ಬೆಳಗಾವಿ ಬರಪೀಡಿತ ಜಿಲ್ಲೆ ಎಂದು ಘೋಷಿಸಿ: ಕವಟಗಿಮಠ ಒತ್ತಾಯ

ಬರಪೀಡಿತ ಜಿಲ್ಲೆ ಎಂದು ಘೋಷಿಸಿ: ಕವಟಗಿಮಠ ಒತ್ತಾಯ
ಬರಪೀಡಿತ ಜಿಲ್ಲೆ ಎಂದು ಘೋಷಿಸಿ: ಕವಟಗಿಮಠ ಒತ್ತಾಯ
Published on

ಪ್ರಮುಖ ಮುಖ್ಯಾಂಶಗಳು

  • ಬರಪೀಡಿತ ಜಿಲ್ಲೆ ಎಂದು ಘೋಷಿಸಿ
  • ಸರ್ಕಾರಕ್ಕೆ ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯ
  • ಸರ್ಕಾರ ರೈತರ ಬೇಡಿಕೆ ಸ್ಪಂದಿಸುವಂತೆ ಆಗ್ರಹ
  • ಚಿಕ್ಕೋಡಿಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು

ಬರಪೀಡಿತ ಜಿಲ್ಲೆ ಎಂದು ಘೋಷಿಸಿ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಮುಂಗಾರು ಮಳೆ ದುರ್ಬಲದಿಂದ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮುಂಗಾರಿನಲ್ಲಿ ರೈತರು ಸಾವಿರಾರೂ ರೂ.ವೆಚ್ಚ ಮಾಡಿ ಭಿತ್ತನೆ ಮಾಡಿದ ಖರ್ಚುಕೂಡ ರೈತರಿಗೆ ಲಭಿಸುವ ಸಾಧ್ಯತೆ ಕಡಿಮೆಯಿದ್ದು,ಆದ್ದರಿಂದ ಕೂಡಲೇ ಸರ್ಕಾರ ಬೆಳಗಾವಿ ಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಆಗ್ರಹಿಸಿದ್ದಾರೆ.ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಶೇ.೯೮ ರಷ್ಟು ಭಿತ್ತನೆ ಮಾಡಲಾಗಿದೆ. ಆದರೆ ವಾಡಿಕೆಗಿಂತ ಶೆ.೨೯ ರಷ್ಟು ಮಳೆ ಕೊರತೆಯಾಗಿರುವ ಪರಿಣಾಮ ಬೆಳೆಗಳ ಬೆಳವಣಿಹೆ ಕುಂಠಿತಗೊಂಡಿದ್ದು,  ಹೆಸರು,ಉದ್ದು,ಸೋಯಾಬಿನ್‌ಹತ್ತಿ,ಸಜ್ಜೆ ಇತ್ಯಾದಿ ಬೆಳೆಗಳು ಪ್ರಸ್ತುತ ಹಂಗಾಮಿನಲ್ಲಿ ಶೆ.೫೦ ರಷ್ಟು ಇಳುವರಿ ಕುಸಿಯಲಿದ್ದು, ಜತೆಗೆ ೨ ಲಕ್ಷ ಹೆಕ್ಟರ್ ತೋಟಗಾರಿಕೆ ಬೆಳೆಯು ಹಾನಿಯಾಗಿ ರೈತರು ಸಂಕಷ್ಟಕ್ಕಿಡಾಗಿದ್ದಾರೆ ಎಂದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಬೆನ್ನು ಬಿದ್ದು, ಆರ್ಥಿಕ ದಿವಾಳಿಯಾಗಿದ್ದು,ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸರ್ಕಾರದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು.ಎನ್‌ಡಿಆರ್‌ಎಫ್ ಪರಿಹಾರದ ಜತೆಗೆ ರಾಜ್ಯ ಸರ್ಕಾರ ತಮ್ಮ ಪಾಲಿನ ಅನುದಾನ ಸೇರಿಸಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲಿ ತ್ವರಿತವಾಗಿ ಮುಂದಾಗುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಕಬ್ಬು ಬೆಳೆಗೆ ಮಳೆ ಅಭಾವದಿಂದ ದೊಣ್ಣೆ ಹುಳು ಬಾಧಿತವಾಗಿದ್ದು, ಇದರಿಂದ ಕಬ್ಬು ಇಳುವರಿ ಕುಸಿಯುವ ಭೀತಿ ಕಬ್ಬು ಬೆಳೆಗಾರರನ್ನು ಕಾಡುತ್ತಿದೆ. ಈ ಬಗ್ಗೆ ಕೃಷಿ ಸಚಿವರು, ಅಧಿಕಾರಿಗಳು ವಾಸ್ತವ ತಿಳಿದುಕೊಂಡು ಕಬ್ಬು ಬೆಳೆಗಾರರ ಸಮಸ್ಯೆಗೂ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ನಿದ್ರಾವಸ್ಥೆಯಿಂದ ಎಚ್ಚರಗೊಂಡು ರೈತರ ಬೆಳೆ ಹಾನಿ ನೀಡಬೇಕು.ಹಾಗೂ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿ ಅಭಾವ ಇನಷ್ಟು ಹೆಚ್ಚಾಗುವ ಸಂಭವದ ಕುರಿತು ಮುಂಜಾಗೃತ ಕ್ರಮವಹಿಸಬೇಕು.ಹಾಗೂ ಬರ ಪರಿಹಾರದ ಬಗ್ಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಅಮೃತ ಕುಲಕರ್ಣಿ,ಸಂಜಯ ಪಾಟೀಲ, ಪವನ ಮಹಾಜನ, ರಾವಸಾಹೇಬ ಕಮತೆ, ಬಾಬಾಸಾಹೇಬ ಕೆಂಚನ್ನವರ, ರಾಜಶೇಖರ ಖಣದಾಳೆ,ಶಾಂಭವಿ ಅಶ್ವತಪುರ ಇತರರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net