ಕೋಟೆ ಕ್ಷೇತ್ರದಲ್ಲಿ ಕೈ ಪಡೆ ಸಂಭ್ರಮಾಚರಣೆ ..!

ಗೆಲುವು ಸಾಽಸಿದ ಬಳಿಕ ಹುಟ್ಟೂರು ತಿಮ್ಮಾಪುರ ಗ್ರಾಮಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರಿಗೆ ಕಾರ್ಯಕರ್ತರು ಟಗರು ನೀಡಿ ಸ್ವಾಗತಿಸಿದ ಕ್ಷಣ.
ಗೆಲುವು ಸಾಽಸಿದ ಬಳಿಕ ಹುಟ್ಟೂರು ತಿಮ್ಮಾಪುರ ಗ್ರಾಮಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರಿಗೆ ಕಾರ್ಯಕರ್ತರು ಟಗರು ನೀಡಿ ಸ್ವಾಗತಿಸಿದ ಕ್ಷಣ.
Published on
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲವು ಸಾಽಸಿದ್ದು, ಕೋಟೆ ಕ್ಷೇತ್ರದಲ್ಲಿ ಸೋಮವಾರದ ಈ ಗೆಲುವು ಹೊಸ ಇತಿಹಾಸ ಬರೆಯಿತು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೈ ಪಡೆಯ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.!!
ಮತ ಎಣಿಕೆ ಕೇಂದ್ರ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮತ ಏಣಿಕೆ ಆರಂಭವಾಗುತ್ತಿದ್ದAತೆ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರು ಆಗಮಿಸಿದರು. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಆರಂಭಿಕ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಕೈ ಕಾರ್ಯಕರ್ತರ ಕೇ ಕೇ ಚಪ್ಪಾಳೆ ಜೋರಾಗಿದ್ದವು. ಬಳಿಕ ಗೆಲುವಿನ ಅಂತರ ಹೆಚ್ಚುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ನಾಯಕರು ಮತ ಎಣಿಕೆ ಕೇಂದ್ರದಿAದ ಕಾಲಕಿತ್ತರು. ಚುನಾವಣೆ ಅಽಕಾರಿಗಳು ಹಂತ ಹಂತವಾಗಿ ಮತ ಎಣಿಕೆ ಅಂಕಿ ಅಂಶ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ತೋವಿವಿಯತ್ತ ಧಾವಿಸಿದರು. ಮಧ್ಯಾಹ್ನ ೧೨ ಸಮಯಕ್ಕೆ ಗೆಲುವಿನ ಮುನ್ಸೂಚನೆ ದೊರೆಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕೈ ಕಾರ್ಯಕರ್ತರು ಸಂತಸ ಪಟ್ಟರು.
ತೋವಿವಿ ಮತ ಎಣಿಕೆ ಕೇಂದ್ರದ ಹೊರ ಆವರಣ, ವಿದ್ಯಾಗಿರಿ ಇಂಜಿನಿಯರಿAಗ್ ಕಾಲೇಜು ವೃತ್ತ, ನವನಗರದ ಕಾಂಗ್ರೆಸ್ ಕಚೇರಿ, ಬಸವೇಶ್ವರ ಸರ್ಕಲ್, ವಲ್ಲಭಾಯಿ ಚೌಕ್, ಕಾಲೇಜು ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಪಟಾಕಿ ಸಿಡಿಸಿ-ಗುಲಾಲ್ ಎರಚಿ ಗೆಲುವಿನ ಸಂಭ್ರಮ ಹಂಚಿಕೊAಡರು. ಕಾಂಗ್ರೆಸ್ ಬಾವುಟ ಎಲ್ಲೆಡೆ ರಾರಾಜಿಸಿತು. ಬೈಕ್ ರ‍್ಯಾಲಿ ನಡೆಸಿ ಕೋಟೆನಗರಿಯಲ್ಲಿ ಜಯ-ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಆನಂದ ಜಿಗಜಿನ್ನಿ, ನಾರಾಯಣ ದೇಸಾಯಿ, ಸಂಜೀವ ವಾಡಕರ,ಶಿವಕುಮಾರ ನಂದಿಕೋಲಮಠ, ನಾಗರಾಜ ಹದ್ಲಿ, ಅಶೋಕ ಲಾಗಲೂಟಿ, ಸಿದ್ದಣ್ಣ ಗೋಡಿ, ಅರವಿಂದ ಆಲೂರ, ಪಿರಪ್ಪ ಮ್ಯಾಗೇರಿ, ರಾಯಪ್ಪ ಮೇಟಿ, ಬಸವಂತಪ್ಪ ಮೇಟಿ, ಮುತ್ತಪ್ಪ ಹುಗ್ಗಿ, ಶ್ರೀಕರ ದೇಸಾಯಿ, ಶಶಿಕಾಂತ ಪೂಜಾರಿ, ಮಲ್ಲಪ್ಪ ದ್ಯಾವಣ್ಣವರ, ಸುರೇಶ ತೇಲಿ, ವೈ.ವೈ.ತಿಮ್ಮಾಪುರ ಸೇರಿದಂತೆ ಇತರರು ಇದ್ದರು.
