ಕನ್ನಡ ಸಾಹಿತ್ಯ, ಸಂಸತಿ ಉಳಿಸಿ ಬೆಳೆಸಬೇಕಿದೆ

ಕಲಬುರಗಿ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮುಡುಬಿ ಗುಂಡೇರಾವ್​ ಮಾತನಾಡಿದರು. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಡಾ.ಭುವನೇಶ್ವರಿ ಚಿಮಕೋಡ್​, ಡಾ.ಅಮರೇಶ್ವರಿ ಚಿಂಚನಸೂರ್​ ಇತರರಿದ್ದರು.
ಕಲಬುರಗಿ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮುಡುಬಿ ಗುಂಡೇರಾವ್​ ಮಾತನಾಡಿದರು. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಡಾ.ಭುವನೇಶ್ವರಿ ಚಿಮಕೋಡ್​, ಡಾ.ಅಮರೇಶ್ವರಿ ಚಿಂಚನಸೂರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಂಸತಿಕ ಚಿಂತಕಿ ಡಾ.ಭುವನೇಶ್ವರಿ ಚಿಮಕೋಡ ಅನಿಸಿಕೆ
  • ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ
ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಸಾಹಿತ್ಯ, ಕಲೆ, ಸಂಸತಿಗೆ ಕೊರತೆ ಇಲ್ಲ. ಆದರೆ, ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಂಸತಿಕ ಚಿಂತಕಿ ಡಾ.ಭುವನೇಶ್ವರಿ ಚಿಮಕೋಡ ಹೇಳಿದರು.
ಕಲಬುರಗಿ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಕನ್ನಡ ಜಗತ್ತಿನ ಅತಿ ಶ್ರೀಮಂತ ಭಾಷೆ. ಈ ಕನ್ನಡಕ್ಕೆ ಕವಿರಾಜ ಮಾರ್ಗದಂತಹ ಉಪಲಬ್ಧ ಗ್ರಂಥವನ್ನು ಕಲ್ಯಾಣ ಕರ್ನಾಟಕ ನೀಡಿದೆ. ವಚನ ದಾಸ, ಸೂಫಿ, ತತ್ವಪದಕಾರರ ಈ ನೆಲದಲ್ಲಿ ಕನ್ನಡ ಭಾಷೆ ಮಿಂದೆದ್ದಿದೆ ಎಂದು ಹೇಳಿದರು.
ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದೇನವಾಜ ದರ್ಗಾ ಈ ನೆಲದಲ್ಲಿದ್ದು, ಯಾವುದೇ ಜಾತಿ, ಮತ, ಪಂಥವನ್ನು ಮೀರಿ ಈ ನೆಲ ಬಾಳಿ ಬೆಳಗಿದೆ. ಈ ಸಮ್ಮೇಳನದಲ್ಲಿ ವಿಶೇಷವಾಗಿ ವಿಕಲಚೇತನರಿಗೆ ಕವಿಕೋಷ್ಠಿ ಆಯೋಗಿಸಿದ್ದು ಸ್ತುತ್ಯಾರ್ಹ. ಜೀವನದಲ್ಲಿ ಸಂತಸ, ಸಾಮಾಜಿಕ ಸಾಮರಸ್ಯದ ಜತೆಗೆ ನೈತಿಕ ಶಿಣ ಅಗತ್ಯ. ಕುಟುಂಬದಲ್ಲಿ ಹಿರಿಯರ ಜವಾಬ್ದಾರಿ ಹೆಚ್ಚಿದೆ. ತಂತ್ರಾನ ಯುಗದಲ್ಲಿ ಮೊಬೈಲ್​ ಕಂಪ್ಯೂಟರ್​, ಟಿವಿ ಗೀಳಿಗೆ ಬಿದ್ದಿರುವ ಮಕ್ಕಳನ್ನು ಹೊರತರಬೇಕಾದ ಜವಾಬ್ದಾರಿ ಮನೆಯ ಹಿರಿಯರ ಮೇಲಿದೆ ಎಂದು ಹೇಳಿದರು.
ಈ ಸಮ್ಮೇಳನ ಎರಡು ದಿನಗಳ ಕಾಲ ವ್ಯವಸ್ಥಿತ, ಮಾರ್ಮಿಕವಾಗಿ ನಡೆದಿದೆ. ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯ ವಿಜಯಕುಮಾರ್​ ತೇಗಲತಿಪ್ಪಿ ಮತ್ತವರ ತಂಡ ಶ್ರಮವಹಿಸಿ ಯಶಸ್ವಿಗೊಳಿಸಿರುವುದು ಶ್ಲಾನೀಯ ಎಂದರು.
ಸರ್ಕಾರ ಶಾಲಾ ಶಿಕರ ಕೆಲಸದ ಜವಾಬ್ದಾರಿ ಹೆಚ್ಚಿಸುವುದರ ಜತೆಗೆ ಅತಿಯಾದ ಒತ್ತಡ ಹೇರಿದೆ. ಹೀಗಾಗಿ ಮಕ್ಕಳಿಗೆ ಮೌಲ್ಯಯುತ ಶಿಣ ದೊರೆಯದಿರುವುದು ವಿಷಾದನೀಯ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶಿರ ಮೇಲಿನ ಹೊರೆ ಕಡಿಮೆ ಮಾಡಬೇಕಾಗಿದೆ ಎಂದರು.
ಕಲಾವಿದರು, ಸಾಹಿತಿಗಳು, ನಾಟಕಕಾರರು, ಚಿತ್ರಕಲಾವಿದರು, ವಿಾನಿಗಳು ಸೇರಿದಂತೆ ಪ್ರತಿಭಾನ್ವಿತರನ್ನು ಹೊಂದಿರುವ ಕಲ್ಯಾಣ ನಾಡಿನಲ್ಲಿ ಕನ್ನಡ ಕಟ್ಟುವ ಕೆಲಸ ಇನ್ನಷ್ಟು ನಡೆಯಬೇಕಿದೆ ಎಂದರು.
ಸಾಹಿತಿ, ಸಂಶೋಧಕರೂ ಆದ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ್​ ಮಾತನಾಡಿ, ಕಸಾಪ ಜಿಲ್ಲಾಧ್ಯ ವಿಜಯಕುಮಾರ ತೇಗಲತಿಪ್ಪಿ ಅವರು ಸಮ್ಮೇಳನವನ್ನು ಅದ್ಬುತವಾಗಿ ಆಯೋಜಿಸಿದ್ದರು. ನಾಲ್ಕು ವರ್ಷದ ಅವಧಿಯಲ್ಲಿ ಐದು ಸಮ್ಮೇಳನ ಆಯೋಜಿಸುವ ಮೂಲಕ ದಾಖಲೆ ಮಾಡಿದ್ದಾರೆ. ಜತೆಗೆ ಕನ್ನಡ ಕಟ್ಟುವ ಕೆಲಸ ಅದ್ಬುತವಾಗಿ ಮಾಡಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಮಾಜಿ ಅಧ್ಯಕ್ಷ ಭವಾನಿಸಿಂಗ್​ ಠಾಕೂರ್​, ಶರಣರಾಜ್​ ಛಪ್ಪರಬಂದಿ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸೇವಂತಾ ಚವ್ಹಾಣ, ಕಲ್ಯಾಣಕುಮಾರ ಶೀಲವಂತ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ ಇತರರಿದ್ದರು.
ಈ ಸಂದರ್ಭದಲ್ಲಿ ವಿವಿಧ ೇತ್ರದ ಸಾಧಕರನ್ನು ಸತ್ಕರಿಸಲಾಯಿತು.
"

