ರಾಮದುರ್ಗ ನಗರದ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಕಾಶ ಗಾಯಕವಾಡ, ಚಿದಂಬರ ಮಡಿವಾಳರ, ರಮೇಶ ರಾಯಬಾಗ, ಬಸವರಾಜ ಅಳಗುಂಡಿ, ಭರತಕುಮಾರ, ವಿಜಯ ಶೆಟ್ಟಿ, ಎ.ಬಿ.ವಗ್ಗರ ಇತರರಿದ್ದರು..
ಪತ್ರಕರ್ತರು ಸಮಾಜದ ಅಂಕು&ಡೊಂಕು ತಿದ್ದುವ ಕಾರ್ಯ ಮಾಡುತ್ತಾರೆ. ದಲಿತರು ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯಕೊಡಿಸುವ ಜವಾಬ್ದಾರಿ ನಿರ್ವಹಿಸುವುದು ಶ್ಲಾನೀಯ ಎಂದು ತಹಸೀಲ್ದಾರ್ ಪ್ರಕಾಶ ಗಾಯಕವಾಡ ಹೇಳಿದರು.
ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನಿಪ ಧ್ವನಿ ಸಂಟನೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸವಾಲುಗಳನ್ನು ಎದುರಿಸುವ ವೃತ್ತಿ ಆಯ್ಕೆ ಮಾಡಿಕೊಂಡಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಹರಸಿದರು.
ಡಿವೈಎಸ್ಪಿ ಚಿದಂಬರ ಮಡಿವಾಳರ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರಿಗೆ ಗೌರಯುತ ಸ್ಥಾನ ಇದೆ. ಸಾಮಾಜಿಕ ಹೊಣೆಗಾರಿಕೆ ಹಾಗೂ ಕಳಕಳಿ ರೂಢಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಕಾರ್ಯ ಅನುಕರಣೀಯ ಎಂದರು.
ಕಾನಿಪ ಧ್ವನಿ ಸಂದ ತಾಲೂಕಾಧ್ಯ ರಮೇಶ ರಾಯಬಾಗ ಅಧ್ಯತೆ ವಹಿಸಿ ಮಾತನಾಡಿದರು. ಹಿರಿಯ ಪತ್ರಕರ್ತ ಎಸ್.ಎಸ್.ಪಾಟೀಲ ಅಥಿತಿ ಉಪನ್ಯಾಸ ನೀಡಿದರು. ವೀರೇಶ ಬಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಬಸವರಾಜ ಅಳಗುಂಡಿ, ಭರತಕುಮಾರ, ಉದ್ಯಮಿ ವಿಜಯ ಶೆಟ್ಟಿ, ಉಪನ್ಯಾಸಕ ಎ.ಬಿ.ವಗ್ಗರ ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಇತರರಿದ್ದರು. ವಿನಾಯಕ ಹೊಸಮನಿ ಸ್ವಾಗತಿಸಿದರು. ಲಕ್ಷಿ$್ಮ ಮಡ್ಲಿ ನಿರೂಪಿಸಿದರು. ಮಾರುತಿ ಸೂಳಿಕೇರಿ ವಂದಿಸಿದರು.