ಕೃಷಿ ಅಧಿಕಾರಿ ಪರೀಕ್ಷೆ ಸಿದ್ಧತೆ ಪರಿಶೀಲಿಸಿದ ಕೆಇಎ: ವಿರೋಧದ ನಡುವೆಯೂ ಪರೀಕ್ಷೆಗೆ ಸಿದ್ಧತೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Published on

ಪ್ರಮುಖ ಮುಖ್ಯಾಂಶಗಳು

  • ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ (4,217) ಆ.8ರಂದು ಮತ್ತು ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ (14,082) ಆ.9ರಂದು ಪರೀಕ್ಷೆ ನಡೆಯಲಿದೆ.
  • ಕಲ್ಯಾಣ ಕರ್ನಾಟಕ ವೃಂದದವರಿಗೆ ಕಲಬುರಗಿಯ 10 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಬೆಂಗಳೂರಿನ 12, ಹುಬ್ಬಳ್ಳಿಯ 7 ಮತ್ತು ಕಲಬುರಗಿಯ 12 ಕೇಂದ್ರಗಳಲ್ಲಿ ಪರೀಕ್ಷೆ
  • ಅರ್ಜಿ ಸಲ್ಲಿಸಿರುವ ಒಟ್ಟು 18,299 ಅಭ್ಯರ್ಥಿಗಳ ಪೈಕಿ ಬಿ-ಟೆಕ್ ಜೈವಿಕ ತಂತ್ರಜ್ಞಾನದ 626 ಮಂದಿ ಇದ್ದಾರೆ. ಬಿಇ ಜೈವಿಕ ತಂತ್ರಜ್ಞಾನದ 362 ಹಾಗೂ ರಾಯ್ ಟೆಕ್ನಾಲಜಿ ಬಿಎಸ್‌ಸಿ ಕೃಷಿ ಪದವೀಧರರು 221
ಬೆಂಗಳೂರು:

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ.8 ಮತ್ತು 9ರಂದು ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಈ ಸಲುವಾಗಿ ಸಕಲ ತಯಾರಿಯನ್ನು ಮಾಡಿಕೊಂಡಿದೆ.

ಈ ಸಂಬಂಧ ಪರೀಕ್ಷಾ ಸಿದ್ಧತಾ ಸಭೆಯನ್ನು ಮಂಗಳವಾರ ಇಲ್ಲಿ ನಡೆಸಿದ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ (4,217) ಆ.8ರಂದು ಮತ್ತು ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ (14,082) ಆ.9ರಂದು ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದದವರಿಗೆ ಕಲಬುರಗಿಯ 10 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಬೆಂಗಳೂರಿನ 12, ಹುಬ್ಬಳ್ಳಿಯ 7 ಮತ್ತು ಕಲಬುರಗಿಯ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.
ಅರ್ಜಿ ಸಲ್ಲಿಸಿರುವ ಒಟ್ಟು 18,299 ಅಭ್ಯರ್ಥಿಗಳ ಪೈಕಿ ಬಿ-ಟೆಕ್ ಜೈವಿಕ ತಂತ್ರಜ್ಞಾನದ 626 ಮಂದಿ ಇದ್ದಾರೆ. ಬಿಇ ಜೈವಿಕ ತಂತ್ರಜ್ಞಾನದ 362 ಹಾಗೂ ರಾಯ್ ಟೆಕ್ನಾಲಜಿ ಬಿಎಸ್‌ಸಿ ಕೃಷಿ ಪದವೀಧರರು 221 ಮಂದಿ ಇದ್ದಾರೆ.
ಇದುವರೆಗೆ 14 ಸಾವಿರ ಮಂದಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದು, ಉಳಿದ ಅಭ್ಯರ್ಥಿಗಳಿಗೆ ಡೌನ್‌ಲೋಡ್ ಲಿಂಕ್ ಅನ್ನು ವಾಟ್ಸ್‌ಅಪ್ ಮೂಲಕ ಕಳುಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net