ಪತ್ರಕರ್ತರು ವೃತ್ತಿ ಧರ್ಮಕ್ಕೆ ಒತ್ತು ನೀಡಿ

ಯಾದಗಿರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ವೆಂಕಟಸಿAಗ್, ಭವಾನಿಸಿಂಗ್ ಠಾಕೂರ, ದೇವೇಂದ್ರಪ್ಪ ಕಪನೂರ, ಮಲ್ಲಪ್ಪ ಸಂಕಿನ್, ಡಾ.ಸಿದ್ದರಾಜ್‌ರಡ್ಡಿ ಇತರರಿದ್ದರು.
ಯಾದಗಿರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ವೆಂಕಟಸಿAಗ್, ಭವಾನಿಸಿಂಗ್ ಠಾಕೂರ, ದೇವೇಂದ್ರಪ್ಪ ಕಪನೂರ, ಮಲ್ಲಪ್ಪ ಸಂಕಿನ್, ಡಾ.ಸಿದ್ದರಾಜ್‌ರಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಶಿವಾನಂದ ತಗಡೂರು ಸಲಹೆ
  • ಯಾದಗಿರಿಯಲ್ಲಿ ಪತ್ರಿಕಾ ದಿನಾಚರಣೆ
ಯಾದಗಿರಿ: ಪತ್ರಿಕೋದ್ಯಮದಲ್ಲಿ ಎಷ್ಟೇ ಟೀಕೆ ಬಂದರೂ ಸಹ ಪತ್ರಕರ್ತರು ವೃತ್ತಿ ಧರ್ಮಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಜಿ¯್ಲÁ ಕಾರ್ಯನಿರತ ಪತ್ರಕರ್ತರ ಸಂಘದಿAದ ಜಿ¯್ಲÁ ಪತ್ರಿಕಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಜಿ¯್ಲÁ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಪತ್ರಕರ್ತರು ವೃತ್ತಿ ಧರ್ಮವನ್ನು ಕಾಪಾಡಲು ಮುಂದಾಗಬೇಕಿದೆ. ಅಂದಾಗಲೇ ನೈಜ ಪತ್ರಿಕೋದ್ಯಮ ಉಳಿಯಲು ಸಾಧ್ಯ ಎಂದರು.
ಜಿ¯್ಲೆಯ ಎಲ್ಲ ತಾಲೂಕುಗಳಲ್ಲಿ ಕೇಂದ್ರಗಳಲ್ಲಿ ಭವನ ನಿರ್ಮಾಣ ಮಾಡಬೇಕು. ಇದರಿಂದಾಗಿ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಯಾರೂ ಮರೆಯಬಾರದು. ಸಂಘದ ವಿರುದ್ಧ ನಡವಳಿಕೆ ಮತ್ತು ಚಟುವಟಿಕೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ಸಂಘದ ಜಿ¯್ಲÁಧ್ಯಕ್ಷ ಮಲ್ಲಪ್ಪ ಸಂಕೀನ ಅವರು ಸವಾಲುಗಳ ಮಧ್ಯೆ ಈಜುತ್ತಿz್ದÁರೆ. ಎಲ್ಲವೂ ಸರಿ ಇದ್ದಾಗ ಅಧ್ಯಕ್ಷರಾಗುವುದು ಸುಲಭ, ಆದರೆ ಸವಾಲುಗಳ ನಡುವೆ ಕೆಲಸ ಮಾಡುವುದು ಸುಲಭವಲ್ಲ ಎಂದರು. ಪ್ರಮುಖವಾಗಿ ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕಿದೆ. ನೈಜ ಪತ್ರಕರ್ತರು ಕಳೆದು ಹೋಗದಂತೆ ಎಚ್ಚರಿಕೆ ವಹಿಸುವುದು ಬಹಳ ಅಗತ್ಯ ಎಂದರು.
ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟಸಿAಗ್ ಮಾತನಾಡಿ, ಪತ್ರಿಕಾ ವೃತ್ತಿ ಆಯ್ಕೆ ಮಾಡಿಕೊಂಡು ಬಂದಿದ್ದೇವೆ. ವೃತ್ತಿಯನ್ನು ಕಾಪಾಡಿಕೊಂಡು ಹೋಗಬೇಕಿದೆ. ಆಡಳಿತ, ರಾಜಕೀಯ ರಂಗ ಸೇರಿ ಎಲ್ಲ ರಂಗಗಳು ಕಳಂಕಿತಗೊAಡಿರುವ ಈಗಿನ ಸಂದರ್ಭದಲ್ಲಿ ಬಹಳ ಜಾಗೃತಿಯಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ನೈಜ ಪತ್ರಕರ್ತರು ಕಳೆದು ಹೋದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಇದರಿಂದ ಸಮಾಜಕ್ಕೆ ಮಾರಕವಾಗಿದೆ. ಸಂಘದ ಕೆಲಸ ಪ್ರಮಾಣಿಕವಾಗಿ ಕೆಲಸ ಮಾಡಿದ್ದರಿಂದ ರಾಜ್ಯದಲ್ಲಿ ಪರಿಚಯವಾಗಿ ಸಾಂವಿಧಾನಿಕ ಹುz್ದÉ ಪಡೆಯಲು ನನ್ನಿಂದ ಸಾಧ್ಯವಾಗಿದೆ ಎಂದರು.
ಸAಘದ ಜಿ¯್ಲÁಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಸವಾಲುಗಳ ನಡುವೆ ಈಜಿಕೊಂಡು ಬಂದಿದ್ದು, ಇನ್ನೂ ಈಜುತ್ತಿದ್ದೇನೆ. ಮುಂದೆಯೂ ಕೂಡ ಈಜಿಕೊಂಡೇ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲು ಹೋರಾಡುತ್ತೇನೆ ಎಂದರು. ಇದೇ ವೇಳೆ ಪತ್ರಕರ್ತರು ಮತ್ತು ಸಂಘ-ಸAಸ್ಥೆಗಳ ಮುಖಂಡರು ಅಧ್ಯಕ್ಷ ಶಿವಾನಂದ ತಗಡೂರು ಅವರನ್ನು ಸನ್ಮಾನಿಸಿದರು. ಕಲಬುರಗಿ ಜಿ¯್ಲÁ ಕಾರ್ಯನಿರತ ಪತ್ರಕರ್ತರ ಸಂಘದ ಜಿ¯್ಲÁಧ್ಯಕ್ಷ ಬಾಬುರಾವ್ ಯಡ್ರಾಮಿ, ಹಿರಿಯ ಪತ್ರಕರ್ತರಾದ ಭವಾನಿಸಿಂಗ್ ಠಾಕೂರು, ದೇವಿಂದ್ರಪ್ಪ ಕಪನೂರು ಇದ್ದರು.ಪತ್ರಕರ್ತ ಸಿದ್ಧರಾಜರೆಡ್ಡಿ ನಿರೂಪಿಸಿ, ವಂದಿಸಿದರು.
"

