ಗೋಲ್ಡ್​ ಸ್ಮಗ್ಲಿಂಗ್​ ಕೇಸ್; ರನ್ಯಾ ರಾವ್​ಗೆ ಬಿಗ್​ ರಿಲೀಫ್​, ಒಂದು ವರ್ಷದ ಬಳಿಕ ಜಾಮೀನು ಮಂಜೂರು..Ranya Rao

Kannada actress Ranya Rao
Kannada actress Ranya Rao
Published on

ಪ್ರಮುಖ ಮುಖ್ಯಾಂಶಗಳು

  • ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ
  • ನಟಿ ರನ್ಯಾ ರಾವ್ ಷರತ್ತು ಬದ್ದ ಜಾಮೀನು ಮಂಜೂರು
  • ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯದಿಂದ ಜಾಮೀನು
ಬೆಂಗಳೂರು: 102 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕನ್ನಡದ ಮಾಣಿಕ್ಯ ಸಿನಿಮಾದ ನಟಿ Ranya Raoಗೆ ಒಂದು ವರ್ಷದ ಬಳಿಕ ಬಿಗ್​ ರಿಲೀಫ್​ ಸಿಕ್ಕಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯದಿಂದ ರನ್ಯಾರಾವ್​ಗೆ ಬುಧವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿಯಾಗಿರುವ ರನ್ಯಾ ರಾವ್​ ಅವರು ಕಳೆದ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಸದ್ಯ ಕೋರ್ಟ್​ ಜಾಮೀನು ಮಂಜೂರು ಮಾಡಿದ್ದು, ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಈ ಹಿಂದೆಯೂ ಸಿಕ್ಕಿತ್ತು ಬೇಲ್

ಈ ಕೇಸ್​​ನಲ್ಲಿ ಈ ಹಿಂದೆಯೇ ರನ್ಯಾ ರಾವ್​ ಅವರಿಗೆ ಜಾಮೀನು ನೀಡಲಾಗಿತ್ತು. ಆದರೆ COFEPOSA ಜಾರಿಯಾಗಿದ್ದ ಹಿನ್ನೆಲೆ ಅವರು ಜೈಲಿನಲ್ಲೇ ಇರಬೇಕಾದ ಸ್ಥಿತಿ ಒದಗಿತ್ತು. ಜೊತೆಗೆ ಸುಪ್ರೀಂ ಕೋರ್ಟ್​ ಸಹ ವಿದೇಶಿ ನಿಯಮ ಮತ್ತು ಕಳ್ಳಸಾಗಣೆ ತಡೆ ಕಾಯ್ದೆ ಅಡಿ ರನ್ಯಾ ರಾವ್​ ಅವರ ವಿರುದ್ಧ ಕೇಂದ್ರ ಆರ್ಥಿಕ ಗುಪ್ತ ಚರ ಬ್ಯೂರೋ ಹೊರಡಿಸಿದ್ದ ಬಂಧನದ ಆದೇಶವನ್ನು ಎತ್ತಿ ಹಿಡಿದಿದ್ದ ಕಾರಣ ಅವರು ರಿಲೀಸ್ ಆಗಿರಲಿಲ್ಲ. ಇಂದಿಗೆ ಕಾಫಿಪೋಸಾ ಅಡಿಯಲ್ಲಿ ವಿಧಿಸಲಾದ ಒಂದು ವರ್ಷದ ಅವಧಿ ಪೂರ್ಣಗೊಂಡ ಹಿನ್ನೆಲೆ ರನ್ಯಾರಾವ್​ ಅವರು ಜೈಲಿನಿಂದ ಸಂಜೆಯೇ ರಿಲೀಸ್​​ ಆಗುತ್ತಿದ್ದಾರೆ.

ಏನಿದು ಘಟನೆ?

2025 ಮಾರ್ಚ್​ 3ರಂದು 102 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಆರೋಪದಡಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿತ್ತು. ಅದರಲ್ಲಿ 14. 80 ಕೆಜಿ ಚಿನ್ನ ಪತ್ತೆಯಾಗಿ, ಆರೋಪಿಗಳನ್ನು ರೆಡ್​​ ಹ್ಯಾಂಡ್​ ಆಗಿ ಸೆರೆ ಹಿಡಿದು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕಾನೂನು ಕ್ರಮದ ಪ್ರಕಾರ ನಡೆದ ವಿಚಾರಣೆಯಡಿ, ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ಹೈಕೋರ್ಟ್​ ಪೀಠ ಅವರ ಜಾಮೀನು ಮಂಜೂರು ಅರ್ಜಿ ವಜಾಗೊಳಿಸಿತ್ತು. ಕೇಂದ್ರ ಆರ್ಥಿಕ ಬ್ಯೂರೋ ಸಹ ಅವರ ಮೇಲೆ ಕಾಫಿಪೋಸ ಅಡಿ ಬಂಧನ ಆದೇಶ ಹೊರಡಿಸಿದ್ದ ಕಾರಣ ಅವರು ಒಂದು ವರ್ಷದಿಂದ ಜೈಲಿನಲ್ಲಿ ಇದ್ದರು. ರನ್ಯಾ ರಾವ್​ ಅವರ ಜೊತೆಗೆ ಮೈಸೂರಿನಲ್ಲಿರುವ ಅವರ ಸ್ನೇಹಿತ ತರುಣ್​ ಕೊಂಡರಾಜು ಸಹ ಇಂದೇ ಬಿಡುಗಡೆಯಾಗುವ ಸಾಧ್ಯತೆ ಇದೆ.

COFEPOSA ಎಂದರೆ ಏನು?

ಇದು ಕಠಿಣ ಕಾನೂನು ಕ್ರಮ. ವಿದೇಶಿ ವಿನಿಮಯ ಉಲ್ಲಂಘನೆ ಮತ್ತು ಚಿನ್ನದ ವಸ್ತುಗಳ ಅಕ್ರಮ ಸಾಗಣೆ ತಡೆಯಲು ಬಳಸಲಾಗುತ್ತದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net