ಕಾದಂಬರಿಗಾರ್ತಿ ಗೀತಾ ಬಿ.ಯು. ಮಾತನಾಡಿ, ಶಾಲಾ ಮಕ್ಕಳಲ್ಲಿ ಶಿಕ್ಷಕರು ಮಕ್ಕಳಿಂದ ಓದಿಸುವ ಜತೆಗೆ ಪ್ರತಿ ದಿನ ಒಂದು ಪ್ಯಾರಾ ಬರೆಸುವ ಹವ್ಯಾಸ ಬೆಳೆಸಿದರೆ, ಭವಿಷ್ಯದಲ್ಲಿ ಬರಹಗಾರರಾಗಲು ತಳಹದಿಯಾಗಲಿದೆ. ಏಕೆಂದರೆ, ಒಂದು ಸಿನಿಮಾ ಅಥವಾ ಹಾಡು ನೋಡಿದಾಗ ಕಣ್ಣೂ, ಕಿವಿಯಲ್ಲಿ ಮಾತ್ರ ಉಳಿಯಲಿದೆ. ಅದೇ ಒಂದು ಪುಸ್ತಕವನ್ನು ಓದಿದಾಗ ಇಡೀ ಮನಸ್ಸಿನಲ್ಲಿ ಉಳಿಯಲಿದೆ ಎಂದು ಹೇಳಿದರು.