ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಾಸೌರಭ-2026

ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಏರ್ಪಡಿಸಿದ್ದ ಕಲಾಸೌರಭ-2026ಕ್ಕೆ ನಟಿ ಬೃಂದಾ ಆಚಾರ್ಯ ಚಾಲನೆ ನೀಡಿದರು. ಸಂಸ್ಥೆಯ ಮುಖ್ಯಸ್ಥರಾದ ಡಾ.ಎ.ಸಿ.ಷಣ್ಮುಗಂ, ಎ.ಸಿ.ಎಸ್.ಅರುಣ್ ಕುಮಾರ್, ಲಲತಾ ಲಕ್ಷ್ಮಿ ಮತ್ತಿತರರಿದ್ದರು.
ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಏರ್ಪಡಿಸಿದ್ದ ಕಲಾಸೌರಭ-2026ಕ್ಕೆ ನಟಿ ಬೃಂದಾ ಆಚಾರ್ಯ ಚಾಲನೆ ನೀಡಿದರು. ಸಂಸ್ಥೆಯ ಮುಖ್ಯಸ್ಥರಾದ ಡಾ.ಎ.ಸಿ.ಷಣ್ಮುಗಂ, ಎ.ಸಿ.ಎಸ್.ಅರುಣ್ ಕುಮಾರ್, ಲಲತಾ ಲಕ್ಷ್ಮಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಾಸೌರಭ
  • ಚಿತ್ರನಟಿ ಬೃಂದಾ ಆಚಾರ್ಯರಿಂದ ಕಾರ್ಯಕ್ರಮಕ್ಕೆ ಚಾಲನೆ
  • ಸಂಗೀತ, ನೃತ್ಯ, ಕ್ರೀಡೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು

ಬೆಂಗಳೂರು:ರಾಜರಾಜೇಶ್ವರಿಕಾಲೇಜ್ ಆಫ್ ಇಂಜಿನಿಯರಿಂಗ್ತನ್ನ ವಾರ್ಷಿಕ ಸಂಭ್ರಮ ಕಲಾಸೌರಭಕಾರ್ಯಕ್ರಮವು ಆರ್‌ಆರ್‌ಎಂಸಿಹೆಚ್ಆವರಣದ ಎಸಿಎಸ್ ಕನ್ವೆನ್ಷನ್ಸೆಂಟರ್‌ನಲ್ಲಿ ಬುಧವಾರ ಸಡಗರದಿಂದಆಚರಿಸಲಾಯಿತು.ವಿದ್ಯಾರ್ಥಿಗಳು,ಅಧ್ಯಾಪಕರುಮತ್ತು ಅತಿಥಿಗಳ ಸಮ್ಮುಖದಲ್ಲಿನಡೆದ ಸಮಾರಂಭವು ವಿದ್ಯಾರ್ಥಿಗಳಪ್ರತಿಭೆ ಮತ್ತು ಸಾಂಸ್ಕೃತಿಕಪರಂಪರೆಯನ್ನು ಎತ್ತಿಹಿಡಿಯುವಲ್ಲಿಯಶಸ್ವಿಯಾಯಿತು.

ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ಚಲನಚಿತ್ರನಟಿ ಬೃಂದಾ ಆಚಾರ್ಯ,ಪಠ್ಯದ ಜೊತೆಗೆಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿಸೃಜನಶೀಲತೆ ಹಾಗೂ ಆತ್ಮವಿಶ್ವಾಸಬೆಳೆಯುತ್ತದೆ ಎಂದು ಹೇಳಿದರು.ವಿದ್ಯಾರ್ಥಿಗಳಜೀವನದಲ್ಲಿ ಕಾಲೇಜು ದಿನಗಳಮಹತ್ವವನ್ನು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿಸಂಸ್ಥೆಯ ಅಧ್ಯಕ್ಷ ಡಾ..ಸಿ.ಷಣ್ಮುಗಂ,.ಸಿ.ಎಸ್.ಅರುಣ್ಕುಮಾರ್, ಲಲಿತಾಲಕ್ಷ್ಮಿ, ಕಾರ್ಯನಿರ್ವಾಹಕನಿರ್ದೇಶಕ ಡಾ.ಎಸ್.ವಿಜಯಾನಂದ್,ಸಿಇಒ ಸಿ.ಎನ್.ಸೀತಾರಾಮ್,ವಿಶೇಷಾಧಿಕಾರಿಡಾ. ಎಸ್.ಜಯಬಾಲನಮತ್ತು ಪ್ರಾಂಶುಪಾಲರಾದ ಡಾ.ಆರ್.ಬಾಲಕೃಷ್ಣಪಾಲ್ಗೊಂಡಿದ್ದರು.

ಕಲಾಸೌರಭದಲ್ಲಿವಿದ್ಯಾರ್ಥಿಗಳಿಂದ ವಿವಿಧಸಾಂಸ್ಕೃತಿಕ ಪ್ರದರ್ಶನಗಳು,ನೃತ್ಯ ಮತ್ತುಕ್ರೀಡಾ ಚಟುವಟಿಕೆಗಳು ನಡೆದವು.ಮುಖ್ಯವಾಗಿ,ಸೃಜನಾತ್ಮಕವಾಗಿಮೂಡಿಬಂದ ಫ್ಯಾಶನ್ ಶೋ ಮತ್ತುಫೇಸ್ ಪೇಂಟಿಂಗ್ ಸ್ಪರ್ಧೆಗಳುನೋಡುಗರ ಗಮನ ಸೆಳೆದವು.ವಿವಿಧ ಸ್ಪರ್ಧೆಗಳಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳಿಗೆಇದೇ ವೇಳೆ ಬಹುಮಾನ ವಿತರಿಸಿಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಅಂತ್ಯದಲ್ಲಿ ನಡೆದ ಬೀಟ್ ಗುರೂಸ್ಬ್ಯಾಂಡ್‌ನಿಂದ ಲೈವ್ ಮ್ಯೂಸಿಕ್ಮತ್ತು ಡಿಜೆ ಸಂಜೆ ವಿದ್ಯಾರ್ಥಿಗಳಲ್ಲಿಉತ್ಸಾಹದಲ್ಲಿ ಕುಣಿದು ಕುಪ್ಪಳಿಸುವಂತೆಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net