ಕೆಇಎಯಲ್ಲಿ ಅರ್ಜಿ ಕರೆದಿರುವ ಹುದ್ದೆಗಳಿಗೆ ಅರ್ಜಿ ದಾಖಲಿಸುವ ಮುನ್ನ, ಅಭ್ಯರ್ಥಿಗಳ ನೈಜತೆ ಪರಿಶೀಲನೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಡಿಜಿಲಾಕರ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ, ನಾನು ಕಳೆದ ನಾಲ್ಕು ದಿನಗಳಿಂದ ಡಿಜಿಲಾಕರ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಈ ವರೆಗೆ ಸಾಧ್ಯವೇ ಆಗಿಲ್ಲ ಎಂದು ಅಭ್ಯರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.