ಸಾಹಿತ್ಯ-ಸಂಸ್ಕೃತಿ ಕೇಂದ್ರ: ನಗರದಲ್ಲಿ ಕಾದಂಬರಿಗಾರ್ತಿ ಸುಶೀಲಾ ಕಮತಗಿ, ಪಿ. ಮುನಿಕುಮಾರ ಸೇರಿ ಅನೇಕರು ಸಾಹಿತ್ಯದ ಮೊದಲಿಗರಾಗಿದ್ದು, ಅಂದಿನಿಂದಲೇ ಕನ್ನಡ ಸಾಹಿತ್ಯದ ಬೇರಾಗಿ ಉದಯಿಸಿದೆ. ಊರಿನ ಹಿರಿಯ ಮಠದಲ್ಲಿ ರೇ.ಚ. ರೇವಡಿಗಾರ ಅವರು ಕನ್ನಡ ಬಳಗ ಕಟ್ಟಿ ಕನ್ನಡದ ಕಂಪನ್ನು ಪಸರಿಸಿದ್ದರು. ಆಗಲೂ ಸಾಹಿತ್ಯದ ಓದು, ಅದರ ಕೆಲಸ ಕಾರ್ಯಗಳು, ಕೃತಿಗಳ ರಚನೆಯ ಸಾಮರ್ಥ್ಯ ಗಿಟ್ಟಿಸಿಕೊಂಡಿದೆ. ಎಲ್ಲ ಧರ್ಮದ ಶಿಕ್ಷಣ ಸಂಸ್ಥೆಗಳೂ ಇಲ್ಲಿ ಬೇರೂರಿವೆ. ಸೌಹಾರ್ದ ನೆಲೆಯಲ್ಲರಳಿದ ಸಿಂದಗಿ ಎಂದಿಗೂ ಅನನ್ಯ ಸಾಹಿತ್ಯ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಕಂಗೊಳಿಸುತ್ತಿದೆ ಎಂದರು.