ಶಿಕ್ಷಣ ಕ್ಷೇತ್ರದಲ್ಲಿ ಕಳೆದು ಹೋಗುತ್ತಿರುವ ಕನ್ನಡ; ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೇಸರ

ಸ್ವಾಭಿಮಾನಿ ಕರ್ನಾಟಕ ವೇದಿಕೆ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಗಣ್ಯರಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನಾಡೋಜ ವೂಡೇ ಪಿ.ಕೃಷ್ಣ, ದ್ವಾರನಕುಂಟೆ ಪಾತಣ್ಣ ಮತ್ತಿತರರಿದ್ದರು.
ಸ್ವಾಭಿಮಾನಿ ಕರ್ನಾಟಕ ವೇದಿಕೆ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಗಣ್ಯರಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನಾಡೋಜ ವೂಡೇ ಪಿ.ಕೃಷ್ಣ, ದ್ವಾರನಕುಂಟೆ ಪಾತಣ್ಣ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಕ್ಷೇತ್ರದಲ್ಲಿ ಕಳೆದು ಹೋಗುತ್ತಿರುವ ಕನ್ನಡ
  • ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೇಸರ
  • ಸರಕಾರವೇ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡವನ್ನು ದಮನಿಸುವ ಕೆಲಸ ಮಾಡುತ್ತಿದೆ

ಬೆಂಗಳೂರು:ಸರಕಾರವೇ ಶಿಕ್ಷಣಕ್ಷೇತ್ರದಲ್ಲಿ ಕನ್ನಡವನ್ನುದಮನಿಸುವ ಕೆಲಸ ಮಾಡುತ್ತಿದೆಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯಅಸಮಾಧಾನ ಹೊರಹಾಕಿದ್ದಾರೆ.

ಸ್ವಾಭಿಮಾನಿಕರ್ನಾಟಕ ವೇದಿಕೆ ಶನಿವಾರಶೇಷಾದ್ರಿಪುರಂ ಕಾಲೇಜಿನಲ್ಲಿಆಯೋಜಿಸಿದ್ದ ಸ್ವಾಭಿಮಾನಿ ಪುಸ್ತಕಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಮಾತನಾಡಿದರು.

ಹಿಂದೆಖಾಸಗಿ ಸಂಘಗಳು ಕನ್ನಡಪರ ಹೋರಾಟಮಾಡುತ್ತಿದ್ದವು.ಆದರೆ,ಈಗ ಶಿಕ್ಷಣವ್ಯಾಪಾರೀಕರಣವಾಗಿದೆ.ಕನ್ನಡ ಶಾಲೆಗಳುಮುಚ್ಚಿ ಹೋಗುತ್ತಿವೆ.ಶಿಕ್ಷಣ ವಲಯದಲ್ಲಿಕನ್ನಡ ಕಳೆದು ಹೋಗುತ್ತಿದೆ.ಕನ್ನಡವನ್ನುರಕ್ಷಿಸಬೇಕಾದ ಸರಕಾರವೇ ಅದನ್ನುದಮನಿಸಲು ಮುಂದಾಗಿದೆ.ಹಳ್ಳಿಯಲ್ಲಿ ಒಂದುಮಗು ಇದ್ದರೂ ಶಿಕ್ಷ ಣ ಕೊಡುವುದುಸರಕಾರದ ಜವಾಬ್ದಾರಿ.ಸಂವಿಧಾನ ಸಹಶಿಕ್ಷಣಕ್ಕೆ ಒತ್ತು ನೀಡಿದೆ.50 ಮಕ್ಕಳಿರುವಶಾಲೆಯನ್ನು ಮುಚ್ಚಲಾಗುತ್ತಿದೆ.ಶಿಕ್ಷಕರ ನೇಮಕಾತಿಆಗುತ್ತಿಲ್ಲ,ಶಾಲೆಗಳಿಗೆಮೂಲಸೌಲಭ್ಯ ಕಲ್ಪಿಸುತ್ತಿಲ್ಲ.ಶಾಲೆಮುಚ್ಚುತ್ತಿರುವುದರಿಂದ ಹಳ್ಳಿಗಾಡಿನಹೆಣ್ಣು ಮಕ್ಕಳು ಹೆಚ್ಚು ಶಾಲೆಯಿಂದಹೊರಗೆ ಉಳಿಯುತ್ತಿದ್ದಾರೆ.ಹಿಂದೆ ಸರಕಾರವೇಶೇ.80ರಷ್ಟುಮಕ್ಕಳು ಶಿಕ್ಷಣ ಕಲಿಯುವ ವಾತಾವರಣವನ್ನುಸೃಷ್ಟಿಸಿತ್ತು.ಈಗ ಕೆಪಿಎಸ್ಮ್ಯಾಗ್ನೆಟ್ ಹೆಸರಿನಲ್ಲಿ ಕನ್ನಡಶಾಲೆಗಳನ್ನು ಮುಚ್ಚುವ ಕೆಲಸಮಾಡುತ್ತಿದೆ.ಇದು ನೋವಿನ ಸಂಗತಿಎಂದು ಸಿದ್ದರಾಮಯ್ಯ ಬೇಸರವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿಡಿ.ಎಚ್.ಚೌಗಲೆ,ಸುಕನ್ಯಾಸೂನಗಹಳ್ಳಿ,ಓರ್ಗಲ್ಲಯ್ಯದ್ವಾರನಕುಂಟೆ,ಗುರನಾಥ ಅಕ್ಕಣ್ಣ,ವಿನಯ ಗುಂಟೆ,ಶೋಭಾ ನಾಯಕ,ಸುಜಾತಾ ಚಲವಾದಿಅವರಿಗೆ ಪ್ರಶಸ್ತಿ ಪ್ರದಾನಮಾಡಲಾಯಿತು.

ಕರ್ನಾಟಕಲೇಖಕಿಯ ಸಂಘದ ಅಧ್ಯಕ್ಷೆಆರ್.ಸುನಂದಮ್ಮ,ಶೇಷಾದ್ರಿಪುರಂಶಿಕ್ಷಣ ದತ್ತಿ ಪ್ರಧಾನ ಕಾರ್ಯದರ್ಶಿವೂಡೇ ಪಿ.ಕೃಷ್ಣ,ಕನ್ನಡ ಸಂಘಗಳಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ,ಸ್ವಾಭಿಮಾನಿಕರ್ನಾಟಕ ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಮತ್ತಿತರರುಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net