ಈ ಬಾರಿಯ ಫಲಿತಾಂಶದಲ್ಲಿ ಹಳ್ಳಿ ಮಕ್ಕಳ ಸಾಧನೆ ಎದ್ದು ಕಾಣುತ್ತಿದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು 92.77% ಉತ್ತೀರ್ಣರಾಗುವ ಮೂಲಕ, 92.01% ಫಲಿತಾಂಶ ಪಡೆದ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಮುನ್ನಡೆ ಸಾಧಿಸಿದ್ದಾರೆ. ಇನ್ನು ಲಿಂಗವಾರು ಫಲಿತಾಂಶದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬಾಲಕಿಯರು 93.62% ಹಾಗೂ ಬಾಲಕರು 90.52% ಉತ್ತೀರ್ಣರಾಗಿದ್ದಾರೆ.