ಕನ್ನಡಪರ ನಿರ್ಣಯ ಕೈಗೊಳ್ಳದಿದ್ದರೆ ಕ್ರಾಂತಿ

ಕನ್ನಡಪರ ನಿರ್ಣಯಯಕ್ಕೆ ಒತ್ತಾಯ
ಕನ್ನಡಪರ ನಿರ್ಣಯಯಕ್ಕೆ ಒತ್ತಾಯ
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡಪರ ನಿರ್ಣಯಕ್ಕೆ ಒತ್ತಾಯ
  • ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಆಗ್ರಹ
  • ಕನ್ನಡಪರ ನಿರ್ಣಯ ಕೈಗೊಳ್ಳದಿದ್ದರೆ ಕ್ರಾಂತಿ
  • ಹೋರಾಟಗಾರ ವಾಟಾಳ್ ನಾಗರಾಜ ಎಚ್ಚರಿಕೆ
ಕರ್ನಾಟಕದ ಪರವಾದ ನಿರ್ಣಯ ಕೈಗೊಳ್ಳದಿದ್ದರೆ ಕ್ರಾಂತಿ
| ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಎಚ್ಚರಿಕೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ನಗರದ ಮಹಾನಗರ ಪಾಲಿಕೆ ಸಭೆಯಲ್ಲಿ ಕನ್ನಡಪರ ನಿರ್ಣಯ ಕೈಗೊಳ್ಳುವುದಕ್ಕೂ ನಾವು ಹೋರಾಟ ಮಾಡಬೇಕಾಗಿದೆ. ಬೆಳಗಾವಿಯಲ್ಲಿ ಇಂತಹ ಪರಿಸ್ಥಿತಿಗೆ ಸ್ವಾರ್ಥ ರಾಜಕಾರಣಿಗಳೇ ಕಾರಣ. ಪಾಲಿಕೆಯಲ್ಲಿ ಕರ್ನಾಟಕದ ಪರವಾದ ನಿರ್ಣಯ ಕೈಗೊಳ್ಳದಿದ್ದರೆ, ಬೆಳಗಾವಿಯಲ್ಲಿ ಕ್ರಾಂತಿ ಆಗಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಎಚ್ಚರಿಕೆ ನೀಡಿದ್ದಾರೆ.
ನಗರದ ಪಾಲಿಕೆಯಲ್ಲಿ ಕನ್ನಡಪರವಾದ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿ 20 ಅಧಿಕ ಕನ್ನಡಪರ ಸಂಘಟನೆಗಳು ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆ ವೇಳೆ ಅವರ ಮಾತನಾಡಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕನ್ನಡಪರ ನಿರ್ಣಯ ಕೈಗೊಳ್ಳಲು ಜೂ.2ರವರೆಗೆ ಕನ್ನಡ ಹೋರಾಟಗಾರರು ಗಡವು ನೀಡಿದ್ದೆವೆ. ಅಷ್ಟರೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಜೂ.4 ರಂದು ರಾಜ್ಯಮಟ್ಟದ ಸಭೆ ನಡೆಸಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು.ರಾಜ್ಯ ಸರ್ಕಾರ ಕರ್ನಾಟಕದ ಪರ ನಿರ್ಣಯ ಮಾಡಿ, ಇಲ್ಲವಾದರೆ ಮಹಾನಗರ ಪಾಲಿಕೆ ವಜಾ ಮಾಡಿಲಿ ಎಂದರು.
ಕನ್ನಡ ಹೋರಾಟಗಾರ ಸಾ.ರಾ ಗೋವಿಂದು ಮಾತನಾಡಿ ನಾನು ೧೯೮೩ರಿಂದ ಬೆಳಗಾವಿ ಹೋರಾಟ ಮಾಡುತ್ತಾ ಬಂದಿದ್ದೆನೆ. ಕರ್ನಾಟಕದ ಪರ ನಿರ್ಣಯಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಯಿಂದ ಪಾಲಿಕೆ ಮುತ್ತಿಗೆ ಹಾಕಲು ಮುಂದಾದ ಕನ್ನಡಪರ ಹೋರಾಟಗಾರರನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆಸಲಾಯಿತು ತಡೆದು ನೂರಕ್ಕೂ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆಗೂ ಮೊದಲು ಜಿಲ್ಲಾಧಿಕಾರಿ ಕಚೇರಿ ಮರು ಸ್ಥಾಪಿಸಿರುವ ಹಲ್ಮಿಡಿ ಶಾಸನದ ಪ್ರತಿಕೃತಿ ಹೋರಾಟಗಾರರ ಕ್ಷೀರಾಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಅಶೋಕ ಚಂದರಗಿ, ವಾಜೀದ್ ಹಿರೆಕೋಡಿ, ಶ್ರೀನಿವಾಸ ತಾಳೂರಕರ್, ಮಹಾದೇವ ತಳವಾರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net