ದಸಂಸ ಸಂಚಾಲಕರಾಗಿ ಕಡಬ ಶಂಕರ್​ ಪುನರಾಯ್ಕೆ Re-election

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗುಬ್ಬಿ ತಾRe-electionಲೂಕು ಘಟಕದ ನೂತನ ಸಂಚಾಲಕರಾಗಿ ಕಡಬ ಶಂಕರ್​ ಅವರನ್ನು ಪುನರಾಯ್ಕೆ ಮಾಡಲಾಯಿತು. ಮಾದಲಪುರ ಲೋಕೇಶ್​, ಬಸವರಾಜು, ನಟರಾಜು, ಅದಲಗೆರೆ ಈಶ್ವರಯ್ಯ, ಕಲ್ಲೂರು ರವಿಕುಮಾರ್​, ದಲಿತ್​ ಗಂಗಣ್ಣ  ಇದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗುಬ್ಬಿ ತಾRe-electionಲೂಕು ಘಟಕದ ನೂತನ ಸಂಚಾಲಕರಾಗಿ ಕಡಬ ಶಂಕರ್​ ಅವರನ್ನು ಪುನರಾಯ್ಕೆ ಮಾಡಲಾಯಿತು. ಮಾದಲಪುರ ಲೋಕೇಶ್​, ಬಸವರಾಜು, ನಟರಾಜು, ಅದಲಗೆರೆ ಈಶ್ವರಯ್ಯ, ಕಲ್ಲೂರು ರವಿಕುಮಾರ್​, ದಲಿತ್​ ಗಂಗಣ್ಣ ಇದ್ದರು.
Published on
ಗುಬ್ಬಿ :ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಘಟಕದ ನೂತನ ಸಂಚಾಲಕರಾಗಿ ಕಡಬ ಶಂಕರ್​ ಅವರನ್ನು ಪುನರಾಯ್ಕೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್​ ರಘು ಅವರ ನೇತೃತ್ವದಲ್ಲಿ ಆಯೋಜಿಸಿದ್ದ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ನಾನು ದಲಿತರ, ಶೋಷಿತರ ಪರ ಧ್ವನಿಯಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. Re-election
ನನ್ನ ಕಾರ್ಯವೈಖರಿ ಮೆಚ್ಚಿ ಮತ್ತೊಮ್ಮೆ ಪುನರಾಯ್ಕೆ ಮಾಡಿದ್ದಾರೆ. ಸಂಘವನ್ನು ತಳಮಟ್ಟದಲ್ಲಿ ಸಂಘಟಿಸಿ ಶೋಷಿತರ ಸಮಸ್ಯೆಗಳಿಗೆ ಧ್ವನಿ ಆಗಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸ ಪ್ರಾಮಾಣಿಕತೆಯಿಂದ ಮಾಡುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್​ ರಘು ಮಾತನಾಡಿ, ಜಿಲ್ಲಾದ್ಯಂತ ಪ್ರತಿ ತಾಲೂಕು ಘಟಕಗಳ ಮರು ರಚನೆ ಮಾಡಲಾಗುತ್ತಿದೆ. ಸರ್ವಾನುಮತ ರ್ನಿಣಯದಂತೆ ಶಂಕರ್​ ಅವರ ಆಯ್ಕೆ ಸಂಘಟನೆಗೆ ಶಕ್ತಿ ಹೆಚ್ಚಿಸುವ ವಿಶ್ವಾಸವಿದೆ ಎಂದರು.
ಜಿಪಂ ಮಾಜಿ ಸದಸ್ಯ ಜಿ.ಎಸ್​.ಜಗನ್ನಾಥ್​ ಮಾತನಾಡಿ, ಹೋಬಳಿ ಮಟ್ಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಳಮಟ್ಟದಲ್ಲಿ ಸಂಘಟನೆ ಮಾಡಬೇಕು. ಆಗ ದೀನ ದಲಿತರಿಗೆ ನ್ಯಾಯ ಒದಗಿಸಲು ಸಾಧ್ಯ ಕರೆ ನೀಡಿದರು.
ಬುದ್ಧ ಬಸವ ಅಂಬೇಡ್ಕರ್​ ಸಮಿತಿ ರಾಜ್ಯಾಧ್ಯಕ್ಷ ಮಾದಲಪುರ ಲೋಕೇಶ್​, ಆದಿ ಜಾಂಬವ ಯುವ ಬ್ರಿಗೇಡ್​ನ ತಾಲೂಕು ಅಧ್ಯಕ್ಷ ಗುಬ್ಬಿ ಬಸವರಾಜು, ದಲಿತ ಮುಖಂಡ ಕುಂದರನಹಳ್ಳಿ ನಟರಾಜು, ಅದಲಗೆರೆ ಈಶ್ವರಯ್ಯ, ಕಲ್ಲೂರು ರವಿಕುಮಾರ್​, ದಲಿತ್​ ಗಂಗಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net