ಕೆ.ಸಿ., ಎಚ್​.ಎನ್​.ವ್ಯಾಲಿ ನೀರು ಕೃಷಿಗೆ ಯೋಗ್ಯ

K.C., H.N. Valley water suitable for agriculture
K.C., H.N. Valley water suitable for agriculture
Published on
ಚಿಂತಾಮಣಿ: ಬಯಲುಸೀಮೆಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ 1800 ರಿಂದ 2000 ಅಡಿವರೆಗೂ ಕುಸಿದಿದ್ದು, ಇದನ್ನು ಸುಧಾರಿಸುವ ದೃಷ್ಟಿಯಿಂದ ಸರ್ಕಾರ ಎಚ್​.ಎನ್​.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸುತ್ತಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್​ ಹೇಳಿದರು.
ನಗರದ ಮಾಳಪಲ್ಲಿಯ ಸಚಿವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆರೆಯಲ್ಲಿ ಸಂಗ್ರಹವಾದ ನೀರು ಭೂಮಿಯಲ್ಲಿ ಇಂಗುವ ಮೂಲಕ ಹಲವು ಪದರಗಳ ಮೂಲಕ ಸ್ವಲ್ಪ ಮಟ್ಟಿಗಾದರೂ ಸುಧಾರಣೆಯಾಗಿ ಕೊಳವೆ ಬಾವಿಗಳ ಪುನಶ್ಚೇತನಗೊಳ್ಳುತ್ತವೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆಂಬ ದೃಷ್ಟಿಯಿಂದ ವ್ಯಾಲಿ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.
2 ಹಂತದಲ್ಲಿ ನೀರು ಶುದ್ಧೀಕರಿಸಲಾಗುತ್ತಿದ್ದು, ಈ ಮೂಲಕ ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲು ಹರಿಸಲಾಗುತ್ತಿದ್ದು, ಕುಡಿಯಲು ಯೋಗ್ಯವಾಗ ಬೇಕಾದರೆ 3 ಹಂತಗಳಲ್ಲಿ ಶುದ್ಧೀಕರಣ ಮಾಡಬೇಕಿದೆ ಎಂದರು.
ಭೂಮಿಯ ಪದರಗಳಲ್ಲಿ ನೀರು ಇಂಗುವುದರಿಂದ ಮತ್ತಷ್ಟು ಶುದ್ಧವಾಗುತ್ತದೆ. ಯಾವ ಯಾವ ಭಾಗಗಳಲ್ಲಿ ಎಚ್​.ಎನ್​., ಕೆ.ಸಿ.ವ್ಯಾಲಿ ನೀರು ಬಂದಿದೆ. ಅಲ್ಲಿನ ಕೊಳವೆಬಾವಿಗಳು ಪುನಶ್ಚೇತನಗೊಳ್ಳುತ್ತಿದೆ. ಆದರೆ, ವ್ಯಾಲಿ ನೀರು ಯೋಗ್ಯವಲ್ಲವೆಂದು ಹೇಳಿರುವುದು ಸರಿಯಲ್ಲ. ಇದನ್ನು ನಿರಂತರವಾಗಿ ಭಾರತೀಯ ವಿಜ್ಞಾನ ಸಂಸ್ಥೆ ಪರಿಶೀಲನೆ ಮಾಡಿ ವರದಿ ಕೊಡುತ್ತದೆ ಎಂದರು.
ನಗರದ ಕೆಲವು ಕಡೆ ಇರುವ ಕೆರೆಗಳಲ್ಲಿ ಸಮೀಪ ಎಚ್​.ಎನ್​.ವ್ಯಾಲಿ, ಕೆ.ಸಿ.ವ್ಯಾಲಿ ನೀರಿಗೆ ಒಳಚರಂಡಿ ನೀರು ಸೇರ್ಪಡೆಗೊಳ್ಳುತ್ತಿದ್ದು, ಇಂತಹ ನೀರನ್ನು ಪರೀಸಿದಲ್ಲಿ ಅದು ಅಸುರತವೆಂದು ಕಂಡು ಬರುತ್ತದೆ. ಈಗಾಗಲೇ ಹಲವು ಕೆರೆಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಆದರೆ, ನಗರಗಳ ತ್ಯಾಜ್ಯ ನೀರು ಅದರಲ್ಲಿ ಬೆರುತ್ತಿರುವುದರಿಂದ ತೊಂದೆರೆಯಾಗುತ್ತಿದೆ ಎಂದು ವಿವರಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಕೆರೆಗೆ ಎಚ್​.ಎನ್​.ವ್ಯಾಲಿ ನೀರು ಹರಿಯುತ್ತದೆ. ಅದರೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಒಳಚರಂಡಿಯ ತ್ಯಾಜ್ಯ ನೀರು ಸೇರ್ಪಡೆಗೊಳ್ಳುವುದರಿಂದ ನೀರು ಅಲ್ಲಿ ಕಲುಷಿತಗೊಂಡಿರಬಹು. ಅಲ್ಲಿಂದ ಹರಿಯುವ ತ್ಯಾಜ್ಯ ಮಿಶ್ರಣ ನೀರು ಗೋಪಾಲ ಕೃಷ್ಣಕೆರೆಗೆ ಬರುತ್ತಿದೆ. ಅದರಿಂದ ಅಲ್ಲಿ ಬೇರೆ ರೀತಿಯಾದ ಕಲುಷಿತ ವಾತವರಣ ನಿರ್ಮಾಣವಾಗುತ್ತದೆ. ಅದನ್ನು ತಡೆಗಟ್ಟಲು ಈಗಾಗಲೇ ಎಲ್ಲ ರೀತಿ ಪ್ರಯತ್ನ ಮಾಡಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net