ತೆಲಗರಹಳ್ಳಿಯಲ್ಲಿ ಕರಗ ವೈಭವ / ANEKAL

ಆನೇಕಲ್​ನ ತೆಲಗರಹಳ್ಳಿಯಲ್ಲಿ ಧರ್ಮರಾಯಸ್ವಾಮಿ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಆನೇಕಲ್​ನ ತೆಲಗರಹಳ್ಳಿಯಲ್ಲಿ ಧರ್ಮರಾಯಸ್ವಾಮಿ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
Published on
ಆನೇಕಲ್​ : ತಾಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಲಗರಹಳ್ಳಿ ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ಹಾಗೂ ದ್ರೌಪದಮ್ಮ ಕರಗ ಮಹೋತ್ಸವವು ಸಡಗರದಿಂದ ನಡೆಯಿತು.
ಬೆಳಗಿನ ಜಾವ ಸುಮಾರು 3:30ಕ್ಕೆ ದೇವಾಲಯದಿಂದ ಕರಗ ಹೊರಬರುತ್ತಿದ್ದಂತೆ ಭಕ್ತಿಯ ಪರಾಕಾಷ್ಠೆ ಕಂಡುಬಂದಿತು. ದೇವಾಲಯದ ಮುಂಭಾಗ ಸಜ್ಜುಗೊಳಿಸಲಾಗಿದ್ದ ಅಗ್ನಿಕೊಂಡವನ್ನು ಕರಗ ಹೊತ್ತ ಪೂಜಾರಿ ಪ್ರವೇಶಿಸುತ್ತಿದ್ದಂತೆ, ಭಕ್ತರು 'ಗೋವಿಂದ ಗೋವಿಂದ' ಎಂಬ ೂಷಣೆಗಳೊಂದಿಗೆ ಆಕಾಶವನ್ನೇ ಮುಟ್ಟುವಂತೆ ಹರ್ಷ ವ್ಯಕ್ತಪಡಿಸಿದರು. ಕರಗ ಹೊರಬರುವ ವೇಳೆ ವೀರಕುಮಾರರು ನೆರೆದಿದ್ದ ಸಾವಿರಾರು ಭಕ್ತರಿಂದ ದೀಕ್​ ಡೀ, ಗೋವಿಂದ ಗೋವಿಂದ ಎಂಬ ನಾಮಸ್ಮರಣೆ ಮುಗಿಲುಮುಟ್ಟಿತ್ತು.
ನಾದಸ್ವರದ ಮೋಡಿ ಮಾಡುವ ರಾಗಕ್ಕೆ ತಕ್ಕಂತೆ ಕರಗ ಹೊತ್ತ ಪೂಜಾರಿ ಹಾಕಿದ ಹೆಜ್ಜೆಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದವು. ಗ್ರಾಮದ ಗ್ರಾಮ ದೇವತೆಗಳ ಪಲ್ಲಕ್ಕಿಗಳನ್ನು ವಿಶೇಷವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು. ವಿವಿಧ ಕಲಾತಂಡಗಳೊಂದಿಗೆ ನಡೆದ ಪಲ್ಲಕ್ಕಿ ಮೆರವಣಿಗೆ ನೆರೆದಿದ್ದ ಜನರ ಕಣ್ಮನ ಸೆಳೆಯಿತು.
ಕರಗ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 'ರಸ ಸಂಜೆ' ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಿಂದ ನೃತ್ಯ ಮತ್ತು ಗಾಯನದ ಸುರಿಮಳೆಯೇ ಹರಿಯಿತು. ತಾಲೂಕಿನ ಬಿಜೆಪಿ ಬೆಂಗಳೂರು ನಗರ ಜಿಲ್ಲೆ ಉಪಾಧ್ಯ ಹುಲ್ಲಹಳ್ಳಿ ಶ್ರೀನಿವಾಸ್​ ಧರ್ಮರಾಯಸ್ವಾಮಿ ಹಾಗೂ ದ್ರೌಪದಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹಾಲದೇನಹಳ್ಳಿ ತಿಮ್ಮರಾಜು, ತೆಲಗರಹಳ್ಳಿ ಶ್ರೀನಿವಾಸ್​, ಆನೇಕಲ್​ ಪುರಸಭಾ ಸದಸ್ಯರಾದ ಸುರೇಶ್​ ಬಾಬು, ಪ್ರಕಾಶ್​, ಚಂದ್ರಪ್ಪ, ಸೋಮಶೇಖರ್​ ರೆಡ್ಡಿ, ದೈಹಿಕ ಶಿಕ್ಷಣ ಶಿಕರ ಸಂದ ಅಧ್ಯ ಗೋಪಾಲ್​, ನರಸಿಂಹಯ್ಯ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net