ಆಹಾರ ಇಲಾಖೆಯ ರೇಡ್ನಲ್ಲಿ ಒಟ್ಟು 35 ಆಹಾರದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿರುವ ಪದಾರ್ಥಗಳ ಪೈಕಿ ಚಹಾ ಪುಡಿ, ಚಿಕನ್, ಮಟನ್, ಮೀನು, ಅಡುಗೆ ಎಣ್ಣೆ, ಮೆಣಸಿನ ಪುಡಿ, ಅರಿಶಿನ ಪುಡಿ, ಟೊಮೆಟೊ ಸಾಸ್, ನಿಂಬೆ ರಸ, ಚೀಸ್, ಪಾಪಡ್, ಗೋಡಂಬಿ, ಶುಂಠಿ, ಮೆಣಸು ಪುಡಿ, ಮಸಾಲೆ ಪುಡಿ ಮತ್ತು ಹಾಲು ಸೇರಿವೆ. ಕೆಲವು ಐಷಾರಾಮಿ ಹೋಟೆಲ್ಗಳಲ್ಲಿ ಕೊಳೆತ ಮಾಂಸಗಳೇ ಹೆಚ್ಚಾಗಿ ಪತ್ತೆಯಾಗಿರುವುದು ನಿಜಕ್ಕೂ ಆಘಾತಕಾರಿ ಸಂಗತಿ.