ಬಾಗಲಕೋಟೆಯಲ್ಲಿ ಬೆಚ್ಚಿಬೀಳಿಸುವ ಕೃತ್ಯ; ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದ ಪತ್ನಿ, ವಿಡಿಯೋ ರೆಕಾರ್ಡ್ ಮಾಡಿದ ಪಾಪಿ ಪತಿ..Bagalkot

 Man Hangs Wife Video Calls Her Parents To Show Her Dying
Man Hangs Wife Video Calls Her Parents To Show Her Dying
Published on

ಪ್ರಮುಖ ಮುಖ್ಯಾಂಶಗಳು

  • ಬಾಗಲಕೋಟೆಯಲ್ಲಿ ಪತ್ನಿ ನೇಣು ಬಿಗಿದುಕೊಂಡು ಒದ್ದಾಡಿದ ವಿಡಿಯೋ ರೆಕಾರ್ಡ್ ಮಾಡಿದ ಪತಿ.
  • ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಘಟನೆ ಬೆಳಕಿಗೆ.
  • ಅನೈತಿಕ ಸಂಬಂಧ ಶಂಕಿಸಿ ನಿತ್ಯ ಜಗಳವಾಡುತ್ತಿದ್ದ ಪತಿ ಪ್ರವೀಣ್ ಜಿಗಳೂರು.
ಬಾಗಲಕೋಟೆ: ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದರೆ, ಆ ಮಧ್ಯೆ ಪತಿ ಆಕೆ ಜೀವನ್ಮರಣ ಹೋರಾಟ ನಡೆಸುತ್ತಿರುವ ವಿಡಿಯೋ ರೆಕಾರ್ಡ್​ ಮಾಡಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿಬೆಳಕಿಗೆ ಬಂದಿದೆ.
23 ವರ್ಷದ ಭಾಗ್ಯಶ್ರೀ ಜಿಗಳೂರು ಮೃತ ಮಹಿಳೆ. ಆರೋಪಿಯನ್ನು ಪ್ರವೀಣ್ ಜಿಗಳೂರು ಎಂದು ಗುರುತಿಸಲಾಗಿದೆ. ಕಳೆದ ಆರು ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗು ಇದೆ ಎನ್ನಲಾಗಿದೆ.

ಪೊಲೀಸರು ಏನಂದ್ರು?

ಭಾನುವಾರ ಸಂಜೆ ಪ್ರವೀಣ್​ ತನ್ನ ಪತ್ನಿ ಮೇಲೆ ಮರದ ದಿಮ್ಮಿಯಿಂದ ಹಲ್ಲೆ ಮಾಡಿ, ಆ ನಂತರ ನೇಣು ಹಾಕಿದ್ದಾನೆ. ಆ ಜೀವನ್ಮರಣ ಹೋರಾಟವನ್ನು ಆಕೆಯ ಕುಟುಂಬಸ್ಥರಿಗೆ ತೋರಿಸುವ ಸಲುವಾಗಿ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​​ ಮಾಡಿದ್ದಾನೆ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಭಾನುವಾರ ಏನಾಗಿತ್ತು?

ಮೃತ ಭಾಗ್ಯಶ್ರೀ ಮಹಾಲಿಂಗಪುರದವರು. ಆಕೆ ಅಲ್ಲಿಯ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನುವ ಶಂಕೆಯನ್ನು ಪ್ರವೀಣ್​ ಹಾಗಾಗ್ಗೆ ವ್ಯಕ್ತಪಡಿಸುತ್ತಿದ್ದ. ಇದಕ್ಕೆ ಪೂರಕವಾಗಿ ಅವರಿಬ್ಬರು ಒಟ್ಟಾಗಿರುವ ವಿಡಿಯೋ ಆತನಿಗೆ ಸಿಕ್ಕಿತ್ತಂತೆ. ಇದರಿಂದ ಸಿಟ್ಟಾಗಿ ಇಬ್ಬರ ಮಧ್ಯೆ ಆಗಾಗ್ಗೆ ಜಗಳವೂ ಆಗುತ್ತಿತ್ತು ಎನ್ನಲಾಗಿದೆ.ನಿತ್ಯ ಅನುಮಾನ, ಜಗಳ ಎಲ್ಲ ಸಹಿಸಿಕೊಂಡು ಸಾಕಾಗಿ ಭಾಗ್ಯಶ್ರೀ ತವರು ಮನೆಗೆ ತೆರಳಿದ್ದರಂತೆ. ಸುಖವಾಗಿ ಯಾವುದೇ ಜಗಳವಿಲ್ಲದೆ ಸಂಸಾರ ಮಾಡೋಣ ಎಂದು ಭರವೆಸೆ ನೀಡಿ, ಆಕೆಯನ್ನು ಅಲ್ಲಿಂದ ಕರೆದು ತಂದಿದ್ದನಂತೆ.
ಆದರೆ, ಈ ಮಧ್ಯೆ ಆಕೆ ತನ್ನ ಮನೆಯಲ್ಲಿಮ ಕಬ್ಬಿಣದ ಕಂಬಕ್ಕೆ0 ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಆಕೆ ಆತ್ಮಹತ್ಯೆಗೆ ಯತ್ನಿಸಿ ಉಸಿರುಗಟ್ಟಿ ಒದ್ದಾಡುವಾಗ ಅಲ್ಲಿಯೇ ಇದ್ದ ಪ್ರವೀಣ್​, ಪತ್ನಿಯನ್ನು ಕಾಪಾಡುವ ಬದಲಾಗಿ ವಿಡಿಯೋ ರೆಕಾರ್ಡ್​ ಮಾಡಿದ್ದಾನೆ ಎನ್ನಲಾಗಿದೆ.

ನಮ್ಮ ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ರಾಯಚೂರು ಮೂಲದ ರಾಜೇಶ್ ಹಿರೇಮಠ (35) ಮೃತ. ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್, ಮೂರು ತಿಂಗಳ ಹಿಂದೆ ಕೆಲಸ ಬಿಟ್ಟು ಬೆಳಗಾವಿಯ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿಗೆ ಯಾವಾಗ ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿಲ್ಲ. ಸೋಮವಾರ ಸಂಜೆ 6 ಗಂಟೆಗೆ ರಾಜೇಶ್ ಮೆಟ್ರೋ ಹಳಿಗೆ ಹಾರುತ್ತಿದ್ದಂತೆ ಅಲ್ಲಿದ್ದ ನಿಲ್ದಾಣ ನಿಯಂತ್ರಕ ಮತ್ತು ಭದ್ರತಾ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದರು. ಬಳಿಕ ರೈಲಿನಡಿ ಸಿಲುಕಿದ್ದವನನ್ನು ಹರಸಾಹಸದಿಂದ ಮೇಲಕ್ಕೆತ್ತಿದರು. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಆತನ ಪಾಲಕರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಪರಿಣಾಮ ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಬೊಮ್ಮಸಂದ್ರ ಕಡೆಗೆ ಹೊರಡುವ ಮೆಟ್ರೋ ರೈಲುಗಳ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮಾತ್ರ ಸಂಚಾರ ಮುಂದುವರಿಯಿತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net