ಬೆಂಗಳೂರು: ವಿಧಾನ ಪರಿಷತ್‌ನ 7 ಸ್ಥಾನಗಳಿಗಾಗಿ ನಡೆದ ಮತದಾನದ (Karnataka Council Election) ಫಲಿತಾಂಶ ಇಂದು ಸಂಜೆ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 32 ಮತಗಳಿಂದ ಗೆದ್ದ ವಿನಯ್ ಕಾರ್ತಿಕ್, ಅತಿ ಹೆಚ್ಚು ಮತಗಳನ್ನು ಗಳಿಸಿ 'ಕೈ' ಗೆಲುವಿಗೆ ಸಾಕ್ಷಿಯಾಗಿದ್ದಾರೆ.
6 ಜೆಡಿಎಸ್, 3 ಬಿಜೆಪಿ ಶಾಸಕರಿಂದ ಅಡ್ಡ ಮತದಾನ!
ಏಳನೇ ಸ್ಥಾನದ ಈ ರೋಚಕ ಕದನದಲ್ಲಿ ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್‌ನ ಗೋವಿಂದರಾಜು ನಡುವೆ ಪೈಪೋಟಿ ಇತ್ತು, ಇಬ್ಬರಿಗೂ ಮ್ಯಾಜಿಕ್ ನಂಬರ್ 28 ತಲುಪಲು ಸ್ವಪಕ್ಷೀಯ ಮತಗಳ ಕೊರತೆ ಕಾಡುತ್ತಿತ್ತು. ಹೀಗಾಗಿ 3 ಪಕ್ಷೇತರರು, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ 3 ಶಾಸಕರು ಹಾಗೂ ಈಗಷ್ಟೇ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಜನಾರ್ದನ ರೆಡ್ಡಿ ಅವರ ಮತಗಳು ಇಲ್ಲಿ ನಿರ್ಣಾಯಕ ಗೇಮ್ ಚೇಂಜರ್ ಆಗಲಿವೆ ಎಂಬ ನಿರೀಕ್ಷೆಗಳು ಮೂಡಿತ್ತು. ಶಿವರಾಮ್ ಹೆಬ್ಬಾರ್ ಮತ್ತು ಎಸ್ಟಿ ಸೋಮಶೇಖರ್ ಇಬ್ಬರನ್ನೂ ಹೊರತುಪಡಿಸಿ, ಒಟ್ಟು ಜೆಡಿಎಸ್‌ನ ಏಳು ಮತ್ತು ಬಿಜೆಪಿಯ ಮೂವರು ಶಾಸಕರಿಂದ ಅಡ್ಡ ಮತದಾನ ನಡೆದಿದ್ದೇ ಸದ್ಯ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.