ಪಿಡಿಎ-ï, ನಕಲಿ ಪತ್ರಕರ್ತರು ಹೆಚ್ಚಾಗುತ್ತಿರುವುದು ಅಪಾಯಕಾರಿ ಸಂಗತಿ. ನೈಜ ಪತ್ರಕರ್ತರನ್ನು ಗುರುತಿಸಿ ಚಟುವಟಿಕೆಯಿಂದರಲು ರಾಜ್ಯ ಸಂಘದಿAದ ಕಾರ್ಯಕ್ರಮಗಳು ನಡೆಸಬೇಕು. ತನಿಖಾ ಪತ್ರಿಕೋದ್ಯಮಕ್ಕೆ ಮಾಹಿತಿ ಆಯೋಗ ಪ್ರಮುಖ ಅಸöವಾಗಿದ್ದು, ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು.| ಬಿ.ವೆಂಕಟಸಿAಗ್ ಆಯುಕ್ತ, ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠ


ಸಂಘ ವಿರೋಽಗಳ ಮೇಲೆ ಕ್ರಮ

ಸಂಘದ ಪದಾಽಕಾರಿಗಳಾಗಿ ಕೆಲಸ ಮಾಡಲು ಆಗದಿದ್ದವರು ರಾಜೀನಾಮೆ ಕೊಟ್ಟು ಹೋಗಿ ಏನೂ ಬೇಜಾರಿಲ್ಲ. ಸದಸ್ಯರಾಗಲು ಆಸಕ್ತಿಯಿಂದ ಬಂದವರು ನಂತರ ಬೇಜವಾಬ್ದಾರಿ ತೋರುವುದು ಸರಿಯಲ್ಲ. ಪತ್ರಕರ್ತರಲ್ಲದ ಹಾಗೂ ಸಂಘದ ವಿರುದ್ಧ ನಡವಳಿಕೆ ಮತ್ತು ಚಟುವಟಿಕೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಅಧ್ಯಕ್ಷ ಶಿವಾನಂದ ತಗಡೂರು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net