ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ಎರಡನೇ ಶ್ರೇಯಾಂಕದ ಅಡ್ಕರ್ ಮತ್ತು ರೈನಾ ಜೋಡಿ ಡಬಲ್ಸ್ ಫೈನಲ್ ನಲ್ಲಿ ಸಹ ದೇಶಬಾಂಧವರಾದ ಆಕಾಂಕ್ಷಾ ನಿಟ್ಟೂರ ಮತ್ತು ಸೋಹಾ ಸಾದಿಕ್ ಅವರನ್ನು 6-2, 6-2 ಸೆಟ್ ಗಳಿಂದ ಸೋಲಿಸಿ ಟ್ರೋಫಿಗೆ ಮುತ್ತಿಟ್ಟರು. ಜತೆಗೆ 35 ಡಬ್ಲ್ಯುಟಿಎ ಶ್ರೇಯಾಂಕ ಅಂಕಗಳನ್ನು ಮತ್ತು 1,762 ಡಾಲರ್ ಮೊತ್ತವನ್ನು ತಮ್ಮದಾಗಿಸಿಕೊಂಡರು. ರನ್ನರ್ಸ್ ಅಪ್ ನಿಟ್ಟೂರ ಮತ್ತು ಸಾದಿಕ್ 23 ಅಂಕಗಳು ಮತ್ತು 895 ಡಾಲರ್ ಮೊತ್ತಕ್ಕೆ ಸೀಮಿತರಾದರು.