ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಈ 3 ದಿನ ಮಧ್ಯರಾತ್ರಿವರೆಗೆ ರೆಸ್ಟೋರೆಂಟ್​ಗಳು ಓಪನ್​

ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್
Published on

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್​ ಪಂದ್ಯಗಳ ಹಿನ್ನೆಲೆಯಲ್ಲಿ ಮಧ್ಯರಾತ್ರಿಯವರೆಗೆ ರೆಸ್ಟೋರೆಂಟ್​ಗಳು ಓಪನ್​
  • ಜುಲೈ 14, 15 ಹಾಗೂ 19ರಂದು ಈ ಆದೇಶ ಜಾರಿ
ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಫಿಫಾ 2026ರ ವಿಶ್ವಕಪ್​ ಟೂರ್ನಿಯ ಕೊನೆಯ ಹಂತದ ಪಂದ್ಯಗಳು ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಫುಟ್ಬಾಲ್​ ಪ್ರೇಮಿಗಳಿಗೆ ರಾಜ್ಯ ಸರ್ಕಾರ ಕೆಲವು ದಿನಗಳಿಗೆ ಮಾತ್ರ ತಡರಾತ್ರಿ ಬೆಂಗಳೂರಿನ ಹೋಟೆಲ್​ ಮತ್ತು ರೆಸ್ಟೋರೆಂಟ್​ಗಳಲ್ಲಿ ಆಹಾರ ಸೇವೆ ಒದಗಿಸಲು ಅನುಮತಿ ನೀಡಿದೆ.
ಪಂದ್ಯ ನಡೆಯುವ ಮೂರು ದಿನಗಳು ಮಧ್ಯರಾತ್ರಿ 3.30ರ ವರೆಗೆ ಹೊಟೇಲ್ ಹಾಗೂ ರೆಸ್ಟೋರೆಂಟ್​ಗಳಲ್ಲಿ ಆಹಾರ ಸೇವೆಗೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ ಮನವಿಯ ಹಿನ್ನೆಲೆಯಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ ಜುಲೈ 14, 15 ಹಾಗೂ 19ರಂದು ಈ ಆದೇಶ ಅನ್ವಯವಾಗುವಂತೆ ಸರ್ಕಾರ ನಿರ್ಧರಿಸಿದೆ.
ಸಾರ್ವಜನಿಕ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ನಾಗರಿಕರ ಅನುಕೂಲವು ನಮ್ಮ ಆದ್ಯತೆ. ಪ್ರತಿಯೊಬ್ಬರೂ ಪಂದ್ಯಗಳನ್ನು ಜವಾಬ್ದಾರಿಯುತವಾಗಿ ಆನಂದಿಸಿ ಮತ್ತು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡಿ ಎಂದು ಸಿಎಂ ಡಿಕೆ ಶಿವಕುಮಾರ್​ ಫುಟ್ವಾಲ್​ ಪ್ರೇಮಿಗಳಿಗೆ ಕೇಳಿಕೊಂಡಿದ್ದಾರೆ. ಪಂದ್ಯಗಳು ನಡೆಯುವ ಈ ಮೂದು ದಿನಗಳು ರಾಜ್ಯ ಪೊಲೀಸ್ ಕಾಯ್ದೆ ಅನ್ವಯ ತಡರಾತ್ರಿ ಪಂದ್ಯ ಪ್ರದರ್ಶನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಆದೇಶಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net