ಚಂದಾಪುರ ಪುರಸಭೆಗೆ ಜ್ಯೋತಿ ಅಧ್ಯೆಕ್ಷೆ Municipality

ಚಂದಾಪುರ ಪುರಸಭೆಗೆ ಜ್ಯೋತಿ ಅಧ್ಯೆಕ್ಷೆ Municipality
ಚಂದಾಪುರ ಪುರಸಭೆಗೆ ಜ್ಯೋತಿ ಅಧ್ಯೆಕ್ಷೆ Municipality
Published on
ಆನೇಕಲ್​: ತಾಲೂಕಿನ ಚಂದಾಪುರ ಪುರಸಭೆಗೆ ನೂತನ ಅಧ್ಯೆಯಾಗಿ ಜ್ಯೋತಿ ಜಗದೀಶ್​ ಆಚಾರಿ ಅವಿರೋಧ ಆಯ್ಕೆಯಾಗಿದ್ದಾರೆ.Municipality
ಬಿಜೆಪಿ ಮಂಡಲ ಅಧ್ಯಕ್ಷ ಎಸ್​.ಆರ್​.ಟಿ.ಅಶೋಕ್​ ರೆಡ್ಡಿ ಮಾತನಾಡಿ, ಶಿಸ್ತಿನ ಪಕ್ಷವಾಗಿರುವ ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಹಂತ ಹಂತವಾಗಿ ಎಲ್ಲ ಕಾರ್ಯಕರ್ತರಿಗೆ ಅವಕಾಶ ದೊರಕಿಸಿಕೊಡಲಾಗುತ್ತಿದೆ ಎಂದರು. 
ನೂತನ ಅಧ್ಯಕ್ಷೆ ಜ್ಯೋತಿ ಜಗದೀಶ್​ ಮಾತನಾಡಿ, ಚಂದಾಪುರ ಪುರಸಭೆಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುರಸಭೆ ವ್ಯಾಪ್ತಿಯಲ್ಲಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.
ವೇಣು, ಪುರಸಭೆ ಮಾಜಿ ಅಧ್ಯಕ್ಷೆ ಶಾರದಾ ವರದರಾಜು, ಸದಸ್ಯರಾದ ಸೋಮಶೇಖರ್​ ರೆಡ್ಡಿ, ಮುರಳಿ, ವೆಂಕಟಸ್ವಾಮಿ, ಕೃಷ್ಣರೆಡ್ಡಿ, ಸೌಮ್ಯಾ, ಸುಧಾಕರ್​ ರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net