ಸಂಗೀತ ನಿರ್ದೇಶಕ, ಗಾಯಕ ಶಶಿಧರ್ ಕೋಟೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಹೊ.ನ.ನೀಲಕಂಠೇಗೌಡ, ಡಾ.ಕೆ.ವಿ.ಮುನಿಸ್ವಾಮಿ, ಪ್ರೊ.ವಿ.ಎಂ.ರವಿ. ಡಾ.ಪುಟ್ಟರಾಜು, ಜಿ.ಇ.ಪ್ರಕಾಶ್, ಡಾ.ಸತ್ಯಶೀಲಾನಾಯರ್ ಇದ್ದರು.
ಕೆ.ಆರ್.ಪುರ:ಕನ್ನಡ ಭಾಷೆಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ ಪ್ರತಿಯೊಬ್ಬರೂ ಕನ್ನಡ ಭಾಷೆಯ ಸೊಗಡು ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಂಡು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಸಂಗೀತ ನಿರ್ದೇಶಕ, ಗಾಯಕ ಶಶಿಧರ್ ಕೋಟೆ ಹೇಳಿದರು.
ಕೆ.ಆರ್.ಪುರದ ಶ್ರೀವೆಂಕಟೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಹುಟ್ಟಿರುವುರು ನಮ್ಮ ಹೆಮ್ಮೆ ಇದರ ಜೊತೆಗೆ ಕನ್ನಡದ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದುವ ಮೂಲಕ ಕನ್ನಡಕ್ಕೆ ಗೌರವ ಕೊಡುವ ಕೆಲಸ ಆಗಬೇಕು. ಬರಿ ವಿದ್ಯಾಭ್ಯಾಸ ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾದಾಗ ಜೀವನ ಅನುಭವ ಹೆಚ್ಚಾಗುತ್ತದೆ ಎಂದರು.
ದಕ್ಷಿಣ ಜಿಲ್ಲೆಯ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಹೊ.ನ.ನೀಲಕಂಠೇಗೌಡ, ಮಾತನಾಡಿ ತಂತ್ರಜ್ಞಾನಗಳು ಜೀವನ ಹಾಳು ಮಾಡುವುದಕ್ಕೆ ಅಲ್ಲದೇ ಉದ್ಧಾರ ಮಾಡಲು ಇದೆ. ಆದರೆ,ಅದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ. ಜ್ಞಾನಕ್ಕಿಂತ ವಿದ್ಯೆ ಮೇಲು ಅದ್ದರಿಂದ ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಿರಿ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.