ತಂದೆ ನೆನೆದು ಕಣ್ಣೀರಿಟ್ಟ ಕುಟುಂಬಸ್ಥರು..
ಗೆಲುವಿನ ಅಂತರ ಹೆಚ್ಚುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ದೇವರ ದರ್ಶನ ಪಡೆದು ಮತ ಎಣಿಕೆ ಕೇಂದ್ರದತ್ತ ಆಗಮಿಸಿದರು. ಕಾರ್ಯಕರ್ತರು, ಮುಖಂಡರು ಹೆಗಲ ಮೇಲೆ ಹೊತ್ತುಕೊಂಡು ಕೇ ಕೇ ಹಾಕಿದರು. ಸ್ಥಳದಲ್ಲಿದ್ದ ಸಹೋದರ ಮಲ್ಲಿಕಾರ್ಜುನ ಮೇಟಿ, ಬಾಯಕ್ಕ ಮೇಟಿ, ಮಹಾದೇವಿ ಮೇಟಿ ತಮ್ಮ ತಂದೆ ಎಚ್.ವೈ.ಮೇಟಿ ನೆನೆದು ಚುನಾವಣೆ ಫಲಿತಾಂಶದ ಬಳಿಕ ಆನಂದ ಭಾಷ್ಪ ಹರಿಸಿದರು.
ಹುಟ್ಟೂರಿನಲ್ಲಿ ಸಂತಸ
ತ0ದೆ ಸಮಾದಿಗೆ ನಮನ...
ಶಾಸಕ ಉಮೇಶ ಮೇಟಿ ಚುನಾವಣೆ ಫಲಿತಾಂಶದ ಬಳಿಕ ಹುಟ್ಟೂರು ತಿಮ್ಮಾಪುರ ಗ್ರಾಮಕ್ಕೆ ತೆರಳಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು ನಾಯಕರು ಭವ್ಯ ಸ್ವಾಗತ ಕೋರಿದರು. ಟಗರು ಹಿಡಿದುಕೊಂಡು ಉಮೇಶ ಮೇಟಿ ಪರ ಜಯಕಾರ ಕೂಗಿದರು. ತಂದೆ ಎಚ್.ವೈ.ಮೇಟಿ ಸಮಾಽಗೆ ನಮನ ಸಲ್ಲಿಸಿದರು. ಮನೆಗೆ ಆಗಮಿಸಿದ ವೇಳೆ ತಾಯಿ ಲಕ್ಷಿ÷್ಮÃಬಾಯಿ ಅವರಿಗೆ ವಂದಿಸಿದರು. ಕುಟುಂಬಸ್ಥರು ಆರುತಿ ಮಾಡಿ ಸ್ವಾಗತಿಸಿದರು. ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಚಿಕ್ಕ ಮಕ್ಕಳು, ವೃದ್ಧರು, ಸಂಬAಽಕರು ಅಭಿನಂದನೆಗಳ ಮಹಾಪೂರವನ್ನೆ ಹರಿಸಿದರು.
ನಾಯಕರು ಆಗಮನ...
ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಽಸುತ್ತಿದ್ದಂತೆ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕರಾದ ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಬಿ.ಬಿ.ಚಿಮ್ಮನಕಟ್ಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಸಂತೋಷ ಹೊಕ್ರಾಣಿ, ಮಲ್ಲಿಕಾರ್ಜುನ ಚರಂತಿಮಠ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net