ಕಟಗೇರಿಯಲ್ಲಿ ಹಾಲೋಕುಳಿ ಸಂಭ್ರಮ

ಕಟಗೇರಿ ಗ್ರಾಮದಲ್ಲಿ ಹನುಮ ದೇವರ ಜಾತ್ರೆ ನಿಮಿತ್ತ ಹಾಲೋಕುಳಿ ಕಾರ್ಯಕ್ರಮ ಜರುಗಿತು. ಅಜಿತ ಪಡೋಲಕರ, ಸಿದ್ದು ಬೆಳಗಲಿ, ರಾವಸಾಹೇಬ ಕಳ್ಳಿ, ಮುತ್ತು ಐನಾಪುರ, ವಿಜಯ ಕಳ್ಳಿ, ಗಂಗಪ್ಪ ಸನದಿ ಇತರರು ಇದ್ದರು.
ಕಟಗೇರಿ ಗ್ರಾಮದಲ್ಲಿ ಹನುಮ ದೇವರ ಜಾತ್ರೆ ನಿಮಿತ್ತ ಹಾಲೋಕುಳಿ ಕಾರ್ಯಕ್ರಮ ಜರುಗಿತು. ಅಜಿತ ಪಡೋಲಕರ, ಸಿದ್ದು ಬೆಳಗಲಿ, ರಾವಸಾಹೇಬ ಕಳ್ಳಿ, ಮುತ್ತು ಐನಾಪುರ, ವಿಜಯ ಕಳ್ಳಿ, ಗಂಗಪ್ಪ ಸನದಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಅಥಣಿ ಗ್ರಾಮೀಣ
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಹನುಮ ದೇವರ ಜಾತ್ರೆ ನಿಮಿತ್ತ ಬುಧವಾರ ಗ್ರಾಮಸ್ಥರು ಸಂಭ್ರಮದಿಂದ ಹಾಲೋಕುಳಿ ಆಚರಿಸಿದರು.
ಬೆಳಗ್ಗೆ ಹನುಮ ದೇವರ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿದರು. ಗ್ರಾಮಸ್ಥರು ನೈವೇದ್ಯ ಅರ್ಪಿಸಿ ದರ್ಶನ ಪಡೆದು ಹರಕೆ ತಿರಿಸಿದರು. ಬಳಿಕ ಹನುಮ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಗ್ರಾಮದ ಎಲ್ಲ ಬಡಾವಣೆ ಹಾಗೂ ಓಕುಳಿ ಕಂಬ ಸುತ್ತುವರಿದು ದೇವಸ್ಥಾನ ತಲುಪಿದರು.
ಮಧ್ಯಾಹ್ನ ಹಾಲೋಕುಳಿ ಕಂಬಕ್ಕೆ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಅಜಿತ ಪಡೋಲಕರ, ಸಿದ್ದು ಬೆಳಗಲಿ, ರಾವಸಾಹೇಬ ಕಳ್ಳಿ, ಮುತ್ತು ಐನಾಪುರ, ವಿಜಯ ಕಳ್ಳಿ ಹಾಗೂ ಗಂಗಪ್ಪ ಸನದಿ ಕಂಬ ಹತ್ತುವ ಕಾರ್ಯಕ್ಕೆ ಮುಂದಾದರು. ಅವರು ಮೇಲೆ ಹತ್ತದಂತೆ ಗ್ರಾಮಸ್ಥರು ನೀರು ಎರಚಿ ಸಂಭ್ರಮಿಸಿದರು.
ಬಸಪ್ಪ ಮಗದುಮ್ಮ, ಗುರುಪಾದ ಸವದಿ, ಅಶೋಕ ಮಗದುಮ್ಮ, ಬಸಪ್ಪ ಗಣಿ, ತುಕ್ಕಪ್ಪ ಪೂಜಾರಿ, ಲಕ್ಕಪ್ಪ ಮೂಡಸಿ, ಪಂಡಿತಗೌಡ ಪಾಟೀಲ, ಬಾಪು ಗಸ್ತಿ, ಮಲ್ಲಪ್ಪ ಕಳ್ಳಿ, ರಾಚಯ್ಯ ಮಠದ, ಮಲ್ಲಯ್ಯ ಮಠಪತಿ, ಸುರೇಶ ಕನಾಳ, ಮುರಿಗೆಪ್ಪ ಚಮಕೇರಿ, ತುಕಾರಾಂ ಶಿಂಧೆ, ಮಲ್ಲಪ್ಪ ಕಾಂಬಳೆ, ಶಂಕರ ಭಜಂತ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net