ಜೂ.20ರಂದು ಬೆಳಗ್ಗೆ 8 ಗಂಟೆಗೆ ಹನುಮಾನ ದೇವರಿಗೆ ಅಭಿಷೇಕ, ಪವಮಾನ ಹೋಮ, ಉಡಿ ತುಂಬುವ ಕಾರ್ಯಕ್ರಮ, ಮಹಾಪ್ರಸಾದ ಇರಲಿದೆ. ಬೆಳಗ್ಗೆ 11 ಗಂಟೆಗೆ ಡಾ.ಮಹೇಶ ಬೆಲ್ಲದ ಅವರಿಗೆ ಸನ್ಮಾನ ಜರುಗಲಿದ್ದು, ಕಬ್ಬೂರಿನ ಗೌರಿಶಂಕರಮಠದ ಪೀಠಾಧ್ಯಕ್ಷ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಹಾಗೂ ಮುಮ್ಮೆಟಗುಡ್ಡದ ಬನಸಿದ್ಧೇಶ್ವರ ಸಿದ್ಧಾಶ್ರಮದ ಉತ್ತರಾಧಿಕಾರಿ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸುವರು. ಮಿಲನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಸುರೇಶ ಬೆಲ್ಲದ, ಮಹಾಲಿಂಗ ಹಂಜಿ, ಡಾ.ಎಂ.ಬಿ.ಕುಂಬಾರ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕುಂಭಮೆರವಣಿಗೆ ಹಾಗೂ ವಾದ್ಯಮೇಳದೊಂದಿಗೆ ಮಾರುತಿ ದೇವರ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನ ತಲುಪಲಿದೆ. ಜೂ.21ರಂದು ಬೆಳಗ್ಗೆ 9 ಗಂಟೆಗೆ ಜೋಡು ಕುದುರೆ ಗಾಡಿ ಶರ್ಯತ್ತು, ಕುದುರೆ ಓಡಿಸುವ ಶರ್ಯತ್ತು, ನಿಧಾನವಾಗಿ ಬೈಕ್ ಓಡಿಸುವ ಸ್ಪರ್ಧೆ ಜರುಗಲಿದೆ. ಜೂ.22ರಂದು ತುರ್ಸಾತುರ್ಸಿ ಚೌಡಕಿ ಪದಗಳ ಸ್ಪರ್ಧೆ ಜರುಗಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.