ಕಾಡುಮಲ್ಲೇಶ್ವರಸ್ವಾಮಿ ಬ್ರಹ್ಮರಥೋತ್ಸವ; ಭಕ್ತ ಸಾಗರದ ನಡುವೆ ಸಾಂಸ್ಕೃತಿಕ ಸಂಭ್ರಮ

ಮಹಾಶಿವರಾತ್ರಿ ಅಂಗವಾಗಿ ಮಲ್ಲೇಶ್ವರದ ಶ್ರೀಕಾಡು ಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಮಹಾಶಿವರಾತ್ರಿ ಅಂಗವಾಗಿ ಮಲ್ಲೇಶ್ವರದ ಶ್ರೀಕಾಡು ಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಕಾಡುಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ
  • ಸಹಸ್ರಾರು ಭಕ್ತರು ಭಕ್ತಿ ಸಾಗರದಲ್ಲಿ ಭಾಗಿ
  • ಜನಮನ ಸೆಳೆದ ಜಾನಪದ ಪ್ರದರ್ಶನ

ಬೆಂಗಳೂರು:ಮಲ್ಲೇಶ್ವರದಲ್ಲಿರುವಶ್ರೀಕಾಡುಮಲ್ಲೇಶ್ವರ ಸ್ವಾಮಿದೇವಾಲಯದಲ್ಲಿ ಮಹಾಶಿವರಾತ್ರಿಅಂಗವಾಗಿ ಸೋಮವಾರ ನಡೆದಬ್ರಹ್ಮರಥೋತ್ಸವದಲ್ಲಿ ಸಹಸ್ರಾರುಭಕ್ತರು ಭಕ್ತಿ ಸಾಗರದಲ್ಲಿಮಿಂದೆದ್ದರು.ಈ ವೇಳೆ ಏರ್ಪಡಿಸಿದ್ದಜಾನಪದ ಕಲಾ ಪ್ರದರ್ಶನಗಳು ನೋಡುಗರಕಣ್ಮನ ಸೆಳೆಯಿತು. ಕಾಡುಮಲ್ಲೇಶ್ವರಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂಬ್ರಹ್ಮರಥೋತ್ಸವಕ್ಕೆ ಚಾಲನೆನೀಡಿದರು. 50ಸಾವಿರಕ್ಕೂಹೆಚ್ಚು ಭಕ್ತರು ರಥೋತ್ಸವದಲ್ಲಿಪಾಲ್ಗೊಂಡಿದ್ದರು.ರಥ ಮತ್ತುದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರಮಾಡಲಾಗಿತ್ತು.ರಾಜ್ಯದ 15ಕ್ಕೂಹೆಚ್ಚು ವಾದ್ಯ,ಕಲಾ ತಂಡಗಳುಮತ್ತು ತಮಿಳುನಾಡಿನ ವಿಶೇಷ ತಮಟೆಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆವಿಶೇಷ ಮೆರುಗು ನೀಡಿದವು.ಬ್ರಹ್ಮರಥೋತ್ಸವದರಥವು ಭಕ್ತರ ಘೋಷಣೆಗಳ ನಡುವೆಮಲ್ಲೇಶ್ವರದ ಪ್ರಮುಖ ಬೀದಿಗಳಲ್ಲಿಭವ್ಯವಾಗಿ ಸಾಗಿತು.

ರಥೋತ್ಸವದವೇಳೆ ಭಕ್ತರಿಗೆ ಪ್ರಸಾದ ವಿತರಣೆಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನುಏರ್ಪಡಿಸಲಾಗಿತ್ತು.ಮಹಾಶಿವರಾತ್ರಿಪ್ರಯುಕ್ತ ಎರಡು ದಿನಗಳ ಕಾಲ ವಿಶೇಷಪೂಜೆ, ರುದ್ರಾಭಿಷೇಕ,ಅಲಂಕಾರ,ಶಿವನಾಮ ಸಂಕೀರ್ತನೆ,ಭಜನೆ ಮತ್ತುಧಾರ್ಮಿಕ ವಿಧಿವಿಧಾನಗಳು ನಡೆಯಿತು.ಮಕ್ಕಳಿಂದಶಿವಪಾರ್ವತಿ ವೇಷಧಾರಣೆ,ಸಾಂಸ್ಕೃತಿಕಕಾರ್ಯಕ್ರಮಗಳು,ಧಾರ್ಮಿಕ ಜಾಗೃತಿಕಾರ್ಯಕ್ರಮಗಳು ಹಾಗೂ ಭಕ್ತರಿಗೆಉಚಿತ ಕುಡಿಯುವ ನೀರು,ಆರೋಗ್ಯ ತಪಾಸಣೆಸೇರಿದಂತೆ ಮೂಲ ಸೌಲಭ್ಯಗಳನ್ನುಕಲ್ಪಿಸಲಾಗಿತ್ತು.

ಕಾರ್ಯಕ್ರಮದಲ್ಲಿವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್,ಸಮಾಜ ಸೇವಕರಾದಅನೂಪ್ ಅಯ್ಯಂಗಾರ್,ಪ್ಯಾಲೇಸ್ಗುಟ್ಟಹಳ್ಳಿಯ ಚಂದ್ರಶೇಖರ್ನಾಯ್ಡು. ಕಾಡುಮಲ್ಲೇಶ್ವರ ಬಳಗದ ಪದಾಧಿಕಾರಿಗಳುಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net