ನೆಲ, ಜಲ ರಕ್ಷಣೆಗೆ ಕರವೇ ಸಿದ್ಧ / NELAMANGAL

ನೆಲಮಂಗಲದ ವೀರಭದ್ರ ಪ್ರಾಥನಾ ಮಂದಿರ ಕವಾಡಿಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು, ಶಿಕ್ಷಕರು ಹಾಗೂ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಸದಸ್ಯ ವಾಸು, ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಇದ್ದರು.
ನೆಲಮಂಗಲದ ವೀರಭದ್ರ ಪ್ರಾಥನಾ ಮಂದಿರ ಕವಾಡಿಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು, ಶಿಕ್ಷಕರು ಹಾಗೂ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಸದಸ್ಯ ವಾಸು, ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಇದ್ದರು.
Published on
ನೆಲಮಂಗಲ : ದೇಶ ಕಾಯುವ ಯೋಧರು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಶಿಕ್ಷಕರು ಹಾಗೂ ಸ್ವಚ್ಛ ಪರಿಸರ ನಿರ್ಮಿಸುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಕರವೇ ಅಧ್ಯಕ್ಷ ಪ್ರವಿಣ್​ಕುಮಾರ್​ ಶೆಟ್ಟಿ ಹೇಳಿದರು.
ನಗರದ ವೀರಭದ್ರ ಪ್ರಾಥನಾ ಮಂದಿರ ಕವಾಡಿಮಠದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ಶೆಟ್ಟಿ ಬಣ)ಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಯೋಧರು, ಶಿಕ್ಷಕರು, ಮಹಿಳಾ ಪೌರ ಕಾರ್ಮಿಕರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕರವೇ ರಾಜ್ಯಾದ್ಯಂತ ಕನ್ನಡ ನಾಡು, ನುಡಿ, ಜಲ ರಕ್ಷಣೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಜತೆಗೆ ಸಾಕಷ್ಟು ಮಂದಿ ರಾಜಕಾರಣಿ, ಸರ್ಕಾರಿ ನೌಕರರು ಸೇರಿ ದೇಶ&ವಿದೇಶದಲ್ಲಿ ವಿವಿಧ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು, ಸಂಘಟನೆ ಒಂದು ತರಬೇತಿ ಕೇಂದ್ರವಾಗಿದೆ. 3 ದಶಕಗಳಿಂದ ಪಾತೀತ, ಜಾತ್ಯತಿತವಾಗಿ ಸಂಘಟನೆ ಕನ್ನಡಪರ, ರೈತಪರ, ಬಡವರಪರ ಸೇರಿ ಅನ್ಯಾಯದ ವಿರುದ್ಧ ಹೋರಾಡುತ್ತ ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆದಿದೆ ಎಂದರು.
ನೆಲಮಂಗಲ ವೇಗವಾಗಿ ಬೆಳೆಯುತ್ತಿದ್ದು, ಸಾಕಷ್ಟು ಕೈಗಾರಿಕಾ ಪ್ರದೇಶ ಹೊಂದಿದೆ. ಆದ್ದರಿಂದ ಕೈಗಾರಿಕೆಯಲ್ಲಿ ಸ್ಥಳಿಯರಿಗೆ ಉದ್ಯೋಗ ನೀಡಬೇಕು. ನೀರವಾರಿ ಯೋಜನೆ ಮೂಲಕ ಸರ್ಕಾರ ತಾಲೂಕಿನ ಶಾಶ್ವತ ನೀರವಾರಿ ಸೌಲಭ್ಯ ಕಲ್ಪಿಸಬೇಕು ಎಂದರು.
ಕರವೇ ಉಪಾಧ್ಯಕ್ಷ ಜಿ.ಉಮೇಶ್​ಗೌಡ ಮಾತನಾಡಿ, ಸಂಘಟನೆ ಪ್ರತಿ ವರ್ಷದಂತೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಯೋಧರಿಗೆ, ನಿವೃತ್ತ ಶಿಕ್ಷಕರಿಗೆ ಸೇರಿ ಈ ಬಾರಿ ವಿಶೇಷವಾಗಿ ಮಹಿಳಾ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ಕಾರ ಕನ್ನಡಿಗರಿಗೆ ಪರವಾನಗಿ ನೀಡಿ : ಬೆಂಗಳೂರು ನಗರದ ವೇಗ ಹಾಗೂ ವಿಶಾಲವಾಗಿ ಬೆಳೆಯುತ್ತಿದೆ. ಅನ್ಯದೇಶ ಹಾಗೂ ರಾಜ್ಯದಿಂದ ವ್ಯಾಪಾರಿಗಳು, ಉದ್ಯಮಿಗಳು ಸೇರಿ ಬಂಡವಾಳಶಾಹಿಗಳು ಬಂದು ಕನ್ನಡವನ್ನು ಕಸಿದುಕೊಳ್ಳುತ್ತಿದ್ದಾರೆ. ಆದ್ದರಿಂದ ರಾಜ್ಯವು ಕನ್ನಡಿಗರಿಗೆ ಹಾಗೂ ಕನ್ನಡ ಮಾತನಾಡಲು ಬರುವವರಿಗೆ ನಿಯಮಾನುಸಾರ ಪರವಾನಗಿ ನೀಡುವ ಕಾರ್ಯ ಮಾಡಬೇಕು ಎಂದು ಕರವೇ ಅಧ್ಯಕ್ಷ ಪ್ರವಿಣ್​ಕುಮಾರ್​ ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ನಿವೃತ್ತ ಯೋಧರು, ಶಿಕ್ಷಕರು ಸೇರಿ ಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್​.ಭಾಸ್ಕರ್​ಪ್ರಸಾದ್​, ಗ್ರಾಪಂ ಮಾಜಿ ಅಧ್ಯಕ್ಷ ಡಾ.ಬಿ.ರಮೇಶ್​, ಟಿಎಪಿಸಿಎಂಎಸ್​ ಅಧ್ಯಕ್ಷ ಹನುಮಂತರಾಜು, ದಲಿತ ಕೂಲಿ ಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಗಂಗಬೈಲಪ್ಪ, ಸಿಐಟಿಯು ತಾಲೂಕು ಅಧ್ಯಕ್ಷ ತಿರುಮಲಚಾರ್​, ಶಿವರಾಜ್​ಗೌಡ, ಜಗದೀಶ್​ಗೌಡ, ಕಾರ್ಯದರ್ಶಿ ಲೋಕೇಶ್​, ಗೋವಾ ರಾಜ್ಯಾಧ್ಯಕ್ಷ ಬಸವರಾಜಗೌಡ, ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನಿರಾಜು, ತಾಲೂಕು ಅಧ್ಯಕ್ಷ ರಾಘವೇಂದ್ರ, ನಗರ ಅಧ್ಯಕ್ಷ ರಂಗಸ್ವಾಮಿ, ಮಹಿಳಾ ಘಟಕ ಅಧ್ಯಕ್ಷೆ ಶೈಲಜಾ, ಕಾರ್ಮಿಕ ಘಟ ಅಧ್ಯಕ್ಷ ಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net