ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕ ಆರಂಭ. ಪ್ರತಿದಿನ 77 ಟನ್ ತ್ಯಾಜ್ಯ ಸಂಸ್ಕರಣೆ ಸಾಮರ್ಥ್ಯ ಬಿಐಎಎಲ್

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಸಂಸ್ಥೆಯಿಂದ ನಿರ್ಮಾಣಗೊಂಡಿರುವ  ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಸಂಸ್ಥೆಯಿಂದ ನಿರ್ಮಾಣಗೊಂಡಿರುವ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕ
Published on
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಸಂಸ್ಥೆಯು ವಿಮಾನ ನಿಲ್ದಾಣದ ಪರಿಸರ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡುವ ಮತ್ತು ಆರ್ಥಿಕತೆಯ ಪದ್ಧತಿ ಬಲಪಡಿಸುವ ಉದ್ದೇಶದಿಂದ ತನ್ನದೇ ಆದ ಆಂತರಿಕ ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ಪ್ರಾರಂಭಿಸಿದೆ.
ವಿಮಾನ ನಿಲ್ದಾಣ ಟರ್ಮಿನಲ್‌ಗಳು, ಏರ್‌ಸೈಡ್ ಕಾರ್ಯಾಚರಣೆಗಳು, ವಾಣಿಜ್ಯ ಮಳಿಗೆಗಳು ಮತ್ತು ಇತರೆ ಸೌಲಭ್ಯಗಳಿಂದ ಒಟ್ಟಾರೆ ಪ್ರತಿದಿನ ಸುಮಾರು 24 ರಿಂದ 26 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಸದ್ಯ ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರವು , ತ್ಯಾಜ್ಯ ಉತ್ಪತ್ತಿಯಾಗುವ ಮೂಲದಲ್ಲೇ ವೈಜ್ಞಾನಿಕವಾಗಿ ಮತ್ತು ಸಂಪೂರ್ಣವಾಗಿ ಸಂಸ್ಕರಿಸುಂತ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಹೊರಗಿನ ಸಂಸ್ಥೆಗಳ ಮೇಲಿನ ಅವಲಂಬನೆ ಕಡಿಮೆಯಾಗಿರುವುದರ ಜತೆಗೆ ತ್ಯಾಜ್ಯ ಸಾಗಾಣಿಕೆಯಿಂದ ಉಂಟಾಗುವ ಪರಿಸರ ಅಪಾಯಗಳನ್ನು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿದಂತಾಗಿದೆ ಎಂದು ಸಂಸ್ಥೆ ತಿಳಿಸಿದೆ.
ವಿಮಾನ ನಿಲ್ದಾಣ ಒಟ್ಟು ತ್ಯಾಜ್ಯದ 97-98% ಭಾಗವನ್ನು ತನ್ನದೇ ಆದ ಸಂಸ್ಕರಣಾ ಘಟಕಗಳು ಮತ್ತು ಅಧಿಕೃತ ಪಾಲುದಾರರ ಮೂಲಕ ಮರುಬಳಕೆ ಮಾಡಲಿದೆ. ದಿನಕ್ಕೆ ಒಟ್ಟು 77 ಟನ್ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾದ ಈ ಸಂಸ್ಕರಣಾ ಕೇಂದ್ರವು, ಸಾವಯವ ಮತ್ತು ಅಜೈವಿಕ ತ್ಯಾಜ್ಯಗಳೆರಡನ್ನೂ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಪ್ರತಿದಿನ 50 ಟನ್ ವರೆಗೆ ಸಾವಯವ ತ್ಯಾಜ್ಯವನ್ನು ’ಬಯೋ-ಮೆಥನೇಷನ್’ ತಂತ್ರಜ್ಞಾನದ ಮೂಲಕ ಸಂಸ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಜೈವಿಕವಾಗಿ ಕೊಳೆಯುವ ತ್ಯಾಜ್ಯವನ್ನು ವಿಮಾನ ನಿಲ್ದಾಣದ ಅಡುಗೆ ಮನೆಗಳಲ್ಲಿ ಬಳಸಲು ಪೂರಕವಾದ ಸಂಕುಚಿತ ಜೈವಿಕ ಅನಿಲವನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ವಿವರಿಸಿದೆ.
ಇಲ್ಲಿ ಉತ್ಪತ್ತಿಯಾಗುವ ದ್ರವ ಸಾವಯವ ಗೊಬ್ಬರ ಮತ್ತು ಕಾಂಪೋಸ್ಟ್‌ನ್ನು ವಿಮಾನ ನಿಲ್ದಾಣದ ಸಸ್ಯ ಸಂಗೋಪನೆಯ ಅಗತ್ಯಗಳಿಗಾಗಿ ಬಳಸಬಹುದಾಗಿದ್ದು, ಇನ್ನುಳಿದ 27 ಟನ್ ಅಜೈವಿಕ ತ್ಯಾಜ್ಯವನ್ನು ಸುಧಾರಿತ ವರ್ಗೀಕರಣ ವ್ಯವಸ್ಥೆಯ ಮೂಲಕ ಸಂಸ್ಕರಿಸಲಾಗುತ್ತದೆ. ಇದರಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಅಧಿಕೃತ ಮರುಬಳಕೆ ಪಾಲುದಾರರಿಗೆ ಕಳುಹಿಸಲಾಗುತ್ತದೆ ಮತ್ತು ಇಂಧನವಾಗಿ ಬಳಸಬಹುದಾದ ವಸ್ತುಗಳನ್ನು ಸಿಮೆಂಟ್ ಉದ್ಯಮದಲ್ಲಿ ಸಹ-ಸಂಸ್ಕರಣೆಗಾಗಿ ಬಳಸಲಾಗುತ್ತದೆ ಎಂದು ತಿಳಿಸಿದೆ.
ಕೋಟ್
ವಿಮಾನ ನಿಲ್ದಾಣವು ಇತ್ತೀಚೆಗೆ ನಮ್ಮ ವಿಮಾನ ನಿಲ್ದಾಣ, ನಮ್ಮ ಜವಾಬ್ದಾರಿ ಎಂಬ ಕಸ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿತು. ಇದು ಜವಾಬ್ದಾರಿಯುತ ತ್ಯಾಜ್ಯ ವಿಲೇವಾರಿ ಮತ್ತು ಪರಿಣಾಮಕಾರಿ ವಿಂಗಡಣೆ ಮೂಲಕ ಪ್ರಯಾಣಿಕರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ ಸ್ವಚ್ಛತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net