಕ್ಷ ನಾಯಕಆರ್. ಅಶೋಕ,ಮಲ್ಲೇಶ್ವರವಿಧಾನಸಭಾ ಕ್ಷೇತ್ರದ ಶಾಸಕ ಹಾಗೂಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ನಾರಾಯಣ್, ಉದ್ಯಮಿಪ್ರಶಾಂತ್ ಪ್ರಕಾಶ್ ಮತ್ತುಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡಮತ್ತಿತರರು ಉಪಸ್ಥಿತರಿದ್ದರು.

ಕಾವೇರಿಜಲವಿವಾದಕ್ಕೆ ಪರಿಹಾರಕ್ಕೆ ಸಲಹೆ

ಕಾವೇರಿಜಲವಿವಾದದಲ್ಲಿ ರೈತರ ಹಿತ ಪರಿಗಣಿಸಿಸಮಸ್ಯೆ ಬಗೆಹರಿಸುವುದು ಏಕೈಕಪರಿಹಾರ, ರೈತರವಿಚಾರದಲ್ಲಿ ಕಾಳಜಿ ತೋರಬೇಕಾದ್ದುಮುಖ್ಯ ಎಂದು ಉಪರಾಷ್ಟ್ರಪತಿಸಿ.ಪಿ.ರಾಧಾಕೃಷ್ಣನ್ಸಲಹೆ ನೀಡಿದ್ದಾರೆ.

ತಮಿಳುನಾಡುಮತ್ತು ಕರ್ನಾಟಕದ ಮಧ್ಯೆ ಕಾವೇರಿಜಲವಿವಾದಕ್ಕೆ ಒಂದು ಪರಿಹಾರಕಂಡುಕೊಳ್ಳಬೇಕು.ಈ ಸಮಸ್ಯೆ ಬಹಳವರ್ಷ ಮುಂದುವರೆಯಲು ಬಿಡಬಾರದು.ರೈತರ ವಿಷಯದಲ್ಲಿಭಾಷೆ, ಪ್ರಾಂತದವಿಚಾರ ಬರುವುದಿಲ್ಲ.ಎರಡೂ ರಾಜ್ಯಗಳರೈತರ ಹಿತ ಕಾಪಾಡಬೇಕು.ಈ ಸಮಸ್ಯೆಯನ್ನುರಾಜಕೀಯವಾಗಿ ನೋಡುವ ಬದಲು ರೈತರಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡುಸಮಸ್ಯೆ ಬಗೆಹರಿಸಬೇಕು ಎಂದುಸಲಹೆ ನೀಡಿದರು.

ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿ 64 ಸಮುದಾಯಗಳಿಗೆ 64 ಪೇಟೆಗಳನ್ನು ನಿರ್ಮಾಣ ಮಾಡಿದ್ದರು. ದೇಶದಲ್ಲಿ ಅತೀ ಹೆಚ್ಚು ತಲಾದಾಯವನ್ನು ಹೊಂದಿರುವ ನಗರ ಬೆಂಗಳೂರು. ಇದಕ್ಕೆ ಕಾರಣ ಈ ನಗರವನ್ನು ನಿರ್ಮಾಣ ಮಾಡಿರುವ ಕೆಂಪೇಗೌಡರ ದೂರದೃಷ್ಟಿ.

— ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net