ರಾಜ್ಯದಲ್ಲಿ ಸಾರಿಗೆ ಕ್ರಾಂತಿಯೇ ಸಂಭವಿಸುತ್ತಿದ್ದು, 2025ರ ಜೂನ್ ವೇಳೆಗೆ 8,191 ಕಿ.ಮೀ ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಿುಸಲಾಗಿದೆ. ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಿದ್ದರೆ, ಬೆಂಗಳೂರು ಮೆಟ್ರೋ ಹಂತ- 3ಕ್ಕೆ 15,611 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ದೊರೆತಿದೆ. ರೈಲ್ವೆ ಕ್ಷೇತ್ರದಲ್ಲಿಯೂ ಕ್ರಾಂತಿಕಾರಕ ಬದಲಾವಣೆಯಾಗಿದ್ದು, 2014-24ರ ಅವಧಿಯಲ್ಲಿ ವಾರ್ಷಿಕ ಸರಾಸರಿ 317 ಕಿ.ಮೀ ಹಳಿಗಳ ವಿದ್ಯುದೀಕರಣ ಮಾಡಲಾಗಿದೆ, ಇದು ಹಿಂದಿನ ಅವಧಿಗೆ ಹೋಲಿಸಿದರೆ 18 ಪಟ್ಟು ಹೆಚ್ಚಾಗಿದೆ.