ಮೃತ ಭಿಕ್ಷುಕಿ ಮನೆಯಲ್ಲಿತ್ತು ಲಕ್ಷ ಲಕ್ಷ ಹಣ; 30 ಚೀಲದಲ್ಲಿ ನೋಟು, ಚಿಲ್ಲರೆ ಸೇರಿದಂತೆ 8.40 ಲಕ್ಷ ರೂ.ಪತ್ತೆ..Mandya

Karnataka Beggar Dies Rs 8.40 Lakh Found
Karnataka Beggar Dies Rs 8.40 Lakh Found
Published on

ಪ್ರಮುಖ ಮುಖ್ಯಾಂಶಗಳು

  • ಮಂಡ್ಯದಲ್ಲಿ ಭಿಕ್ಷುಕಿ ಮೃತ; ಮನೆಯಲ್ಲಿ ಕಂತು ಕಂತು ನೋಟುಗಳು ಪತ್ತೆ.
  • ಭಿಕ್ಷಾಟನೆ ಮಾಡಿ 30 ಚೀಲದಲ್ಲಿ 8.40 ಲಕ್ಷ ರೂ. ಹಣ ತುಂಬಿಸಿಟ್ಟಿದ್ದ ಭಿಕ್ಷುಕಿ.
  • ನೋಟು, ಚಿಲ್ಲರೆಗಳನ್ನು ಎಣಿಕೆ ಮಾಡಿ ಸಂಬಂಧಿಕರಿಗೆ ಕೊಟ್ಟ ಸ್ಥಳೀಯರು.

ಮಂಡ್ಯ: ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ವೃದ್ಧೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮಂಡ್ಯದಲ್ಲಿ ಶನಿವಾರ ಮೃತಪಟ್ಟಿದ್ದು, ಅವರ ಮನೆಯಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾದ ಘಟನೆ ಗುತ್ತಲು ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.

ಮೃತ ವೃದ್ಧೆಯನ್ನು 68 ವರ್ಷದ ಹೂರ್​ ಉನ್ನೀಸ್​ ಎಂದು ಗುರುತಿಸಲಾಗಿದೆ. ಆಕೆಯ ಮನೆಯಲ್ಲಿದ್ದ ಮೂವತ್ತಕ್ಕೂ ಹೆಚ್ಚು ಮೂಟೆಯಲ್ಲಿ ಚಿಲ್ಲರೆ ಕಾಸು, ನೋಟುಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಪತ್ತೆಯಾಗಿದೆ. ವೃದ್ಧೆ ಮನೆಯಲ್ಲಿ ಸಿಕ್ಕ ಹಣ ಕಂಡು ಸ್ಥಳೀಯರು ಶಾಕ್​ ಆಗಿದ್ದಾರೆ.

30 ಚೀಲದಲ್ಲಿತ್ತು ಹಣ

ಮಂಡ್ಯದ ಗುತ್ತಲು ಬಡಾವಣೆಯಲ್ಲಿದ್ದ

ಹೂರ್​ ಉನ್ನೀಸ್

​ಗೆ ಕುಟುಂಬಸ್ಥರು ಇರಲಿಲ್ಲ. ಯಾರು ಅವರೊಂದಿಗೆ ಮಾತನಾಡುತ್ತಿರಲಿಲ್ಲ. ಹೀಗಾಗಿ ಹಲವು ವರ್ಷಗಳಿಂದ ನಿತ್ಯ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಕ್ಕನೊಂದಿಗಿದ್ದ ಹೂರ್

ಹೂರ್​ ಉನ್ನೀಸ್​ ಮತ್ತು ಅವರ ಅಕ್ಕ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ಇಬ್ಬರಿಗೂ ಮದುವೆಯಾಗಿರಲಿಲ್ಲ. ಆದರೆ,

ಸಹೋದರಿ ಇತ್ತೀಚೆಗೆ ನಿಧನರಾಗಿದ್ದರು. ಅದೇ ಬಾಡಿಗೆ ಮನೆಯಲ್ಲಿ ಹೂರ್​ ಒಬ್ಬರೆ ವಾಸ ಮಾಡುತ್ತಿದ್ದರು ಎನ್ನಲಾಗಿದೆ.

ಒಂದೆರಡು ದಿನಗಳಿಂದ ಹೂರ್​ ರಸ್ತೆಗಳಲ್ಲಿ ಕಾಣಲಿಲ್ಲ. ಹೀಗಾಗಿ ಅನುಮಾನಗೊಂಡ ಸಂಬಂಧಿಕರು ಮನೆಗೆ ತೆರಳಿ ನೋಡಿದಾಗ ಮೃತಪಟ್ಟಿರುವುದು ಖಾತ್ರಿಯಾಗಿದೆ.

ಸಂಬಂಧಿಕರಿಗೆ ಹಣ ಕೊಟ್ಟ ಗ್ರಾಮಸ್ಥರ

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ನೂರ್​​ ಮನೆಯಲ್ಲಿದ್ದ ವಸ್ತುಗಳು, ಹಣವನ್ನು ಜಾಲಾಡುತ್ತಿರುವ ದೃಶ್ಯ ವೈರಲ್​ ಆಗಿದೆ. ಕೆಲವರು ಆಕೆಯ ಮನೆಯಲ್ಲಿದ್ದ ಮೂವತ್ತು ಮೂಟೆಯಲ್ಲಿ 10, ಇಪ್ಪತ್ತು ಮತ್ತು 50 ರೂಪಾಯಿ ನೋಟಿಗಳನ್ನು ಎಣಿಸುತ್ತಾ ಕೂತರೇ ಇನ್ನೂ ಕೆಲವರು ನಾಣ್ಯವನ್ನು ಎಣಿಕೆ ಮಾಡುತ್ತರುವ ವಿಡಿಯೋ ಇದೆ.

ಒಟ್ಟಾರೆಯಾಗಿ ಎಲ್ಲರೂ ಸೇರಿ ಎಣಿಗೆ ಮಾಡಿದ ಮೊತ್ತ 8,40,000 ರೂ.ಆ ಹಣವನ್ನು ಆಕೆಯ ಸಹೋದರರಿಗೆ ಹಸ್ತಾಂತರಿಸಲಾಯಿತು. ಒಬ್ಬ ಸಹೋದರ 6 ಲಕ್ಷ ರೂ.ಗಳನ್ನು ಪಡೆದರೆ, ಇನ್ನೊಬ್ಬ ಸಹೋದರ 2,40,000 ರೂ.ಗಳನ್ನು ಪಡೆದು ಮಸೀದಿಗೆ ದಾನ ಮಾಡಿದರು ಎನ್ನಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net