ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ವಿದ್ವಾಂಸರು, ಚಿಂತಕರು, ಕವಿಗಳು, ಸಂಶೋಧನಾರ್ಥಿಗಳು ಹಾಗೂ ಪ್ರಾಧ್ಯಾಪಕರು ತಮ್ಮ ವಿದ್ವತ್ತನ್ನು ಪ್ರದರ್ಶಿಸಿದರು. ಹತ್ತಾರು ಒಳನೋಟಗಳುಳ್ಳ ವಿಷಯಗಳನ್ನು ಪಸರಿಸಿದ ಇವರು, ಸಾಹಿತ್ಯಾಸಕ್ತರು, ಯುವ ಕವಿಗಳು ಮತ್ತು ವಿಚಾರವಂತರಿಗೆ ಜ್ಞಾನ ಭಂಡಾರವನ್ನೇ ತೆರೆದಿಟ್ಟರು. ಇದು ಹಲವರಿಗೆ ಹೊಸ ವಿಚಾರ ಮಂಡನೆಗೆ ದಾರಿಯಾದರೆ, ಕವಿಗಳಿಗೆ ಸಾಹಿತ್ಯ ರಚನೆಗೆ ಪ್ರೇರಣೆಯಾಯಿತು.