ಕಲಬುರಗಿ ರೊಟ್ಟಿ ಗ್ಲೋಬಲ್ ಚಾಲೆಂಜ್: ಯುವ ಪ್ರತಿಭೆಗಳಿಂದ ಸ್ಟಾರ್ಟ್‌ಅಪ್ ನಿರ್ಮಾಣಕ್ಕೆ ವೇದಿಕೆ ಸಹಾಯಕ ಆಯುಕ್ತೆ ಸಾಹಿತ್ಯ ಅಲದಕಟ್ಟಿ
,
Published on:
Copied
Follow Us
ಕಲಬುರಗಿ: ಆಡಳಿತವು ಕೆಡಿಇಎಂ (KDEM) ಸಹಭಾಗಿತ್ವದಲ್ಲಿ "ಕಲಬುರಗಿ ರೊಟ್ಟಿ ಗ್ಲೋಬಲ್ ಚಾಲೆಂಜ್ 2026" ಅನ್ನು ಆಯೋಜಿಸುತ್ತಿದೆ. ನಮ್ಮ GI ಟ್ಯಾಗ್ ಪಡೆದ ಕಲಬುರಗಿ ರೊಟ್ಟಿಯಿಂದ ಒಂದು ಆಹಾರ ಬ್ರ್ಯಾಂಡ್ ಕಟ್ಟುವುದು ನಮ್ಮ ಗುರಿಯಾಗಿದೆ. ಈ ಚಾಲೆಂಜ್ ಎಲ್ಲರಿಗೂ ಮುಕ್ತವಾಗಿದ್ದು, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಇತ್ತೀಚೆಗೆ ಪದವಿ ಪಡೆದವರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಕಲ ಕಲ್ಬುರ್ಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಹೇಳಿದರು.
ಬುಧುವಾರ, ನಗರದ ಜಗತ್ ವೃತ್ತದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕಲಬುರಗಿ ರೊಟ್ಟಿ ಜಾಗತಿಕ ಸವಾಲುಗಳು ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಲಬುರಗಿ ರೊಟ್ಟಿ ಮತ್ತು ಸಂಬಂಧಿತ ಉತ್ಪನ್ನಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ವಿಸ್ತರಿಸಬಹುದು ಎಂಬುದರ ಬಗ್ಗೆ ನಾವೀನ್ಯಪೂರ್ಣ ಆಲೋಚನೆಗಳನ್ನು ತರಲು ತಂಡಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಇದೆ 2026 ಜುಲೈ 6 ರಂದು VTU ಪ್ರಾದೇಶಿಕ ಕೇಂದ್ರದಲ್ಲಿ ತಂಡಗಳ ಪರಿಶೀಲನೆ (ಸ್ಕ್ರೀನಿಂಗ್) ನಡೆಯಲಿದ್ದು, ನಂತರ ಜುಲೈ 12, ರಂದು ಅಂತಿಮ ಸುತ್ತು ನಡೆಯಲಿದೆ. ಆಯ್ಕೆಯಾದ ತಂಡಕ್ಕೆ ಇನ್ಕ್ಯುಬೇಶನ್, ಸೀಡ್ ಫಂಡಿಂಗ್‌ಗೆ ನೆರವು ಹಾಗೂ ಅವರ ಸ್ಟಾರ್ಟ್‌ಅಪ್‌ಗೆ ಮಾರ್ಗದರ್ಶನ ಬೆಂಬಲ ನೀಡಲಾಗುವುದು.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಆಸಕ್ತರು ಪೋಸ್ಟರ್‌ದಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ಇದೇ 2026ರ ಜುಲೈ 5ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿರುವುದಿಲ್ಲ. ಯಾವುದೇ ಸ್ಪಷ್ಟೀಕರಣ ಮತ್ತು ಸಂದೇಹಗಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೀಡಲಾದ KDEM ಸಹಾಯವಾಣಿ ಅ7259885680 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ರೊಟ್ಟಿ ಗ್ಲೋಬಲ್ ಚಾಲೆಂಜ್ 2026 ರ ಪೋಸ್ಟರ್ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ ಮೋಘಾ, ಕೆ.ಡಿ.ಇ.ಎಂ. ಬಿಯಾಂಡ್ ಬೆಂಗಳೂರು ಉಪಾಧ್ಯಕ್ಷ ಚೇತನ ದಿಕ್ಶಿತ್, ಕ್ಲಸ್ಟರ್ ಹೆಡ್ ಸುಜಯ್ ಮುದಗಲ್ ಉಪಸ್ತಿತರಿದ್ದರು.