ಯೋಗ್ಯ ಕಾರ್ಯಕ್ಕೆ ಭಗವಂತನ ಶ್ರೀರೆ ಸದಾ ಇರುತ್ತದೆ. ಅಂತಹ ಕಾರ್ಯಗಳು ನಿರಂತರ ನಡೆಯಲಿ. ಕಲ್ಯಾಣದ ನಾಡಿನಲ್ಲಿ ಕನ್ನಡದ ಕಹಳೆ ಬೆಳಗಲಿ, ಯುವಕರು ಕನ್ನಡ ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು ತೋರಲಿ.

ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು,

ಶಾಂತಲಿಂಗೇಶ್ವರ ಮಠ, ಕಡಗಂಚಿ.


ಸಮ್ಮೇಳನದ ರ್ನಿಣಯಗಳು

* ಕಲಬುರಗಿಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಮಾಡುವುದು. ಕಲ್ಯಾಣ ಭಾಗದ ಸಮಸ್ಯೆ ಪರಿಹರಿಸಲು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು.
* ಹಂಪಿ ಉತ್ಸವದ ಮಾದರಿಯಂತೆ ರಾಷ್ಟ್ರಕೂಟ, ಕಲಬುರಗಿ ಉತ್ಸವಗಳನ್ನು ಆಚರಿಸಬೇಕು.
* ಕಲ್ಯಾಣ ನಾಡಿನ ಪ್ರಮುಖ ಐತಿಹಾಸಿಕ ಸ್ಥಳಗಳಾದ ನಾಗಾವಿ, ಮಲಖೇಡ, ಸನ್ನತಿ, ಬೀಜನಳ್ಳಿಗಳನ್ನು ರಾಷ್ಟ್ರೀಯ ಸ್ಮಾರಕಗಳೆಂದು ೂಷಣೆ ಮಾಡಿ ಅವುಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಸ್ಥಳಗಳ ಮಹತ್ವವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು.
* ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಮುಲಭೂತ ಸೌಕರ್ಯಗಳನ್ನು ಕಲ್ಪಿಸಿ, ಶಿಕರನ್ನು ನೇಮಿಸಬೇಕು. ಆ ಮೂಲಕ ಕನ್ನಡ ಶಾಲೆಗಳನ್ನು ಉಳಿಸಬೇಕು.
* ಜಿಲ್ಲೆಯ ಸಿಮೆಂಟ್​ ಕಂಪನಿಗಳಲ್ಲಿ ಸ್ಥಳಿಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು.
* ಉದ್ಯೋಗ ಕಲ್ಪಿಸುವ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಜಿಲ್ಲೆಯ ಎರಡು ಕಡೆ ಸ್ಥಾಪಿಸಬೇಕು.
* ಕಲಬುರಗಿಯಲ್ಲಿ ಜವಳಿ ಪಾರ್ಕ್​ ಶ್ರೀವೇ ಅನುಷ್ಠಾನಗೊಳಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net