ಕಾರ್ಗಿಲ್​ ವಿಜಯೋತ್ಸವ ಭಾನುವಾರ

Kargil Victory Day Sunday
Kargil Victory Day Sunday
Published on
ಬೆಳಗಾವಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂವು 27ನೇ ಕಾರ್ಗಿಲ್​ ವಿಜಯ ಸ್ಮರಣೆ ಹಾಗೂ ಹಾಗೂ ಆಪರೇಷನ್​ ಸಿಂಧೂರ ಸಂಭ್ರಮಾಚರಣೆ ಪ್ರಯುಕ್ತ ಜು.26ರಂದು ಬೆಳಗ್ಗೆ 11ಕ್ಕೆ ಕೆಪಿಟಿಸಿಎಲ್​ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಯುದ್ಧಗಳಲ್ಲಿ ಭಾಗಿಯಾದ ಐವರು ವೀರ ಯೋಧರಿಗೆ ಜನರಲ್​ ಕರಿಯಪ್ಪ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಮಾಜಿ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾದ ಮೂವರು ಯೋಧರ ಕುಟುಂಬ ಸದಸ್ಯರು ಹಾಗೂ ಕಾರ್ಗಿಲ್​ ಯುದ್ಧದಲ್ಲಿ ಪಾಲ್ಗೊಂಡ ಇಬ್ಬರು ಸೈನಿಕರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದರು.
ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಶಾಸಕಿ ಲಕ್ಷಿ$್ಮ ಹೆಬ್ಬಾಳ್ಕರ್​ ಸೇರಿ ಜಿಲ್ಲೆಯ ವಿವಿಧ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಅಂಧ ಹಾಗೂ ಅನಾಥ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ ವಿತರಣೆ, ವಿವಿಧ ಪರೀಕ್ಷೆಗಳಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸತ್ಕಾರ ಹಾಗೂ ಆದರ್ಶ ಮಾಜಿ ಸೈನಿಕ ದಂಪತಿಗಳ ಸನ್ಮಾನ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿರೂಪಾಕ್ಷ ತಿಳಗಂಜಿ, ಶಂಕರ ಹರ್ಜೆ, ರೇಣುಕಾ ಪಾಟೀಲ, ಅಡಿಕೆಪ್ಪ ಮನಗುತ್ತಿ, ಕೆಂಪಣ್ಣ ಲಕ್ಕನ್ನವರ, ಆಶಾರಾಣಿ ವನ್ನೂರ, ರೇಣುಕಾ ಪಾಟೀಲ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net