ಎಂಎನ್ ಕೋಟೆ: ಗುಬ್ಬಿ ತಾಲೂಕಿನ ಮುದ್ದಪುರ ಗೊಲ್ಲರಹಟ್ಟಿ ಗ್ರಾಮದ ಶ್ರೀ ಮೂಡಲಗಿರಿ ತಿಮ್ಮಪ್ಪ ಸ್ವಾಮಿ ಹಾಗೂ ಹಾಗಲವಾಡಿ ಜಂಜಪ್ಪನಹಟ್ಟಿ ಗ್ರಾಮದ ಶ್ರೀ ಕರಿಯಮ್ಮ ದೇವಿಯ ೫ನೇ ವರ್ಷದ ಜಾತ್ರಾ ಮಹೋತ್ಸವ ಫೆ.೨೧ ಮತ್ತು ೨೨ರಂದು ನಡೆಯಲಿದೆ ಎಂದು ಕಾಡುಗಲ್ಲ ಮುಖಂಡ ಸಿದ್ದರಾಜು ತಿಳಿಸಿದರು.
ಹೋಬಳಿಯ ಮುದ್ದಾಪುರ ಗೊಲ್ಲರಟ್ಟಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಾತನಾಡಿ, ಇತಿಹಾಸ ಪ್ರಸಿದ್ಧ ಮೂಡಲಗಿರಿ ತಿಮ್ಮಪ್ಪಸ್ವಾಮಿ ಜಾತ್ರಾಮಹೋತ್ಸವಕ್ಕೆ ನಾಡಿನ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಲಿದ್ದು, ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ದೇವಾಲಯ ಸಮಿತಿಯಿಂದ ಸಕಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಫೆ.೨೧ರಂದು ಶ್ರೀ ಮೂಡಲಗಿರಿ ತಿಮ್ಮಪ್ಪ ಸ್ವಾಮಿ ಅವರು ಗಂಗಸ್ಥಾನದೊಂದಿಗೆ ಸ್ವಗ್ರಾಮಕ್ಕೆ ಆಗಮಿಸಲಿದ್ದು, ನಂತರ ಹಾಗಲವಾಡಿ ಜುಂಜಪ್ಪನಹಟ್ಟಿ ಗ್ರಾಮದ ಶ್ರೀ ಬೇವಿನಹಳ್ಳಿ ಶ್ರೀ ಕರಿಯಮ್ಮ ದೇವರ ಉತ್ಸವ ಊರಿನ ರಾಜ ಬೀದಿಗಳಲ್ಲಿ ಉತ್ಸವದೊಂದಿಗೆ ದೇವಾಲಯಕ್ಕೆ ಆಗಮಿಸಲಿದೆ.
ರಾತ್ರಿ ಧಾರ್ಮಿಕ ಸವಾರಂಭದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗ ಮಠದ ಶ್ರೀ ಕೃಷ್ಣ ಯಾದವನಂದ ಸ್ವಾಮೀಜಿ ಹಾಗೂ ವನಕಲ್ಲು ಮಠದ ಶ್ರೀ ಡಾ.ಬಸವ ರವಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.
ಶಾಸಕ ಎಸ್.ಆರ್ ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ, ಕಾಡುಗೋಲ ನಿಗಮದ ಅಧ್ಯಕ್ಷ ಹಾರೋರೆಗೆ ಮಹೇಶ್, ಮುಖಂಡರಾದ ಬೆಟ್ಟಸ್ವಾಮಿ, ಬಿ.ಎಸ್ ನಾಗರಾಜು ಯೋಗಾನಂದ ಕುವಾರ್, ದಿಲೀಪ್ ಕುವಾರ್, ಚಂಗವಾರ ಕರಿಯಪ್ಪ ಭಾಗವಹಿಸಲಿದ್ದಾರೆ ಎಂದರು.