

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕರ್ನಾಟಕ ವೀರಶೈವವಿದ್ಯಾಭಿವೃದ್ಧಿ ಸಂಸ್ಥೆಯು(ಕೆವಿವಿಎಸ್)ಬೆಂಗಳೂರುಮಹಾನಗರದಲ್ಲಿ ನಡೆಸುತ್ತಿರುವಉಚಿತ ವಿದ್ಯಾರ್ಥಿ ನಿಲಯಗಳಪ್ರವೇಶಕ್ಕೆ ಅರ್ಹ ಬಡ ಹಾಗೂಪ್ರತಿಭಾವಂತ ವೀರಶೈವ-ಲಿಂಗಾಯತವಿದ್ಯಾರ್ಥಿ,ವಿದ್ಯಾರ್ಥಿನಿಯರಿಂದಅರ್ಜಿಗಳನ್ನು ಆಹ್ವಾನಿಸಿದೆ.
ಬೆಂಗಳೂರಿನವಿವಿಧ ಕಾಲೇಜುಗಳಲ್ಲಿ ಡಿಪ್ಲೊಮೋ,ನರ್ಸಿಂಗ್,ಪದವಿ,ತಾಂತ್ರಿಕ,ವೈದ್ಯಕೀಯ,ಸ್ನಾತಕೋತ್ತರಮತ್ತಿತರ ವೃತ್ತಿಪರ ಕೋರ್ಸ್ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವಿದ್ಯಾರ್ಥಿ/ವಿದ್ಯಾರ್ಥಿನಿಯರುಅರ್ಜಿ ಸಲ್ಲಿಸಬಹುದು.ಆದರೆ ಪಿಯುಸಿಅಧ್ಯಯನ ಮಾಡುವ ವಿದ್ಯಾರ್ಥಿನಿಯರುಕೂಡಾ ಅರ್ಜಿ ಸಲ್ಲಿಸಬಹುದು.
ಈಗಾಗಲೇಕೆವಿವಿಎಸ್ ಪ್ರಧಾನ ಕಚೇರಿಯಲ್ಲಿಅರ್ಜಿಗಳನ್ನು ವಿತರಿಸಲಾಗುತ್ತಿದೆ.ಕಚೇರಿಯ ವಿಳಾಸ:ಕರ್ನಾಟಕ ವೀರಶೈವವಿದ್ಯಾಭಿವೃದ್ಧಿ ಸಂಸ್ಥೆ,ಕಲ್ಯಾಣ ಸಮುಚ್ಚಯ,2ನೇ ಮಹಡಿ,ನಂ.18/1, 5ನೇ ಮುಖ್ಯರಸ್ತೆ, 6ನೇಅಡ್ಡರಸ್ತೆ,ಗಾಂಧಿನಗರ,ಬೆಂಗಳೂರು.ಇಲ್ಲಿ ಕಛೇರಿವೇಳೆಯಲ್ಲಿ 118ರೂಪಾಯಿ ಪಾವತಿಸಿ,ಜೂ.05ರೊಳಗೆಅರ್ಜಿಯನ್ನು ಪಡೆದುಕೊಳ್ಳಬಹುದು. ನಂತರ ಭರ್ತಿಮಾಡಿದ ಅರ್ಜಿಗಳನ್ನು ಜೂ.10ರೊಳಗೆಸಲ್ಲಿಸತಕ್ಕದ್ದು.ಹೆಚ್ಚಿನ ಮಾಹಿತಿಗೆದೂ: 080 22266416ಸಂಪರ್ಕಿಸಬಹುದು.
ಕರ್ನಾಟಕವೀರಶೈವ ವಿದ್ಯಾಭಿವೃದ್ಧಿಸಂಸ್ಥೆಯು ಶತಮಾನದ ಇತಿಹಾಸವಿರುವಪ್ರತಿಷ್ಠಿತ ಸಂಸ್ಥೆ.ರಾಜ್ಯದ ವಿವಿಧಪ್ರಾಂತ್ಯಗಳಲ್ಲಿನ ವೀರಶೈವಲಿಂಗಾಯತ ಸಮುದಾಯದ ಬಡ ವಿದ್ಯಾರ್ಥಿಗಳಶೈಕ್ಷಣಿಕ ಅಭಿವೃದ್ಧಿಗೆ ನಿರಂತರಸೇವೆ ಸಲ್ಲಿಸುತ್ತಿರುವ ಸಂಸ್ಥೆಯಕೊಡುಗೆ ಸಮಾಜಕ್ಕೆ ಅಪಾರ. ಸಾವಿರಾರುವಿದ್ಯಾರ್ಥಿಗಳಿಗೆ ಉತ್ತಮ ವಸತಿ,ಗುಣಮಟ್ಟದಆಹಾರವನ್ನು ನೀಡಿ ಅವರ ವಿದ್ಯಾಭ್ಯಾಸಕ್ಕೆವಿಶೇಷ ಸೇವೆಯನ್ನು ಒದಗಿಸುತ್ತಿದೆ. ವಿಜಯನಗರದಹೊಸಹಳ್ಳಿ ಮೆಟ್ರೋ ನಿಲ್ದಾಣದಎದುರಿಗಿರು ಬಸವೇಶ್ವರ ಹಾಸ್ಟೆಲ್ನಲ್ಲಿ1.5 ಸಾವಿರವಿದ್ಯಾರ್ಥಿಗಳಿಗೆ ಬೇಕಾದ ವಸತಿಸೌಕರ್ಯವಿದೆ.ಹಾಗೂ ಕಾಟನ್ಪೇಟೆಮತ್ತು ಆರ್ಪಿಸಿ ಲೇಔಟ್ನಲ್ಲಿವಿದ್ಯಾರ್ಥಿನಿಯರ ನಿಲಯವಿದೆ.ಹಿರಿಯ ಸಹಕಾರಿಧುರೀಣರಾದ ಬಿ.ಎಸ್.ಪರಮಶಿವಯ್ಯನವರುಕಳೆದ ಹಲವು ವರ್ಷಗಳಿಂದ ಕೆವಿವಿಎಸ್ಅಧ್ಯಕ್ಷರಾಗಿ ಸಂಸ್ಥೆಯನ್ನುದೊಡ್ಡಮಟ್ಟದಲ್ಲಿ ಅಭಿವೃದ್ಧಿಪಡಿಸಿದ್ದಾರೆ.